ಸಾರಾಂಶ
ರಾಮನಗರ: ರೈತರಿಗೆ ತೆಂಗಿನ ಸಸಿ, ನಿರ್ಗತಿಕರಿಗೆ ಹೊದಿಕೆ, ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು, ಬ್ರೆಡ್ ವಿತರಣೆ ಮಾಡುವಂತಹ ಸಾಮಾಜಿಕ ಕಾರ್ಯಗಳ ಮೂಲಕ ಮಾಜಿ ಸಂಸದ ಡಿ.ಕೆ.ಸುರೇಶ್ ಅವರ 59ನೇ ಹುಟ್ಟುಹಬ್ಬವನ್ನು ಕಾಂಗ್ರೆಸ್ ಮುಖಂಡರು, ಅಭಿಮಾನಿಗಳು ಬೃಹತ್ ಕೇಕ್ ಕತ್ತರಿಸುವ ಮೂಲಕ ಡಿ.ಕೆ.ಸುರೇಶ್ ಅವರಿಗೆ ಶುಭ ಕೋರಿದರು. ಈ ವೇಳೆ ಮಾಜಿ ಶಾಸಕ ಕೆ.ರಾಜು ಮಾತನಾಡಿ, ಕ್ಷೇತ್ರದ ಅಭಿವೃದ್ಧಿಯ ಹರಿಕಾರ ಹಾಗೂ ಕನ್ನಡ ನಾಡಿನ ಕಾವಲುಗಾರರಾಗಿರುವ ಡಿ.ಕೆ.ಸುರೇಶ್ ಅವರ ಹುಟ್ಟುಹಬ್ಬವನ್ನು ಎಲ್ಲರೂ ಸೇರಿ ಆಚರಿಸಿ ಅವರಿಗೆ ಶುಭಾಶಯ ತಿಳಿಸುತ್ತಿದ್ದೇವೆ. ಅವರು ಸಂಸದರಾಗಿದ್ದ ಸಮಯದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಮರೆಯುವಂತಿಲ್ಲ. ಅಂತಹ ಬದ್ಧತೆಯಿರುವ ಡಿ.ಕೆ.ಸುರೇಶ್ ಅವರಿಗೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ರಾಜಕೀಯ ಸ್ಥಾನಮಾನಗಳು ಲಭಿಸಲಿ ಎಂದು ಶುಭ ಹಾರೈಸಿದರು.
ಎಂಇಐ ಮಾಜಿ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಕೆ.ಶೇಷಾದ್ರಿ ಮಾತನಾಡಿ, ವಿವಿಧ ಕಾರಣಗಳಿಂದ ಲೋಕಸಭಾ ಚುನಾವಣೆಯಲ್ಲಿ ಸುರೇಶ್ ಅವರಿಗೆ ಸೋಲಾಗಿದೆ. ಆದರೆ, ಅವರ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಪ್ರತಿ ಗ್ರಾಮದಲ್ಲಿಯೂ ಮಾತನಾಡುತ್ತಿವೆ. ಹಾಗಾಗಿ ಅವರಿಗೆ ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಹೆಚ್ಚಿನ ಸೇವೆ ಸಲ್ಲಿಸುವ ಅವಕಾಶ ಕರುಣಿಸಲಿ ಎಂದು ತಿಳಿಸಿದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್ ಮಾತನಾಡಿ, ನಾಯಕರಾದ ಡಿ.ಕೆ.ಸುರೇಶ್ ಅವರು ರೈತರ ಬದುಕು ಹಸಿರಾಗಿರಬೇಕೆಂಬ ಆಶಯ ಇಟ್ಟುಕೊಂಡಿರುವವರು. ಆದ್ದರಿಂದಲೇ ಅವರ ಹುಟ್ಟು ಹಬ್ಬದಂದು ನಾಡಿನ ಅನ್ನದಾತರಿಗೆ ಹಸಿರಿನ ಸಮೃದ್ಧಿಯ ಸಂಕೇತವಾಗಿ 800ಕ್ಕೂ ಹೆಚ್ಚು ತೆಂಗಿನ ಸಸಿಗಳ ವಿತರಣೆ, ವಯೋವೃದ್ಧ ಅಶಕ್ತರಿಗೆ ಬೆಡ್‌ಸೀಟ್ ಹಾಗೂ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಕೆಎಂಎಫ್ ಮಾಜಿ ಅಧ್ಯಕ್ಷ ಹಾಗೂ ಬಮೂಲ್ ನಿರ್ದೇಶಕ ಪಿ.ನಾಗರಾಜು ಮಾತನಾಡಿ, ರಾಜ್ಯದಲ್ಲಿನ ಎಲ್ಲ ಸಂಸದರಿಗೂ ಡಿ.ಕೆ.ಸುರೇಶ್ ಮಾದರಿ ಆಗಿದ್ದವರು. ಜನಪ್ರತಿನಿಧಿಯಾಗಿ ಏನೆಲ್ಲ ಕೆಲಸ ಮಾಡಬಹುದು ಎಂಬುದನ್ನು ಮಾಡಿ ತೋರಿಸಿದ್ದಾರೆ ಎಂದು ಗುಣಗಾನ ಮಾಡಿದರು.ಡಿ.ಕೆ.ಸುರೇಶ್ ಅವರಿಗೆ ಆರೋಗ್ಯ, ಆಯಸ್ಸು ಮತ್ತು ಉನ್ನತ ರಾಜಕೀಯ ಸ್ಥಾನಮಾನಗಳು ಲಭಿಸಲಿ ಎಂದು ಪ್ರಾರ್ಥಿಸಿ
ಕಾಂಗ್ರೆಸ್ ಪಕ್ಷದ ಎಲ್ಲ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ನಗರದ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ದೇವಿ ಮತ್ತು ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದರು.ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ರಮೇಶ್, ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿಎನ್‌ಆರ್ ವೆಂಕಟೇಶ್, ನಗರಸಭಾ ಮಾಜಿ ಅಧ್ಯಕ್ಷೆ ಬಿ.ಸಿ.ಪಾರ್ವತಮ್ಮ, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಡಾ.ದೀಪಾ ಮಾತನಾಡಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಗುರುಪ್ರಸಾದ್, ಕಾರ್ಯಾಧ್ಯಕ್ಷ ಅನಿಲ್ ಜೋಗೇಂದರ್, ಗ್ರಾಪಂ ಅಧ್ಯಕ್ಷರಾದ ಗಿರೀಶ್, ನವೀನ್ ,ಕಾಂಗ್ರೆಸ್‌ನ ಮುಖಂಡರಾದ ಜಯಣ್ಣ, ರಾಜಶೇಖರ್, ಪುಟ್ಟರಾಜು, ಮಾಯಗಾನಹಳ್ಳಿ ಎಂ.ಎಚ್.ರಂಜಿತ್, ಜಯಕರ್ನಾಟಕ ರವಿ, ವಸೀಂ, ಗುರುವೇಗೌಡ ಮತ್ತಿತರರು ಹಾಜರಿದ್ದರು.18ಕೆಆರ್ ಎಂಎನ್ 6.ಜೆಪಿಜಿ
ರಾಮನಗರದ ಹಳೇ ಬಸ್ ನಿಲ್ದಾಣದಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಜನ್ಮದಿನವನ್ನು ಕಾಂಗ್ರೆಸ್ ಮುಖಂಡರು ಆಚರಿಸಿದರು.