ಡಿಎಂಕೆ ಜೊತೆ ಕೈ ಮೈತ್ರಿಯಿಂದ ಕನ್ನಡಿರಿಗೆ ಅನ್ಯಾಯ: ಕುಮಾರಸ್ವಾಮಿ

| Published : Apr 24 2024, 02:31 AM IST

ಡಿಎಂಕೆ ಜೊತೆ ಕೈ ಮೈತ್ರಿಯಿಂದ ಕನ್ನಡಿರಿಗೆ ಅನ್ಯಾಯ: ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಮೇಕೆದಾಟು ಯೋಜನೆಗೆ ಅನುಮತಿ ನೀಡುವುದಿಲ್ಲ ಎಂದು ಪ್ರಣಾಳಿಕೆಯಲ್ಲಿ ತಿಳಿಸಿರುವ ತಮಿಳುನಾಡಿನ ಡಿಎಂಕೆ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಕನ್ನಡಗರಿಗೆ ಅನ್ಯಾಯ ಮಾಡುತ್ತಿದೆ ಎಂದು ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಮಳವಳ್ಳಿಮೇಕೆದಾಟು ಯೋಜನೆಗೆ ಅನುಮತಿ ನೀಡುವುದಿಲ್ಲ ಎಂದು ಪ್ರಣಾಳಿಕೆಯಲ್ಲಿ ತಿಳಿಸಿರುವ ತಮಿಳುನಾಡಿನ ಡಿಎಂಕೆ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಕನ್ನಡಗರಿಗೆ ಅನ್ಯಾಯ ಮಾಡುತ್ತಿದೆ ಎಂದು ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.ತಾಲೂಕಿನ ಕಿರುಗಾವಲು, ಕಲ್ಕುಣಿ, ಬೆಳಕವಾಡಿ ಗ್ರಾಮದಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿ ಮಾತನಾಡಿ, ಕಾಂಗ್ರೆಸ್‌ಗೆ ಕಾಳಜಿ ಇದ್ದರೆ ತಮಿಳುನಾಡು ಕೇಂದ್ರದಲ್ಲಿ ಹಾಕಿರುವ ತಕರಾರು ಅರ್ಜಿಯನ್ನು ಹಿಂಪಡೆಯುವಂತೆ ಆ ಸರ್ಕಾರದ ಮನವೊಲಿಸಲು ಪ್ರಯತ್ನ ಮಾಡಲಿ ಎಂದು ಆಗ್ರಹಿಸಿದರು.ಕಾವೇರಿ ನೀರಿನ ವಿಚಾರದಲ್ಲಿ ಮೇಕುದಾಟು ಯೋಜನೆಗೆ ಅನುಮತಿ ನೀಡುವುದಿಲ್ಲ ಎಂದು ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದ್ದರೂ ಆ ಪಕ್ಷದ ಜತೆಗಿನ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಕನ್ನಡಗರಿಗೆ ಅನ್ಯಾಯ ಮಾಡುತ್ತಿದೆ. ತಕರಾರು ಅರ್ಜಿ ವಾಪಸ್ ಪಡೆದು ಯೋಜನೆಗೆ ಒಪ್ಪಿಗೆ ಪಡೆದರೆ, ನಾನು ಕೇಂದ್ರದಿಂದ ಮೇಕುದಾಟು ಯೋಜನೆಗೆ ಅನುಮತಿ ಕೊಡಿಸಿ ಅದಕ್ಕೆ ಬೇಕಾದ ಅನುದಾನ ಬಿಡುಗಡೆ ಮಾಡಿಸುವುದು ನನ್ನ ಜವಾಬ್ದಾರಿ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದರು.ಜನರನ್ನು ಕಾಂಗ್ರೆಸ್‌ ಯಾಮಾರಿಸುತ್ತಿದೆ:

ತಮಿಳುನಾಡಿಗೆ ನೀರು ಬಿಟ್ಟು ಜಿಲ್ಲೆಯಲ್ಲಿ ಸರ್ಕಾರವೇ ಕೃತಕ ಬರಗಾಲ ಸೃಷ್ಟಿಸಿರುವ ಪರಿಣಾಮ ಕಬ್ಬು, ಭತ್ತದ ಬೆಳೆ ಒಣಗಿ ಹೋಗಿವೆ. ರಾಜ್ಯಕ್ಕೆ ಶಾಶ್ವತ ಯೋಜನೆಗಳನ್ನು ಜಾರಿ ಮಾಡುವುದನ್ನು ಬಿಟ್ಟು, ಅಗ್ಗದ ಕಾರ್ಯಕ್ರಮಗಳಿಗೆ ಜೋತು ಬಿದ್ದು ಜನರನ್ನು ಕಾಂಗ್ರೆಸ್ ಯಾಮಾರಿಸುತ್ತಿದೆ. ಅವರು ಜಿಲ್ಲೆಯ ಜನರಿಗೆ ಕಾವೇರಿ ನೀರಿನ ಗ್ಯಾರಂಟಿ ಕೊಡಲಿ ನೋಡೋಣ ಎಂದು ಸವಾಲು ಹಾಕಿದರು. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಮುಖಂಡರ, ಕಾರ್ಯಕರ್ಯರ ಒತ್ತಾಯ ಹಾಗೂ ದೇವರ ಇಚ್ಛೆಯಿಂದ ಸ್ಪರ್ಧಿಸಿದ್ದು, ಜನರು ಕೈಹಿಡಿಯುವ ವಿಶ್ವಾಸವಿದೆ. ಜಿಲ್ಲೆಯಿಂದ ಸಂಸದರಾಗಿ ಆಯ್ಕೆಯಾದರೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡಲಾಗುವುದು ಎಂದರು.

ಗುಜರಾತ್ ನಲ್ಲಿ 20 ವರ್ಷ ಮುಖ್ಯಮಂತ್ರಿ ಹಾಗೂ 10 ವರ್ಷ ಪ್ರಧಾನಿಯಾಗಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಕೊಟ್ಟಿದ್ದಾರೆ. ರಸ್ತೆಗಳು, ರೈಲ್ವೆ ನಿಲ್ದಾಣಗಳು, ಏರ್ ಪೋರ್ಟ್ ಸೇರಿದಂತೆ ಹಲವು ವಲಯಗಳು ಅಭಿವೃದ್ಧಿ ಕಂಡಿವೆ ಎಂದು ಹೇಳಿದರು. ಈ ವೇಳೆ ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ್, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಬಿಜೆಪಿ ಮುಖಂಡರಾದ ಜಿ.ಮುನಿರಾಜು, ರೂಪಾ, ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಬಿ.ರವಿ ಕಂಸಾಗರ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್.ಕೃಷ್ಣ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಎಂ.ವಿಶ್ವನಾಥ್, ಮುಖಂಡರಾದ ಸುಹಾಸ್ ಮಹದೇವಯ್ಯ, ನಟೇಶ್ ಹಾಜರಿದ್ದರು.