ಜಿ.ಸೋಮಶೇಖರ

ಕೊಟ್ಟೂರು: ಗ್ರಾಮೀಣ ಪ್ರದೇಶದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ನಗರ ಮತ್ತು ಗ್ರಾಮೀಣ ಮಕ್ಕಳು ಒಂದೇ ಸೂರಿನಡಿ ಶಿಕ್ಷಣ ಪಡೆದು ಉತ್ತಮ ಭವಿಷ್ಯ ತಮ್ಮದಾಗಿಸಿಕೊಳ್ಳಬೇಕೆಂಬ ಆಶಯ ಹೊತ್ತು ಪ್ರಾರಂಭಗೊಂಡ ಇಂದಿರಾ ಚಾರಿಟೇಬಲ್ ಆ್ಯಂಡ್ ಎಜ್ಯುಕೇಷನಲ್ ಟ್ರಸ್ಟ್ (ರಿ) ಅಡಿಯಲ್ಲಿ 2006 ಜೂನ್ 12ರಂದು ತನ್ನ ಶೈಕ್ಷಣಿಕ ಸೇವೆಯನ್ನು ಪ್ರಾರಂಭಿಸಿದೆ.

ಈ ಸಂಸ್ಥೆಯ ಹೆಮ್ಮೆಯ ಇಂದು ಪದವಿಪೂರ್ವ ಕಾಲೇಜಿನ ಗಮನಾರ್ಹ ಸಂಗತಿ ಎಂದರೇ ಈ ಕಾಲೇಜಿನ ವಿದ್ಯಾರ್ಥಿಗಳು ನಿರಂತರ 11 ಬಾರಿ ದ್ವಿತೀಯ ಪಿಯುಸಿಯಲ್ಲಿ ಫಸ್ಟ್‌ ರ್‍ಯಾಂಕ್‌ ಪಡೆದು ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.

ರಾಜ್ಯದ ಹೆಮ್ಮೆಯ ಕೊಟ್ಟೂರಿನ ವಿದ್ಯಾಸಂಸ್ಥೆ ಇಂದು ಕಾಲೇಜ್ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ನೀಟ್, ಜೆಇಇ, ಕೆಸಿಇಟಿ, ಗುಣಮಟ್ಟದ ತರಬೇತಿ ನೀಡುತ್ತಿದೆ. ಪಿಸಿಎಂಬಿ ಮತ್ತು ಪಿಸಿಎಂಸಿಎಸ್ ಸಂಯೋಜನೆಯಲ್ಲಿ ವ್ಯಾಸಂಗ ಮಾಡಲು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಅವಕಾಶವಿದೆ. ಇದೇ ಸಂಸ್ಥೆಯ ಸಾಕಷ್ಟು ವಿದ್ಯಾರ್ಥಿಗಳು ಮೆಡಿಕಲ್, ಎಂಜಿನಿಯರಿಂಗ್, ಬಿ.ಎಸ್ಸಿ, ಎ.ಜಿ., ಬಿ.ಫಾರ್ಮ ಇತ್ಯಾದಿ ಕೋರ್ಸ್‌ಗಳಿಗೆ ಉತ್ತಮ ರ‍್ಯಾಂಕ್‌ಗಳೊಂದಿಗೆ, ವ್ಯಾಸಂಗ ಮಾಡುತ್ತಿದ್ದಾರೆ. ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ರ‍್ಯಾಂಕ್ ಪಡೆಯುತ್ತಿರುವುದು ಇಂದುವಿನ ಮತ್ತೊಂದು ವಿಶೇಷ. ರಾಯಚೂರಿನ ದೇವಿಶೆಟ್ಟಿ ಭರತ್ 10ನೇ ತರಗತಿಯಲ್ಲಿ ಶೇಕಡ 49.60 ಉತ್ತೀರ್ಣನಾಗಿ ಇಂದು ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಶೇಕಡ 90.33 ಅಂಕ ಪಡೆದಿರುತ್ತಾನೆ.

ವಾಣಿಜ್ಯ ವಿಭಾಗವನ್ನು ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಅವಕಾಶವಿರುತ್ತದೆ. ಸಿಇಬಿಎ, ಎಸ್‌ಇಬಿಎ, ಹೆಚ್‌ಇಬಿಎ ಸಂಯೋಜನೆಯಲ್ಲಿ ವ್ಯಾಸಂಗ ಮಾಡಲು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಅವಕಾಶವಿದೆ. ಪಠ್ಯದ ಜೊತೆ ಸಿ.ಎ. ಪೌಂಢೇಷನ್, ಸಿಪಿಟಿ ಮತ್ತು ಬ್ಯಾಂಕಿಂಗ್ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ರಾಜ್ಯಮಟ್ಟದ ರ‍್ಯಾಂಕ್ ಪಡೆಯುತ್ತಿರುವುದು ಇಂದು ಕಾಲೇಜಿನ ಮತ್ತೊಂದು ವಿಶೇಷ. ಬಳ್ಳಾರಿಯ ಕೆ.ಎಚ್. ಸುರೇಶ್ ಕುಮಾರ್ 10ನೇ ತರಗತಿಯಲ್ಲಿ ಶೇಕಡ 43.84 ಉತ್ತೀರ್ಣನಾಗಿ ಇಂದು ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ವಾಣಿಜ್ಯ ವಿಭಾಗದಲ್ಲಿ ಶೇಕಡ 92.17 ಅಂಕ ಪಡೆದಿದ್ದಾನೆ.


ಕಲಾ ವಿಭಾಗವನ್ನು ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಅವಕಾಶವಿರುತ್ತದೆ. PUC + UPSC Foundation ಯೋಜನೆಯೊಂದಿಗೆ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯ ಜೊತೆ UPSC Foundation ಕೋರ್ಸ್ ಪ್ರಾರಂಭಿಸಿದ್ದಾರೆ. ನಿರಂತರ 11 ಬಾರಿ ಫಸ್ಟ್‌ ರ್‍ಯಾಂಕ್‌ ಪಡೆಯುವುದು ಅದ್ವಿತೀಯ ಸಾಧನೆ. ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತ್ಯೇಕವಾದ ಹಾಸ್ಟೆಲ್ ಸೌಲಭ್ಯ ಇರುತ್ತದೆ. ಕೊಟ್ಟೂರು ತಾಲೂಕು ಬೋರನಹಳ್ಳಿ ಗ್ರಾಮದ ಎಂ. ಸಂಜನಾ 10ನೇ ತರಗತಿಯಲ್ಲಿ ಶೇ. 59.84 ಉತ್ತೀರ್ಣಳಾಗಿ ಇಂದು ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ಕನ್ನಡ ಮಾಧ್ಯಮ ಕಲಾ ವಿಭಾಗದಲ್ಲಿ ಶೇಕಡ 98.33 ಅಂಕಗಳೊಂದಿಗೆ ರಾಜ್ಯಕ್ಕೆ 7ನೇ ರ‍್ಯಾಂಕ್ ಪಡೆದಿದ್ದಾಳೆ.

ವಿದ್ಯಾರ್ಥಿಗಳು 10ನೇ ತರಗತಿಯಲ್ಲಿ ಕಡಿಮೆ ಅಂಕಗಳನ್ನು ಗಳಿಸಿ, ಪಿಯುಸಿಯಲ್ಲಿ ಇಂದು ಕಾಲೇಜಿನಲ್ಲಿ ಪ್ರವೇಶ ಪಡೆದು, ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಪಡೆದ ನೂರಾರು ಉದಾಹರಣೆಗಳು ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ಇವೆ.