ಹೂಸ್ಟನ್ ಪುತ್ತಿಗೆ ಮಠದಲ್ಲಿ ಭಾರತ ರಾಜ್ಯಗಳ ಸಂಸ್ಥಾಪನಾ ದಿನ ಸಂಭ್ರಮ

| Published : Nov 13 2024, 12:07 AM IST

ಹೂಸ್ಟನ್ ಪುತ್ತಿಗೆ ಮಠದಲ್ಲಿ ಭಾರತ ರಾಜ್ಯಗಳ ಸಂಸ್ಥಾಪನಾ ದಿನ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಅಮೆರಿಕದಲ್ಲಿರುವ ಭಾರತದ ರಾಯಭಾರಿ ಕಚೇರಿಯ ವತಿಯಿಂದ ಭಾರತದ ರಾಜ್ಯಗಳ ಸಂಸ್ಥಾಪನಾ ದಿನವನ್ನು ಹೂಸ್ಟನ್‌ನಲ್ಲಿರುವ ಪುತ್ತಿಗೆ ಮಠದ ಶ್ರೀ ಕೃಷ್ಣಬೃಂದಾವನ ಶಾಖೆಯಲ್ಲಿ ನ.9ರಂದು ಸಂಭ್ರಮದಿಂದ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಅಮೆರಿಕದಲ್ಲಿರುವ ಭಾರತದ ರಾಯಭಾರಿ ಕಚೇರಿಯ ವತಿಯಿಂದ ಭಾರತದ ರಾಜ್ಯಗಳ ಸಂಸ್ಥಾಪನಾ ದಿನವನ್ನು ಹೂಸ್ಟನ್‌ನಲ್ಲಿರುವ ಪುತ್ತಿಗೆ ಮಠದ ಶ್ರೀ ಕೃಷ್ಣಬೃಂದಾವನ ಶಾಖೆಯಲ್ಲಿ ನ.9ರಂದು ಸಂಭ್ರಮದಿಂದ ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಕರ್ನಾಟಕ, ಪಂಜಾಬ್, ಛತ್ತೀಸ್ಗಡ, ಕೇರಳ, ಹರಿಯಾಣ, ಜಾರ್ಖಂಡ್, ಮಧ್ಯಪ್ರದೇಶ, ಆಂಧ್ರ ಪ್ರದೇಶ ಮುಂತಾದ ರಾಜ್ಯಗಳ ಅನಿವಾಸಿ ಭಾರತೀಯರು ಉತ್ಸಾಹದಿಂದ ಭಾಗವಹಿಸಿದರು.ರಾಯಭಾರಿ ಕಚೇರಿಯ ಕೌನ್ಸಲ್ ಜನರಲ್ ಶ್ರೀ ಮಂಜುನಾಥ್ ಚನ್ನೀರಪ್ಪ ಹಾಗೂ ಮಠದ ಪ್ರಧಾನ ಅರ್ಚಕ ರಘುಪತಿ ಭಟ್ ಅವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.ನಂತರ ರಘುಪತಿ ಭಟ್ ಅವರು ವೇದಘೋಷಗಳ ಮೂಲಕ ಮಂಜುನಾಥ್ ಚನ್ನೀರಪ್ಪ ಅವರಿಗೆ ಗೌರವಾರ್ಪಣೆ ಸಲ್ಲಿಸಿ ಎಲ್ಲರನ್ನೂ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.ಇದೇ ಸಂದರ್ಭದಲ್ಲಿ ಉಪ ಕೌನ್ಸಲ್ ಜನರಲ್ ಪ್ರಶಾಂತ್ ಅವರು ಭಾರತದ ಅನೇಕ ರಾಜ್ಯಗಳ ಸಾಧನೆಯ ವಿಚಾರಗಳನ್ನು ಪ್ರಸ್ತುತಪಡಿಸಿದರು ಮತ್ತು ಗಣ್ಯ ಆನಿವಾಸಿ ಭಾರತೀಯರುಗಳನ್ನು ಸಭೆಗೆ ವಿಶೇಷ ಪರಿಚಯ ಮಾಡಿಸಿದರು. ಅಚಲೇಶ್ ಜೀ ಮತ್ತು ಯಶ್ ಹವಳಿಮನೆದೇವರು ಉಪಸ್ಥಿತರಿದ್ದರು. ನಂದ ತಿವಾರಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ನಂತರ ವಿವಿಧ ರಾಜ್ಯದ ಕಲಾವಿದರು ಅವರವರ ರಾಜ್ಯದ ವಿಭಿನ್ನ ಸಂಸ್ಕೃತಿ ಪರಂಪರೆ ಕಲೆ ಮತ್ತು ಅಭಿರುಚಿಗಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸುಂದರವಾಗಿ ಅಭಿವ್ಯಕ್ತ ಪಡಿಸಿದರು.