ಸಾರಾಂಶ
ಕೊನ್ಸೆಟಾ ಆಸ್ಪತ್ರೆಯ ಬಳಿ, ಪ್ರಸ್ತುತ ಸಂತೆ ನಡೆಯುವ ಮುಂಭಾಗದಲ್ಲಿರುವ ಸರ್ಕಾರಿ ಜಾಗದಲ್ಲಿ ಕ್ಯಾಂಟೀನ್ ಆರಂಭವಾಗಲಿದೆ. ಸದ್ಯಕ್ಕೆ ಗ್ರಾಮಕರಣಿಕರಾದ ಸುಜಿತ್ ಮತ್ತು ಸರ್ವೆ ಅಧಿಕಾರಿಗಳು ಸರ್ವೆ ಕಾರ್ಯ ಮುಗಿಸಿದ್ದು, ಒಂದೆರಡು ತಿಂಗಳಲ್ಲಿ ಕಿನ್ನಿಗೋಳಿಯ ಜನತೆಗೆ ಇಂದಿರಾ ಕ್ಯಾಂಟಿನ್ ಊಟ ಉಪಹಾರವನ್ನು ಸವಿಯಬಹುದಾಗಿದೆ.
ಕನ್ನಡಪ್ರಭ ವಾರ್ತೆ ಮೂಲ್ಕಿ
ಬಡವರು ಹಾಗೂ ಶ್ರಮಿಕರಿಗೆ ಊಟ, ಉಪಾಹಾರ ಪೂರೈಸುವ ಇಂದಿರಾ ಕ್ಯಾಂಟಿನ್ ಇದೀಗ ಕಿನ್ನಿಗೋಳಿಯಲ್ಲಿ ಪ್ರಾರಂಭವಾಗಲಿದೆ. ರಾಜ್ಯದಲ್ಲಿ ದಿರಾ ಕ್ಯಾಂಟೀನ್ ಗಾಗಿ 2023- 24ರ ಅವಧಿಯಲ್ಲಿ 100 ಕೋಟಿ ರು. ನೀಡಲಾಗುವುದು ಎಂದು ಸಿ.ಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ, ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲೂ ನೂತನ ಇಂದಿರಾ ಕ್ಯಾಂಟಿನ್ ಕಾರ್ಯಾರಂಭ ಮಾಡಲಿದೆ.ಬೆಳೆಯುತ್ತಿರುವ ಕಿನ್ನಿಗೋಳಿ ಪ್ರದೇಶಕ್ಕೆ ಇಂದಿರಾ ಕ್ಯಾಂಟಿನ್ ಅತ್ಯಗತ್ಯವಾಗಿದ್ದು, ಮಾರ್ಚ್ ಅಂತ್ಯದೊಳಗೆ ಪ್ರಾರಂಭವಾಗಲಿದೆ, ಅಧಿಕಾರಿಗಳು ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಆವರಣದೊಳಗೆ ಜಾಗ ಸೂಚಿಸಿದ್ದು, ಶಾಸಕ ಉಮಾನಾಥ ಕೋಟ್ಯಾನ್ ಮತ್ತು ಸಾರ್ವಜನಿಕರ ಅಪೇಕ್ಷೆಯಂತೆ ಬೇರೆಡೆ ಪ್ರಾರಂಭಿಸಲು ಜಮೀನು ಗುರುತಿಸಲಾಗಿದೆ. ಪಂಚಾಯಿತಿ ಆವರಣದೊಳಗೆ ಕ್ಯಾಂಟಿನ್ ಪ್ರಾರಂಭಿಸಿದರೆ ಸಾರ್ವಜನಿಕರಿಗೆ ಉಪಯೋಗ ಸಿಗದು ಎಂಬ ಕಾರಣಕ್ಕಾಗಿ ಕಿನ್ನಿಗೋಳಿ ಪೇಟೆ ಮತ್ತು ಜನಸಂದಣಿ ಇರುವ ಜಾಗದಲ್ಲಿ ಪ್ರಾರಂಭಿಸಲು ಒಂದೆರಡು ಜಾಗವನ್ನು ಸೂಚಿಸಲಾಗಿದೆ. ಕೊನ್ಸೆಟಾ ಆಸ್ಪತ್ರೆಯ ಬಳಿ, ಪ್ರಸ್ತುತ ಸಂತೆ ನಡೆಯುವ ಮುಂಭಾಗದಲ್ಲಿರುವ ಸರ್ಕಾರಿ ಜಾಗದಲ್ಲಿ ಕ್ಯಾಂಟೀನ್ ಆರಂಭವಾಗಲಿದೆ. ಸದ್ಯಕ್ಕೆ ಗ್ರಾಮಕರಣಿಕರಾದ ಸುಜಿತ್ ಮತ್ತು ಸರ್ವೆ ಅಧಿಕಾರಿಗಳು ಸರ್ವೆ ಕಾರ್ಯ ಮುಗಿಸಿದ್ದು, ಒಂದೆರಡು ತಿಂಗಳಲ್ಲಿ ಕಿನ್ನಿಗೋಳಿಯ ಜನತೆಗೆ ಇಂದಿರಾ ಕ್ಯಾಂಟಿನ್ ಊಟ ಉಪಹಾರವನ್ನು ಸವಿಯಬಹುದಾಗಿದೆ.;Resize=(128,128))
;Resize=(128,128))