ಭಾರತದ ಧಾರ್ಮಿಕ ರಾಯಭಾರಿ ಸಂತ ಸೇವಾಲಾಲ್ ಮಹಾರಾಜರು

| Published : Feb 16 2024, 01:50 AM IST

ಸಾರಾಂಶ

ಕಾಲಗತಿಯಲ್ಲಿ ಮಹಾಸಾಧಕರಾಗಿ, ವೀರ ವೈರಾಗಿಯಾಗಿ, ಜಗನ್ಮಾತೆಯ ಭಕ್ತರಾಗಿ, ಇಡೀ ಸಮುದಾಯದಲ್ಲಿ ದೈವ ಸ್ವರೂಪಿಯಾಗಿ ನೆಲೆ ನಿಂತವರು ಸಂತ ಸೇವಾಲಾಲರು.

ಕನ್ನಡಪ್ರಭ ವಾರ್ತೆ ಯಾದಗಿರಿ

ನಗರದ ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ಜಿಲ್ಲಾ ಕಾರ್ಯಾಲಯದಲ್ಲಿ ಗುರುವಾರ ಬಾಲ ಬ್ರಹ್ಮಚಾರಿ, ತಪಸ್ವಿ ಸಂತ ಶ್ರೀ ಸೇವಾಲಾಲ್ ಮಹಾರಾಜರವರ 285ನೇ ಜಯಂತಿಯನ್ನು ಆಚರಿಸಲಾಯಿತು.

ಕರವೇ ಜಿಲ್ಲಾಧ್ಯಕ್ಷರಾದ ಟಿ. ಎನ್. ಭೀಮುನಾಯಕ ಮಾತನಾಡಿ, ಕಾಲಗತಿಯಲ್ಲಿ ಮಹಾಸಾಧಕರಾಗಿ, ವೀರ ವೈರಾಗಿಯಾಗಿ, ಜಗನ್ಮಾತೆಯ ಭಕ್ತರಾಗಿ, ಇಡೀ ಸಮುದಾಯದಲ್ಲಿ ದೈವ ಸ್ವರೂಪಿಯಾಗಿ ನೆಲೆ ನಿಂತವರು ಸಂತ ಸೇವಾಲಾಲರು.

ಸೇವಾಲಾಲರು ಆಧ್ಯಾತ್ಮದ ಮೂಲಕವಾಗಿ ಉಪದೇಶಗಳನ್ನು ನೀಡಿ, ಸನ್ಮಾರ್ಗದತ್ತ ಕೊಂಡೊಯ್ದವರು. ತಮ್ಮ ಬುಡಕಟ್ಟಿನ ಜನಯಲ್ಲಿ ಧೈರ್ಯ, ಸಾಹಸ, ಆತ್ಮಸ್ಥೈರ್ಯ ಮತ್ತು ಆತ್ಮಾಭಿಮಾನವನ್ನು ಮೂಡಿಸಿದವರು. ಸೇವಲಾಲರ ಬೋಧನೆ ಮತ್ತು ಚಿಂತನೆಗಳು ಬಂಜಾರ ಜನಾಂಗದಲ್ಲಿ ಇಂದು ಏಕತೆಯನ್ನುಂಟು ಮಾಡಿರುವುದು ಸ್ಪಷ್ಟ.

ಇಂದು ಬಂಜಾರರು ಸಾಂಸ್ಕೃತಿಕ ನೆಲೆಯಲ್ಲಿ ತನ್ನ ಅಸ್ಮಿತೆಯನ್ನು ಗುರುತಿಸಿಕೊಳ್ಳಲು ಈ ಮಹಾನುಭಾವರ ಸತ್ಕಾರ್ಯಗಳೇ ಕಾರಣ ಎಂದು ಹೇಳಿದ ಭೀಮುನಾಯಕ್‌, ಬಂಜಾರಾ ಸಮುದಾಯದಲ್ಲಿ ಸೇವಾಲಾಲರು ವೀರನಾಗಿ, ವಿರಾಗಿಯಾಗಿ, ಒಬ್ಬ ಶ್ರೇಷ್ಠ ದಾರ್ಶನಿಕರಾಗಿ ಮತ್ತು ಸಾಂಸ್ಕೃತಿಕ ನಾಯಕನಾಗಿ ಚಿರಸ್ಥಾಯಿಯಾಗಿದ್ದಾರೆ ಎಂದರು.

ಕರವೇ ಮುಖಂಡರಾದ ಮಲ್ಲು ಮಾಳಿಕೇರಿ, ಅಂಬ್ರೇಶ ಹತ್ತಿಮನಿ, ವಿಶ್ವರಾಜ ಹೊನಗೇರಾ, ಅರ್ಜುನ್ ಪವಾರ, ಹಣಮಂತ ಖಾನಳ್ಳಿ, ಪಪ್ಪುಗೌಡ ಚಿನ್ನಾಕಾರ್, ಶರಣು ಸಾಹುಕಾರ ವಡ್ನಳ್ಳಿ, ಸಲೀಂ ಪಾಶಾ ಯರಗೋಳ, ಸುರೇಶ ಬೆಳಗುಂದಿ, ಮಹೇಶ ಠಾಣಗುಂದಿ, ಬಸವರಾಜ ಕಡ್ಡಿ, ರಮೇಶ.ಡಿ.ನಾಯಕ, ಹಣಮಂತ ದೊರೆ, ಸಾಬು ಗುಂಡಳ್ಳಿ ಮುಂತಾದವರು ಉಪಸ್ಥಿತರಿದ್ದರು.