ಸಾರಾಂಶ
ಕೋಲಾರ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ . ಅಧಿಕಾರಿಗಳು ಬಡವರಿಗೆ ಒಂದು ಕಾನೂನು ಶ್ರೀಮಂತರಿಗೆ ಬಲಿಷ್ಠರಿಗೆ ಒಂದು ಕಾನೂನು ತಂದಿದ್ದಾರೆ. ದೇಶದಲ್ಲಿ ಬಲವಂತದ ಭೂ ಸ್ವಾಧೀನ ಹಾಗೂ ಮೋಸದ ಭೂ ಬೆಲೆ ನಿಗದಿಸಿ ವಂಚಿಸುವುದನ್ನು ತಡೆಯಬೇಕು. ಬಗರ್ ಹುಕುಂ ಹಕ್ಕುಪತ್ರ ನೀಡಲು ಅಗತ್ಯ ಕ್ರಮವಹಿಸಬೇಕು.
ಕನ್ನಡಪ್ರಭ ವಾರ್ತೆ ಕೋಲಾರಅರಣ್ಯ ಇಲಾಖೆ ಕಿರುಕುಳ, ಬಗರ್ ಹಕುಂ ಸಾಗುವಳಿ ಪಿ.ನಂಬರ್ ದುರಸ್ತಿ ಮನೆ ನಿವೇಶನ, ಕಾರ್ಪೋರೇಟ್ ಕಂಪನಿಗಳಿಗೆ ಕೃಷಿ ಭೂಮಿ ವಹಿಸಿಕೊಡುವುದನ್ನು ತಕ್ಷಣ ನಿಲ್ಲಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆಬ್ರುವರಿ ೧೦ರಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕ ಉಪಾಧ್ಯಕ್ಷ ಪಿ.ಆರ್ ಸೂರ್ಯನಾರಾಯಣ ತಿಳಿಸಿದರು.ಬಲವಂತದ ಭೂ ಸ್ವಾಧೀನ
ನಗರದ ಪಾಲಸಂದ್ರ ಲೇಔಟ್‌ನ ಕಛೇರಿಯಲ್ಲಿ ಜಿಲ್ಲಾ ಸಮಿತಿ ಸಭೆಯ ನಂತರ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ . ಅಧಿಕಾರಿಗಳು ಬಡವರಿಗೆ ಒಂದು ಕಾನೂನು ಶ್ರೀಮಂತರಿಗೆ ಬಲಿಷ್ಠರಿಗೆ ಒಂದು ಕಾನೂನು ತಂದಿದ್ದಾರೆ. ದೇಶದಲ್ಲಿ ಬಲವಂತದ ಭೂ ಸ್ವಾಧೀನ ಹಾಗೂ ಮೋಸದ ಭೂ ಬೆಲೆ ನಿಗದಿಸಿ ವಂಚಿಸುವುದನ್ನು ತಡೆಯಬೇಕು. ಬಗರ್ ಹುಕುಂ ಹಕ್ಕುಪತ್ರ ನೀಡಲು ಅಗತ್ಯ ಕ್ರಮವಹಿಸಬೇಕು ಎಂದು ಅವರು ಒತ್ತಾಯಿಸಿದರು.ಸಂಘಟನೆಯ ಜಿಲ್ಲಾ ಅಧ್ಯಕ್ಷ ಟಿ.ಎಂ.ವೆಂಕಟೇಶ್ ಮಾತನಾಡಿ, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಗಳ ನೇತೃತ್ವದಲ್ಲಿ ಬೆಂಗಳೂರಿನ ವಿಧಾನಸೌಧದ ಎದುರು ಹತ್ತು ಸಾವಿರ ರೈತರು ಹಾಗೂ ಕೂಲಿಕಾರರು ಅನಿರ್ದಿಷ್ಟಾವಧಿಯ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ತಿಳಿಸಿದರು.ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಪಾತಕೋಟ ನವೀನ್ ಕುಮಾರ್ ಉಪಾಧ್ಯಕ್ಷರಾದ ಗಂಗಮ್ಮ, ಅಲಹಳ್ಳಿ ವೆಂಕಟೇಶಪ್ಪ, ಸಹ ಕಾರ್ಯದರ್ಶಿ ವಿ.ನಾರಾಯಣರೆಡ್ಡಿ, ಮಾಲೂರು ವೆಂಕಟಪ್ಪ ಇದ್ದರು.