ಸಾರಾಂಶ
ಸ್ಥಳೀಯ ಆಡಳಿತವು ವೇತನ ನೀಡದೇ ಕಿರುಕುಳ ನೀಡುತ್ತಿದೆ. ವೇತನ ಬಿಡುಗಡೆ ಮಾಡುವಂತೆ ಬಿಇಒ ಅವರಿಗೆ ಜನಪ್ರತಿನಿಧಿಗಳು ಮೌಖಿಕವಾಗಿ ತಿಳಿಸಿದ್ದಾರೆ.ಆದರೆ, ಅಧಿಕಾರಿಗಳು ವೇತನ ಕೊಡದ ಕಾರಣ ಪ್ರತಿಭಟನೆ ನಡೆಸುತ್ತಿದ್ದೇವೆ. ಜೂನ್ ತಿಂಗಳಿಂದ ಜನೇವರಿ ತಿಂಗಳವರೆಗೆ ಮುಂಗಡ ರಸಿದಿ ಪಡೆದಿದ್ದು ತಕ್ಷಣವೇ ವೇತನ ಬಿಡುಗಡೆ ಮಾಡಲು ಬಿಇಒ ಮುಂದಾಗಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಚಿಂಚೋಳಿ
ತಾಲೂಕಿನ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕರಿಗೆ ಕಳೆದ ೫ ತಿಂಗಳಿಂದ ವೇತನ ಸಿಗದೇ ಕುಟುಂಬಗಳು ಸಂಕಷ್ಟ ಎದುರಿಸುತ್ತಿದ್ದು, ಶೀಘ್ರ ಗೌರವ ವೇತನ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿ ಬಿಇಒ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.ತಾಲೂಕ ಅತಿಥಿ ಶಿಕ್ಷಕರ ಸಂಘದ ತಾ. ಅಧ್ಯಕ್ಷ ಬಸವರಾಜ ಸೈದಾಪೂರ ಮಾತನಾಡಿ, ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿರುವ ಶಿಕ್ಷಣ ಇಲಾಖೆ ಸರ್ಕಾರಿ ಪ್ರಾಥಮಿಕ, ಹಿರಿಯ ಹಾಗೂ ಪ್ರೌಢ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದೇವೆ. ರಾಜ್ಯ ಸರ್ಕಾರ ಜನೇವರಿ ತಿಂಗಳವರೆಗೆ ಅನುದಾನ ನೀಡಿದೆ. ಆದರೆ, ಸ್ಥಳೀಯ ಆಡಳಿತವು ವೇತನ ನೀಡದೇ ಕಿರುಕುಳ ನೀಡುತ್ತಿದೆ. ವೇತನ ಬಿಡುಗಡೆ ಮಾಡುವಂತೆ ಬಿಇಒ ಅವರಿಗೆ ಜನಪ್ರತಿನಿಧಿಗಳು ಮೌಖಿಕವಾಗಿ ತಿಳಿಸಿದ್ದಾರೆ.
ಆದರೆ, ಅಧಿಕಾರಿಗಳು ವೇತನ ಕೊಡದ ಕಾರಣ ಪ್ರತಿಭಟನೆ ನಡೆಸುತ್ತಿದ್ದೇವೆ. ಜೂನ್ ತಿಂಗಳಿಂದ ಜನೇವರಿ ತಿಂಗಳವರೆಗೆ ಮುಂಗಡ ರಸಿದಿ ಪಡೆದಿದ್ದು ತಕ್ಷಣವೇ ವೇತನ ಬಿಡುಗಡೆ ಮಾಡಲು ಬಿಇಒ ಮುಂದಾಗಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.ಬಿಇಒ ಲಕ್ಷಮಯ್ಯ ಮನವಿ ಪತ್ರ ಸ್ವೀಕರಿಸಿ, ತಾಲೂಕಿನ ಗೌರವ ಶಿಕ್ಷಕರ ವೇತನವನ್ನು ಹತ್ತು ದಿನಗಳಲ್ಲಿ ವೇತನ ಬಿಡುಗಡೆಗೊಳಿಸುತ್ತೇವೆ ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಶಿಕ್ಷಕರಾದ ಜಗದೀಶ್ವರ ದೊಡ್ಡಮನಿ, ಧರ್ಮುಚವ್ಹಾಣ, ರವೀಂದ್ರ ವಿಷ್ಣುಕಾಂತ, ಮಲ್ಲೇಶ, ಅಶೋಕಬಾಬು, ಜಗಪ್ಪ, ಶಶಿಕಾಂತ ಮಾಣಿಕ ಧನಶ್ರೀ, ಶಶಿಕಾಂತ ಭೀಮಸಿಂಗ, ಚಂದ್ರಕಾಂತ, ರಮೇಶ, ದಸ್ತಪ್ಪ ಪೂಜಾರಿ, ಚಂದ್ರಕಲಾ ಆದಿಶಕ್ತಿ, ಜೈಸಿಂಗ ಭೀಮಸಿಂಗ, ವಿಜಯಕುಮಾರ ನರಸಿಂಹಲು ಮಹಿಪಾಲ, ಶಾಮಲು ಮತ್ತು ಬಿಜೆಪಿ ತಾಲೂಕ ಅಧ್ಯಕ್ಷ ವಿಜಯಕುಮಾರ ಚೇಂಗಟಿ, ಗೋಪಾಲರಾವ ಕಟ್ಟಿಮನಿ, ಕೆಎಮ, ಬಾರಿ ಇದ್ದರು.