ನಗರದ ಪ್ರತಿಷ್ಠಿತ ವಸತಿ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ಒಂದಾಗಿರುವ ಇಂದಿರಾ ನಗರ 12ನೇ ಮುಖ್ಯರಸ್ತೆಯ ಪಾದಚಾರಿ ಮಾರ್ಗ ಯುದ್ಧಪೀಡಿತ ದೇಶದಂತಿವೆ ಎಂದು ಕೆನಡಾ ದೇಶದ ಪ್ರಜೆ ಫ್ರೆಸನ್ ಎಂಬುವರು ಟೀಕಿಸಿದ್ದಾರೆ.

-ಕೆನಡಾ ಪ್ರಜೆಯಿಂದ ವಿಡಿಯೋ ವೈರಲ್ಕ್ಷುದ್ರಗ್ರಹವೊಂದು ಭೂಮಿಗೆ ಬಿದ್ದಾಗ

ಆಗುವ ಕುಳಿಯಂತೆ ಗುಂಡಿ ಇದೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಪ್ರತಿಷ್ಠಿತ ವಸತಿ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ಒಂದಾಗಿರುವ ಇಂದಿರಾ ನಗರ 12ನೇ ಮುಖ್ಯರಸ್ತೆಯ ಪಾದಚಾರಿ ಮಾರ್ಗ ಯುದ್ಧಪೀಡಿತ ದೇಶದಂತಿವೆ ಎಂದು ಕೆನಡಾ ದೇಶದ ಪ್ರಜೆ ಫ್ರೆಸನ್ ಎಂಬುವರು ಟೀಕಿಸಿದ್ದಾರೆ.

ಪಾದಚಾರಿ ಮಾರ್ಗದ ಅದ್ವಾನ ಸ್ಥಿತಿಯ ವಿಡಿಯೋವನ್ನು ಫ್ರೆಸನ್ ಅವರು ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದು ವೈರಲ್ ಆಗಿದೆ.

ಫುಟ್‌ಪಾತ್‌ನ ಅಲ್ಲಲ್ಲಿ ಬಿದ್ದಿರುವ ದೊಡ್ಡ ಗುಂಡಿಗಳ ಕುರಿತು, ‘ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸಿದಾಗ ಸೃಷ್ಟಿಯಾಗುವ ಕುಳಿಯಂತೆ ಈ ಗುಂಡಿ ಇದೆ. ಇದರಲ್ಲಿ ಜನರು ಈಗ ಕಸ ಸುರಿಯುತ್ತಿದ್ದಾರೆ. ನಗರದಲ್ಲಿ ತಂತ್ರಜ್ಞಾನ ಕಂಪನಿಗಳ ಸಿಇಒ, ಸಂಸ್ಥಾಪಕರನ್ನು ಭೇಟಿ ಮಾಡಲು ಹೊರ ದೇಶಗಳಿಂದ ಬೆಂಗಳೂರಿಗೆ ಬರುವವರಿಗೆ ಇಂತಹ ಕಳಪೆ ಮೂಲಸೌಕರ್ಯ ನೋಡಿ ನಿರಾಸೆ ಮತ್ತು ಬೇಸರವಾಗುತ್ತದೆ ಎಂದಿದ್ದಾರೆ.

ನೈಜತೆ ಅನಾವರಣ: ಇಂದಿರಾ ನಗರದ 12ನೇ ಮುಖ್ಯ ರಸ್ತೆ ಅಧ್ವಾನವಾಗಿದೆ. ಫುಟ್‌ಪಾತ್‌ನ ಅಲ್ಲಲ್ಲಿ ಬಿದ್ದಿರುವ ಅವಶೇಷಗಳು ಸಂಘರ್ಷದ ಪ್ರದೇಶದಂತೆ ಕಾಣಿಸುತ್ತವೆ. ಮರಗಳ ಬುಡಗಳು ಕಸದ ತೊಟ್ಟಿಗಳಾಗಿವೆ. ನಡೆದಾಡುವ ಸ್ಲ್ಯಾಬ್‌ಗಳು ಕಿತ್ತು ಹೋಗಿದ್ದು, ಕೆಲವು ಕಡೆ ಸ್ಲ್ಯಾಬ್ ಕಾಣೆಯಾಗಿವೆ. ಹಲವೆಡೆ ಗುಂಡಿಗಳು ಸೃಷ್ಟಿಯಾಗಿವೆ ಎಂದು ದೂರಿದ್ದಾರೆ.