ಕಟ್ಟಡ ಕಾರ್ಮಿಕರ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಅನ್ಯಾಯ

| Published : Feb 08 2024, 01:35 AM IST

ಕಟ್ಟಡ ಕಾರ್ಮಿಕರ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಅನ್ಯಾಯ
Share this Article
  • FB
  • TW
  • Linkdin
  • Email

ಸಾರಾಂಶ

ಕಟ್ಟಡ ಕಾರ್ಮಿಕರ ಮಕ್ಕಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಶೈಕ್ಷಣಿಕ ಸಹಾಯಧನ ಕಡಿತ ಮಾಡುವ ಮೂಲಕ ಅನ್ಯಾಯ ಮಾಡಿದೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಕೂಡ್ಲೂರು ಶ್ರೀಧರಮೂರ್ತಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಕಟ್ಟಡ ಕಾರ್ಮಿಕರ ಮಕ್ಕಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಶೈಕ್ಷಣಿಕ ಸಹಾಯಧನ ಕಡಿತ ಮಾಡುವ ಮೂಲಕ ಅನ್ಯಾಯ ಮಾಡಿದೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಕೂಡ್ಲೂರು ಶ್ರೀಧರಮೂರ್ತಿ ಆರೋಪಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ನೀಡುತ್ತೇವೆ ಎಂದು ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕಣಿಕವಾಗಿ ನೀಡುತ್ತಿರುವ ವಿದ್ಯಾರ್ಥಿ ವೇತನ ಕಡಿತ ಮಾಡಿ, ಬಡ ವಿದ್ಯಾರ್ಥಿಗಳಿಗೆ ದ್ರೋಹ ಮಾಡಿದೆ ಎಂದರು. ವಿದ್ಯಾಭ್ಯಾಸ ಮಾಡಲು 1ನೇ ತರಗತಿಯಿಂದ 4ನೇ ತರಗತಿಯವರೆಗೆ ರೂ.5 ಸಾವಿರ ಬದಲು 1100 ರು. 5ರಿಂದ 8ನೇ ತರಗತಿ ವರಗೆ 5 ಸಾವಿರ ಬದಲು 1250, 9ರಿಂದ 10ನೇ ತರಗತಿವರಗೆ 12 ಸಾವಿರ ಬದಲು 3 ಸಾವಿರ, ಪಿಯುಸಿ ವಿದ್ಯಾರ್ಥಿಗಳಿಗೆ 15 ಸಾವಿರ ಬದಲು 4600, ಪಾಲಿಟೆಕ್ನಿಕ್‌, ಡಿಪ್ಲೋಮಾ, ಐಟಿಐ 20 ಸಾವಿರಕ್ಕೆ ಬದಲು 6 ಸಾವಿರ, ಬಿಎಸ್ಸಿ ನರ್ಸಿಂಗ್‌, ಜೆಎನ್‌ಎಂ, ಪ್ಯಾರಾಮೆಡಿಕಲ್‌ ಕೋರ್ಸ್‌ಗಳು 40 ಸಾವಿರಕ್ಕೆ ಬದಲು 10 ಸಾವಿರ, ಡಿಎಡ್‌ 25 ಸಾವಿರಕ್ಕೆ ಬದಲು 4600 , ಬಿಎಡ್‌ 25 ಸಾವಿರಕ್ಕೆ ಬದಲು 6000, ಬಿಇ, ಬಿಟೆಕ್‌ 50 ಸಾವಿರಕ್ಕೆ ಬದಲು 10 ಸಾವಿರ, ವೈದ್ಯಕೀಯ ಶಿಕ್ಷಣ 60 ಸಾವಿರಕ್ಕೆ ಬದಲು 12 ಸಾವಿರ, ಪಿಎಚ್‌ಡಿ ಮತ್ತು ಎಂಫಿಲ್‌ಗೆ 25 ಸಾವಿರ ಬದಲು 11 ಸಾವಿರ, ಐಐಟಿ, ಎಂಎಸ್‌, ಎಂಬಿಎದಂತಹ ಕೋರ್ಸ್‌ಗಳಿಗೆ ಸಂಪೂರ್ಣ ಬೋಧನಾ ಶುಲ್ಕದ ಬದಲು 11 ಸಾವಿರ ರು. ಗಳನ್ನು ಮಾತ್ರ ನೀಡುತ್ತಿದ್ದಾರೆ. ಇದು ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ತೀವ್ರವಾಗಿ ಖಂಡಿಸಿದರು.

ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಕಳೆದ ಸರ್ಕಾರದಲ್ಲಿ ಸಿವಿಲ್ ಗುತ್ತಿಗೆದಾರರಿಂದ ಶೇ. 1 ರಷ್ಟು ಹಣವನ್ನು ಕಟಾವು ಮಾಡುತ್ತಿದ್ದರು. ಈಗಿನ ಕಾಂಗ್ರೆಸ್ ಸರ್ಕಾರ ಶೇ 2% ಹಣವನ್ನು ಕಟಾವು ಮಾಡುತ್ತಿದೆ ಇದನ್ನು ಕಾರ್ಮಿಕ ಕಲ್ಯಾಣ ನಿಧಿಗೆ ನೀಡದೆ. ಇದರಿಂದ ಗುತ್ತಿಗೆದಾರರಿಗೂ ಅನಾನುಕೂಲವಾಗಿದೆ. ಗುತ್ತಿಗೆದಾರರಿಂದ ಕಳೆದ ಬಿಜೆಪಿ ಸರ್ಕಾರ ಶೇ. 1 ರಷ್ಟು ಹಣವನ್ನು ಕಟಾವು ಮಾಡಿ ಕಟ್ಟಡ ಕಾರ್ಮಿಕರ ಕಲ್ಯಾಣನಿಧಿಗೆ ಹಾಕುತ್ತಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಬಂದ ನಂತರ ಗುತ್ತಿಗೆದ ಬದಲಾಗಿ ಶೇ. 2 ರಷ್ಟು ನ್ನು ಕಟಾವು ಮಾಡಿ ಕಲ್ಯಾಣನಿಧಿಗೆ ಹಾಕದೇ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡಿದ್ದಾರೆ.. ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕವಾಗಿ ನೀಡುತ್ತಿರುವ ಹಣ ತುಂಬಾ ಕಡಿಮೆಯಾಗಿರುತ್ತದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಸ್‌ಇಪಿ, ಟಿಎಸ್‌ಪಿ ಯೋಜನೆಗಳ 11 ಸಾವಿರ ಕೋಟಿಯನ್ನು ಗ್ಯಾರಂಟಿ ಯೋಜನೆಗೆ ಬಳಸಿದ್ದು, ದೀನ, ದಲಿತರ ಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಕತ್ತುಹಿಸುಕುವ ಕೆಲಸ ಮಾಡಿದೆ. ಈ ವಚನ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕೂಡ್ಲೂರು ಶ್ರೀಧರಮೂರ್ತಿ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿ.ಮಹಾಲಿಂಗಯ್ಯ ಸತ್ತೇಗಾಲ, ಗ್ರಾಪಂ.ಮಾಜಿ ಸದಸ್ಯ ಜಯಶಂಕರ್ ಎಚ್‌.ಮೂಕಳ್ಳಿ, ಮಹದೇವಯ್ಯ ಹೊಂಗನೂರು, ಚಂದ್ರಶೇಖರ ಅಂಬಳೆ ಹಾಜರಿದ್ದರು.