ಸಾರಾಂಶ
ಅಕ್ರಮ ಚಟುವಟಿಕೆಗಳ ಬಗ್ಗೆ ತಿಳಿದು ಬಂದರೆ ಗಸ್ತು ಪೊಲೀಸರಿಗೆ ಸಂಪೂರ್ಣ ಮಾಹಿತಿ ನೀಡಿ ಸಹಕರಿಸಬೇಕು. ಮಾಹಿತಿದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುತ್ತದೆ. ಯಾವುದೇ ಸಿಬ್ಬಂದಿ ಬದಲಾವಣೆ ಆದರೂ ಫೋನ್ ನಂಬರ್ ಕಾಯಂ ಆಗಿರುತ್ತದೆ. ಅದೇ ನಂಬರನ್ನು ಸಂಪರ್ಕಿಸಬೇಕು.
ಕನ್ನಡಪ್ರಭ ವಾರ್ತೆ ಹಲಗೂರು
ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೆ ಗಸ್ತು ಸಿಬ್ಬಂದಿಗೆ ಮಾಹಿತಿ ನೀಡಿದರೆ ನಿಮ್ಮ ಹೆಸರು ಹಾಗೂ ದೂರವಾಣಿ ಸಂಖ್ಯೆ ಗೌಪ್ಯವಾಗಿ ಇಡಲಾಗುತ್ತದೆ ಎಂದು ಮಳವಳ್ಳಿ ಡಿವೈಎಸ್ಪಿ ಕೃಷ್ಣಪ್ಪ ತಿಳಿಸಿದರು.ಗಾಣಾಳು ಗ್ರಾಮದಲ್ಲಿ ಗ್ರಾಮ ಗಸ್ತು ಸದಸ್ಯರ ಸಭೆಯಲ್ಲಿ ಮಾತನಾಡಿ, ನಿಮ್ಮ ಗ್ರಾಮಗಳಲ್ಲಿ ಯಾವುದಾದರೂ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೆ ಅಥವಾ ಗ್ರಾಮದಲ್ಲಿ ನೆಲೆಸಿರುವ ಹೊಸ ವ್ಯಕ್ತಿಗಳ, ಕುಟುಂಬಗಳ ಬಗ್ಗೆ ನಮಗೆ ಮಾಹಿತಿ ನೀಡಿ, ಚಲನವಲನಗಳನ್ನು ಗಮಿಸಬೇಕು ಎಂದರು.
ಅಕ್ರಮ ಚಟುವಟಿಕೆಗಳ ಬಗ್ಗೆ ತಿಳಿದು ಬಂದರೆ ಗಸ್ತು ಪೊಲೀಸರಿಗೆ ಸಂಪೂರ್ಣ ಮಾಹಿತಿ ನೀಡಿ ಸಹಕರಿಸಬೇಕು. ಮಾಹಿತಿದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುತ್ತದೆ. ಯಾವುದೇ ಸಿಬ್ಬಂದಿ ಬದಲಾವಣೆ ಆದರೂ ಫೋನ್ ನಂಬರ್ ಕಾಯಂ ಆಗಿರುತ್ತದೆ. ಅದೇ ನಂಬರನ್ನು ಸಂಪರ್ಕಿಸಬೇಕು ಎಂದರು.ಈ ವೇಳೆ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್, ಹಲಗೂರು ಸಬ್ ಇನ್ಸ್‌ಪೆಕ್ಟರ್ ಬಿ.ಮಹೇಂದ್ರ, ಜಿಪಂ ಮಾಜಿ ಸದಸ್ಯ ಚಂದ್ರಕುಮಾರ್, ಶಿವಶಂಕರ್, ದಾಸ ಭೋಯಿ, ಮಾದೇಶ, ಚೇತನ್ ಇದ್ದರು.
ಕವನ ವಾಚನ ಸ್ಪರ್ಧೆಗೆ ಸುಜನ್ ರಾಜ್ಯ ಮಟ್ಟಕ್ಕೆ ಆಯ್ಕೆಹಲಗೂರು:ಮಂಡ್ಯದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಜೆ.ಜೆ.ಪಬ್ಲಿಕ್ ಶಾಲೆ10ನೇ ತರಗತಿ ವಿದ್ಯಾರ್ಥಿ ಸುಜನ್ ಎಚ್.ಸಿ. ಕನ್ನಡ ಕವನ ವಾಚನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲೆ ಮುಖ್ಯಸ್ಥ ಕೆ.ಜೆ.ಸೋಮಶೇಖರ್, ಪ್ರಾಂಶುಪಾಲೆ ಕೆ.ಎನ್.ಲಲಿತಾಂಬ ಹಾಗೂ ಆಡಳಿತ ಮಂಡಳಿ, ಶಿಕ್ಷಕ ವೃಂದ ವಿದ್ಯಾರ್ಥಿಯನ್ನು ಅಭಿನಂದಿಸಿದ್ದಾರೆ.