ಕನ್ನಡಪ್ರಭ ವಾರ್ತೆ ಮಂಡ್ಯ
ಮಹಿಳಾ ಸಬಲೀಕರಣದ ಹೆಸರಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮತ್ತೆ ದೇಶದ ಮಹಿಳೆಯರಿಗೆ ಅನ್ಯಾಯ ಮಾಡುತ್ತಿದೆ. ಮಹಿಳಾ ಮೀಸಲಾತಿ ಮಸೂದೆಯನ್ನು ತಕ್ಷಣವೇ ಜಾರಿಗೆ ತರಬೇಕಾದ ಸಂದರ್ಭದಲ್ಲಿ ಡಿಲಿಮಿಟೇಷನ್ ಎಂಬ ರಾಜಕೀಯ ಆಟವನ್ನು ಮುಂದಿಟ್ಟುಕೊಂಡು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಎಚ್.ಬಿ.ಶುಭದಾಯಿನಿ ಆರೋಪಿಸಿದರು.ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸೇರಿದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಮಹಿಳೆಯರಿಗೆ ನ್ಯಾಯ ದೊರಕಿಸುವಂತೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಡಿಲಿಮಿಟೇಶನ್ ಪ್ರಕ್ರಿಯೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಹಾಗೂ ಒಬಿಸಿ, ಎಸ್‌ಸಿ, ಎಸ್‌ಟಿ ಮಹಿಳೆಯರಿಗೆ ಅನ್ಯಾಯವಾಗುವ ಸಾಧ್ಯತೆ ಇದೆ. ೨೦೨೩ರಲ್ಲಿ ಸರ್ವ ಪಕ್ಷಗಳಿಂದ ಅಂಗೀಕೃತವಾದ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಬೇಕು. ಅದನ್ನು ತಕ್ಷಣವೇ ಜಾರಿಗೊಳಿಸಬೇಕು, ಡಿಲಿಮಿಟೇಶನ್ ಹೆಸರಿನಲ್ಲಿ ರಾಜಕೀಯ ಮಾಡಬಾರದು ಎಂದು ಒತ್ತಾಯಿಸಿದರು.ಮಹಿಳಾ ಜಿಲ್ಲಾಧ್ಯಕ್ಷೆ ಸುಜಾತ ಸಿದ್ದಯ್ಯ, ಜ್ಯೋತಿ, ಅನುರಾಧ, ಸುಜಾತಮಣಿ, ಶಕುಂತಲಾ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಧಾನ ಕಾರ್ಯದರ್ಶಿಯಾಗಿ ಸಂತೆಕಸಲಗೆರೆ ಬಸವರಾಜು ನೇಮಕ
ಮಂಡ್ಯ:ಕರ್ನಾಟಕ ರಾಜ್ಯ ಬೀದಿ ನಾಟಕ ಕಲಾ ತಂಡಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ತಾಲೂಕಿನ ಸಂತೆಕಸಲಗೆರೆ ಗ್ರಾಮದ ಬಸವರಾಜು ನೇಮಕಗೊಂಡಿದ್ದಾರೆ.
ರಾಜ್ಯಾದ್ಯಂತ ಸುಮಾರು 5000ಕ್ಕೂ ಹೆಚ್ಚು ಕಲಾವಿದರು ಬೀದಿನಾಟಕವನ್ನು ಅವಲಂಬಿಸಿದ್ದು, ನೂರಾರು ಸಾಮಾಜಿಕ ಪಿಡುಗುಗಳ ವಿರುದ್ಧ ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸುತ್ತಾ ಬಂದಿರುವ ಕಲಾವಿದರು ಸಂಘಟಿತರಾಗಿ ತಮ್ಮ ಹಕ್ಕು ಮತ್ತು ತಮಗೆ ಸಿಗಬೇಕಾದ ಸೌಲಭ್ಯ ಪಡೆಯಲು ಬೀದಿನಾಟಕ ಕಲಾತಂಡಗಳ ಒಕ್ಕೂಟವನ್ನು ರಚಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.ರಾಜ್ಯಾಧ್ಯಕ್ಷರಾಗಿ-ಸಬ್ಬನಹಳ್ಳಿ ರಾಜು ಬೆಂಗಳೂರು, ಉಪಾಧ್ಯಕ್ಷರಾಗಿ- ಕುಮಾರ್ ಕಟ್ಟೆ ಬೆಳಗುಳಿ ಹಾಸನ, ಪ್ರಧಾನ ಕಾರ್ಯದರ್ಶಿಯಾಗಿ- ಸಂತೆಕಸಲಗೆರೆ ಬಸವರಾಜು ಮಂಡ್ಯ, ಸಹಕಾರ್ಯದರ್ಶಿ - ಬಸವರಾಜು ಗುಬ್ಬಿ ಹಾವೇರಿ, ಖಜಾಂಚಿಯಾಗಿ- ಮಂಜುನಾಥ್ ಮುದುಗೇಕರ - ಉತ್ತರ ಕನ್ನಡ, ವಿಭಾಗ ಸಂಚಾಲಕರಾಗಿ- ಲೋಕೇಶ್ ಭಕ್ತನಕಟ್ಟೆ ಚಿಕ್ಕಮಗಳೂರು, ಶ್ರೀನಿವಾಸ ರಾಮನಗರ, ಪ್ರಕಾಶ ಚಂದಣನವರ- ಗದಗ, ನಿರ್ದೇಶಕರಾಗಿ- ಶಾಂತರಾಜು ಚಾಮರಾಜನಗರ, ನೀಲಮ್ಮ- ಹಾಸನ, ಆಮೃತ್- ವಿಯಜಪುರ, ರೋಜಾ - ಚಿಕ್ಕಬಳ್ಳಾಪುರ, ಅನುಸೂಯ - ಮೈಸೂರು, ಸಲಹಾ ಸಮಿತಿ ಸದಸ್ಯರಾಗಿ - ಶರಣಪ್ಪ ಹೊಡ್ಡಗೆರಿ ಕೊಪ್ಪಳ, ಗುಂಡುರಾಜು ಹಾಸನ, ಪುರುಷೋತ್ತಮ ಗೌಡ ಕಾರವಾರ, ವೈರಮುಡಿ - ಮಂಡ್ಯ, ರಾಜು ಕೊಡಗು, ಮಂಜುನಾಥ್ ಚಿಕ್ಕಬಳ್ಳಾಪುರ ಆಯ್ಕೆಗೊಂಡಿದ್ದಾರೆ.