ಸಾರಾಂಶ
ಇಂಡಿಕಾ ಕಲಾ ಬಳಗ ಪ್ರತಿವರ್ಷ ನೀಡುವ ಮೊಳಹಳ್ಳಿ ಹೆರಿಯ ನಾಯ್ಕ ಸ್ಮಾರಕ ಇಂಡಿಕಾ ಪುರಸ್ಕಾರವನ್ನು ಈ ಬಾರಿ ಕೋಟ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲಕ್ಕೆ ನೀಡಿ, ಅವುಗಳ ನಿರಂತರ ಸಮಾಜ ಸೇವೆಯನ್ನು ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಕೋಟ
ಇಲ್ಲಿನ ಮಣೂರು ಪಡುಕರೆ ಸರ್ಕಾರಿ ಸಂಯುಕ್ತ ಪ್ರೌಢಶಾಲಾ ವಠಾರದ ಗೀತಾನಂದ ರಂಗಮಂಟಪದಲ್ಲಿ ಇಂಡಿಕಾ ಕಲಾ ಬಳಗ ಇವರ ೧೫ನೇ ವರ್ಷದ ಸಂಭ್ರಮ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಬಳಗವು ಪ್ರತಿವರ್ಷ ನೀಡುವ ಮೊಳಹಳ್ಳಿ ಹೆರಿಯ ನಾಯ್ಕ ಸ್ಮಾರಕ ಇಂಡಿಕಾ ಪುರಸ್ಕಾರವನ್ನು ಈ ಬಾರಿ ಕೋಟ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲಕ್ಕೆ ನೀಡಿ, ಅವುಗಳ ನಿರಂತರ ಸಮಾಜ ಸೇವೆಯನ್ನು ಗೌರವಿಸಲಾಯಿತು. ಪುರಸ್ಕಾರವನ್ನು ಸಂಘದ ಅಧ್ಯಕ್ಷ ಮನೋಹರ್ ಪೂಜಾರಿ ಸ್ವೀಕರಿಸಿದರು.ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್, ಮನೋವೈದ್ಯ ಡಾ.ಪ್ರಕಾಶ್ ಸಿ ತೋಳಾರ್, ಉದ್ಯಮಿ ಬೀಜು ನಾಯರ್, ಸೋಮ ಬಂಗೇರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ಎಸ್. ನಾಯಕ, ಸಂಯುಕ್ತ ಪ್ರೌಢಶಾಲೆ ಮುಖ್ಯ ಶಿಕ್ಷಕ ವಿವೇಕಾನಂದ ವಿ.ಗಾವ್ಕಂರ್, ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಹಿರಿಯ ಕೃಷಿಕ ದಾರೋಜ್ಜಿ ಆನಂದ ಕಾಂಚನ್, ಮಾಜಿ ತಾ.ಪಂ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್, ಸಾಮಾಜಿಕ ಕಾರ್ಯಕರ್ತ ಡಾ. ದಿನೇಶ್ ಗಾಣಿಗ ಇದ್ದರು.