ಸಾರಾಂಶ
ದಾಬಸ್‍ಪೇಟೆ: ಸೋಂಪುರ ಗ್ರಾಪಂ ಉಪಾಧ್ಯಕ್ಷೆ ಚಿಕ್ಕಮ್ಮ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದ್ರಮ್ಮ ಪರಮೇಶ್ ಅವಿರೋಧಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಮೇಶ್ ತಿಳಿಸಿದರು.
ದಾಬಸ್‍ಪೇಟೆ: ಸೋಂಪುರ ಗ್ರಾಪಂ ಉಪಾಧ್ಯಕ್ಷೆ ಚಿಕ್ಕಮ್ಮ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದ್ರಮ್ಮ ಪರಮೇಶ್ ಅವಿರೋಧಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಮೇಶ್ ತಿಳಿಸಿದರು.
ಉಪಾಧ್ಯಕ್ಷೆ ಇಂದ್ರಮ್ಮ ಪರಮೇಶ್ ಮಾತನಾಡಿ, ಎಲ್ಲಾ ಸದಸ್ಯರ ಬೆಂಬಲ, ಸಹಕಾರದಿಂದ ಉಪಾಧ್ಯಕ್ಷೆ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದು, ಎಲ್ಲಾ ಸದಸ್ಯರನ್ನು ಒಟ್ಟಿಗೆ ಕರೆದೊಯ್ಯುವ ಜೊತೆಗೆ ಮುಂದಿನ ದಿನಗಳಲ್ಲಿ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿಗೆ ಅಧ್ಯಕ್ಷರ ಜೊತೆಗೂಡಿ ಶ್ರಮಿಸುತ್ತೇನೆ ಎಂದರು.ಸೋಂಪುರ ಗ್ರಾಪಂ ಮಾಜಿ ಅಧ್ಯಕ್ಷ ತೀರ್ಥಪ್ರಸಾದ್ ಮಾತನಾಡಿ, ನಮ್ಮ ಗ್ರಾಪಂಯಲ್ಲಿ ಯಾವುದೇ ಗೊಂದಲವಿಲ್ಲದೆ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಗಳನ್ನು ನಡೆಸುತ್ತಾ ಬಂದಿದ್ದು,ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಇಂದ್ರಮ್ಮ ಪರಮೇಶ್ ಆಯ್ಕೆಯಾಗಿದ್ದಾರೆ ಎಂದರು.
ನೂತನ ಅಧ್ಯಕ್ಷರನ್ನು ಗ್ರಾಪಂ ಅಧ್ಯಕ್ಷ ಆನಂದಕುಮಾರ್, ಮಾಜಿ ಅಧ್ಯಕ್ಷರಾದ ಪ್ರೇಮಾ, ಶಿವಕುಮಾರ್, ಮಾಜಿ ಉಪಾಧ್ಯಕ್ಷರಾದ ಲಾವಣ್ಯ, ಪ್ರೇಮಾ, ಚಿಕ್ಕಮ್ಮ, ಸದಸ್ಯರಾದ ಅಶೋಕ್, ಗೌರಮ್ಮ, ಮಂಗಳಮ್ಮ, ಮಂಜುಳ, ಪ್ರೇಮಾ, ಲಕ್ಷ್ಮೀದೇವಿ, ಪವಿತ್ರ, ರಾಜೇಶ್ವರಿ, ಸಿದ್ದಯ್ಯ, ಸರೋಜಮ್ಮ, ನಾಗರತ್ನಮ್ಮ, ಲಕ್ಷ್ಮಮ್ಮ, ಲಾವಣ್ಯ, ಗಂಗಾಧರ್, ಪ್ರೇಮಾ, ಬಸವರಾಜು, ಶಿಲ್ಪ, ಬೈಲಪ್ಪ, ಮಹಾಲಕ್ಷ್ಮಮ್ಮ, ಪಿಡಿಒ ರವಿಶಂಕರ್, ಕಾರ್ಯದರ್ಶಿ ಹನುಮಂತರಾಜು, ದ್ವಿತೀಯ ದರ್ಜೆ ಸಹಾಯಕ ಮಂಜುನಾಥ್, ಮುಖಂಡರಾದ ಬಿಪಿ ಶ್ರೀನಿವಾಸ್, ದೇವರಾಜು, ಪರಮೇಶ್, ಜಗದೀಶ್, ಬೋಜರಾಜು, ಮಂಜುನಾಥ್, ಸಂತೋಷ್, ಕುಮಾರಸ್ವಾಮಿ, ಚಿಕ್ಕೇಗೌಡ, ಹಾಗೂ ಪಂಚಾಯಿತಿ ಸಿಬ್ಬಂದಿ ಅಭಿನಂದಿಸಿದರು.