ಸಾರಾಂಶ
ಭಟ್ಕಳ: ಹೊಸ ವರ್ಷದ ಆಚರಣೆ ಹಿನ್ನೆಲೆ ಪ್ರವಾಸಿ ಕ್ಷೇತ್ರ ಮತ್ತು ಪ್ರಮುಖ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಕಾರವಾರದ ಬಾಂಬ್ ನಿಷ್ಕ್ರಿಯ ದಳದದವರು ಶ್ವಾನದೊಂದಿಗೆ ಮುರುಡೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಕಡೆ ತಪಾಸಣೆ ನಡೆಸಿದರು.
ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಭಟ್ಕಳ ಹಾಗೂ ಅಳ್ವೆಕೋಡಿ ಬಂದರು ಮತ್ತು ಮಾರುಕಟ್ಟೆಯಲ್ಲಿ ತಪಾಸಣೆ ನಡೆಸಿದ ಬಾಂಬ್ ನಿಷ್ಕ್ರಿಯ ದಳ ಮುರುಡೇಶ್ವರ ದೇವಸ್ಥಾನ, ಶಿವನ ಗೋಪುರ, ಕಡಲತೀರ ಸೇರಿದಂತೆ ಪ್ರಮುಖ ಜನಜಂಗುಳಿ ಇರುವ ಪ್ರದೇಶಗಳಲ್ಲಿ ತಪಾಸಣೆ ನಡೆಸಿತು. ಹೊಸ ವರ್ಷದ ಆಚರಣೆಯ ಹಿನ್ನೆಲೆ ಸೂಕ್ಷ್ಮಪ್ರದೇಶವಾದ ಭಟ್ಕಳದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಯಿಂದ ತೀವ್ರ ನಿಗಾ ಇಡಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.ಒಂಟಿ ಮಹಿಳೆಯ ಕೊಲೆಗೈದು ಕಳ್ಳತನ: ಆರೋಪಿ ಬಂಧನ
ಸಿದ್ದಾಪುರ: ಪಟ್ಟಣದ ಬಸವಗಲ್ಲಿಯಲ್ಲಿ ವಾಸ ಮಾಡುತ್ತಿದ್ದ ಒಂಟಿ ಮಹಿಳೆಯ ಕೊಲೆಗೈದು ಹಣ ಮತ್ತು ಒಡವೆಯನ್ನು ಕಳವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಅಭಿಜಿತ್ ಗಣಪತಿ ಮಡಿವಾಳ ಕೊಂಡ್ಲಿ(೩೦) ಬಂಧಿತ ಆರೋಪಿ. ಪಟ್ಟಣದ ಬಸವಣ್ಣಗಲ್ಲಿಯ ಗೀತಾ ಹುಂಡೆಕರ್ ಎನ್ನುವ ಒಂಟಿ ಮಹಿಳೆಯನ್ನು ಡಿ. ೨೩ರ ರಾತ್ರಿ ಕೊಲೆಗೈದು ಹಣ ಮತ್ತು ಬಂಗಾರದ ಓಲೆಯನ್ನು ಕಳವು ಮಾಡಲಾಗಿತ್ತು.ಪ್ರಕರಣ ಡಿ. ೨೫ರಂದು ಬೆಳಕಿಗೆ ಬಂದಿತ್ತು. ಕೊಲೆ ಆರೋಪಿ ಪತ್ತೆಗಾಗಿ ಎಸ್ಪಿ ಎಂ. ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ ನಾಯ್ಕ, ಶಿರಸಿ ಉಪವಿಭಾಗದ ಉಪಾಧೀಕ್ಷಕ ಗಣೇಶ ಕೆ.ಎಲ್. ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ಠಾಣೆಯ ಸಿಪಿಐ ಜೆ.ಬಿ. ಸೀತಾರಾಮ ನೇತೃತ್ವದಲ್ಲಿ ೨ ತಂಡಗಳಲ್ಲಿ ಪಿಎಸ್‌ಐ ಅನಿಲ್ ಬಿ.ಎಂ., ಪಿಎಸ್‌ಐ ಗೀತಾ ಶಿರ್ಶಿಕರ್, ಎಎಸ್‌ಐಗಳಾದ ರಮೇಶ ಗೌಡ, ಸಂಗಿತಾ ಕಾನಡೆ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಡಿ. ೩೦ರಂದು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯು ₹೨೦,೬೮೦ ಪಿಗ್ಮಿಯಿಂದ ಸಂಗ್ರಹಿಸಿದ ಹಣ ಮತ್ತು ೪ ಗ್ರಾಂ ತೂಕದ ಬಂಗಾರದ ಓಲೆಯನ್ನು ಕಳವು ಮಾಡಿದ್ದ. ೪ ಗ್ರಾಂ ತೂಕದ ಬಂಗಾರದ ಓಲೆಯನ್ನು ಪಟ್ಟಣದ ಮುತ್ತೂಟ್ ಫೈನಾನ್ಸ್‌ನಲ್ಲಿ ಗಿರವಿ ಇಟ್ಟು ₹೧೮,೭೨೫ ಹಣ ಪಡೆದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಆರೋಪಿಯ ಮೇಲೆ ಠಾಣೆಯಲ್ಲಿ ಈ ಹಿಂದೆ ೫ ಪ್ರಕರಣಗಳು ದಾಖಲಾಗಿದ್ದು, ೨ ಪ್ರಕರಣಗಳಲ್ಲಿ ಶಿಕ್ಷೆಯಾಗಿ ಜಾಮೀನು ಪಡೆದಿದ್ದ. ಠಾಣೆಯಲ್ಲಿ ಗೂಂಡಾ ಕಾಯ್ದೆಯ ಅಡಿಯಲ್ಲಿಯೂ ಈತನ ಹೆಸರು ದಾಖಲಾಗಿತ್ತು ಎಂದು ಪೊಳಿಸರು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.