ದೇವರ ದರ್ಶನ ಪಡೆದ ನಂತರ ದೇವಸ್ಥಾನದ ಮೇಲ್ಭಾಗದಲ್ಲಿ ನಡೆಯುತ್ತಿರುವ ಕೆಲಸವನ್ನು ವೀಕ್ಷಣೆ ಮಾಡಿ, ಕೆಲಸ ತುಂಬಾ ಅಚ್ಚುಕಟ್ಟಾಗಿ, ಶಾಶ್ವತವಾಗಿ ಇರುವಂತೆ ಹಾಗೂ ಅತ್ಯಂತ ಮಾದರಿ ಕೆಲಸ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬನವಾಸಿ: ಬನವಾಸಿಯ ಮಧುಕೇಶ್ವರ ದೇವಸ್ಥಾನದ ಅಭಿವೃದ್ಧಿ ಕಾರ್ಯವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸೋಮವಾರ ಪರಿಶೀಲಿಸಿದರು.ದೇವಸ್ಥಾನ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಪುರಾತತ್ವ ಇಲಾಖೆಯ ಉನ್ನತ ಅಧಿಕಾರಿಗಳ ಜತೆ ನಿರಂತರ ಸಂಪರ್ಕ ಮಾಡಿ ಕೆಲಸ ಆರಂಭವಾಗಲು ಕಾರಣೀಕರ್ತರಾದ ಕಾಗೇರಿ ಅವರು, ಕೆಲಸ ಆರಂಭವಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದು, ತಾವು ಇಲಾಖೆಯ ಉನ್ನತ ಮಟ್ಟದ ಸಮಿತಿ ಸದಸ್ಯರಾಗಿ ಕೂಡ ಇರುವುದಾಗಿ ತಿಳಿಸಿದರು. ಅಭಿವೃದ್ಧಿಗೆ ಬೇಕಾದ ಅನುದಾನ ಕೂಡ ಬಿಡುಗಡೆ ಮಾಡಿಸಿರುವುದಾಗಿ ಹೇಳಿದರು.
ದೇವರ ದರ್ಶನ ಪಡೆದ ನಂತರ ದೇವಸ್ಥಾನದ ಮೇಲ್ಭಾಗದಲ್ಲಿ ನಡೆಯುತ್ತಿರುವ ಕೆಲಸವನ್ನು ವೀಕ್ಷಣೆ ಮಾಡಿ, ಕೆಲಸ ತುಂಬಾ ಅಚ್ಚುಕಟ್ಟಾಗಿ, ಶಾಶ್ವತವಾಗಿ ಇರುವಂತೆ ಹಾಗೂ ಅತ್ಯಂತ ಮಾದರಿ ಕೆಲಸ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಬನವಾಸಿ ನೂತನ ತಾಲೂಕು ರಚನಾ ಹೋರಾಟ ಸಮಿತಿ ಅಧ್ಯಕ್ಷ ಉದಯಕುಮಾರ್ ಕಾನಳ್ಳಿ, ಕಾರ್ಯದರ್ಶಿ ವಿಶ್ವನಾಥ್ ಒಡೆಯರ್ ಅವರು ದೇವಸ್ಥಾನದ ಸೋರಿಕೆ ತಡೆಗಾಗಿ ಶಾಶ್ವತ ಪರಿಹಾರ ಕಾಮಗಾರಿ ಸಮಯಕ್ಕೆ ಸರಿಯಾಗಿ ಚೆನ್ನಾಗಿ ಆಗಬೇಕು ಎಂದರು.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಸದಸ್ಯರಾದ ಗೀತಾ ಯಜಮಾನ, ಪಿಎಸ್ಐ ಮಹಾಂತಪ್ಪ ಕುಂಬಾರ, ಬಿಜೆಪಿ ಪ್ರಮುಖರಾದ ಶಿವಕುಮಾರ್ ದೇಸಾಯಿ ಗೌಡ, ಅರವಿಂದ್ ಶೆಟ್ಟಿ, ಸಾಯಿರಾಮ ಕಾನಳ್ಳಿ, ಸಿದ್ದಲಿಂಗೇಶ್ ಕಬ್ಬೂರ, ಶಂಕರ ಗೌಡ ಭಾಷಿ, ಜ್ಯೋತಿ ಚನ್ನಯ್ಯ, ಪುಟ್ಟರಾಜ ಸವಣೂರ, ಪ್ರವೀಣ್ ಕoತ್ರಾಜಿ, ಪ್ರಶಾಂತ್ ಶೇಟ್, ಅನಂತ ಖರೆ, ನಾಗೇಶ್ ಭಟ್ ಮುಂತಾದವರು ಉಪಸ್ಥಿತರಿದ್ದರು.ಇಂದು ಹರ್ಷಿತಾ ಎಸ್.ವಿ. ಭರತನಾಟ್ಯ ರಂಗಪ್ರವೇಶ
ಹೊನ್ನಾವರ: ನಾಟ್ಯಂಜಲಿ ನೃತ್ಯ ಕೇಂದ್ರ ಶಿರಸಿ ಇವರ ಪ್ರಸ್ತುತಿಯಲ್ಲಿ ವಿದುಷಿ ಹರ್ಷಿತಾ ಎಸ್.ವಿ. ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ನ. 17ರಂದು ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಸಂಜೆ 4.30ಕ್ಕೆ ನಡೆಯಲಿದೆ ಎಂದು ಸೀಮಾ ಭಟ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯಗುರು, ದೇಶ- ವಿದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಹಲವು ಪ್ರಶಸ್ತಿಗಳನ್ನು ಪಡೆದಿರುವ ಕರ್ನಾಟಕದ ಹೆಮ್ಮೆಯ ಕಲಾವಿದೆ ಸಹನಾ ಭಟ್ ಹಾಗೂ ನಾಟ್ಯಂಜಲಿ ಕಲಾ ಕೇಂದ್ರದ ಅಧ್ಯಕ್ಷ ಪ್ರದೀಪ ಭಟ್ ಅವರ ಮಾರ್ಗದರ್ಶನದಲ್ಲಿ ಹರ್ಷಿತಾ ಭಟ್ ಭರತನಾಟ್ಯ ಅಭ್ಯಾಸ ಮಾಡಿದ್ದಾರೆ ಎಂದರು.ಬಾಲ್ಯದಿಂದಲೇ ಯಕ್ಷಗಾನ ಮತ್ತು ಭರತನಾಟ್ಯದಲ್ಲಿ ಆಸಕ್ತಿ ಬೆಳೆಸಿಕೊಂಡು ಶ್ರದ್ಧೆ ಹಾಗೂ ಪರಿಶ್ರಮದಿಂದ ಕಲೆಯನ್ನು ಅಭ್ಯಾಸ ಮಾಡಿರುವ ಹರ್ಷಿತಾ, ಭರತನಾಟ್ಯದಲ್ಲಿ ವಿದ್ವತ್ ಪದವಿ ಹಾಗೂ ರೇವಾ ವಿಶ್ವವಿದ್ಯಾಲಯದಿಂದ ಎಂಎ ಪದವಿ ಪಡೆದಿದ್ದಾರೆ. ಈಗಾಗಲೇ ಕರ್ನಾಟಕದ ಪ್ರತಿಷ್ಠಿತ ವೇದಿಕೆಗಳಲ್ಲಿ ತಮ್ಮ ನೃತ್ಯ ಪ್ರತಿಭೆಯನ್ನು ಅನಾವರಣಗೊಳಿಸಿರುವ ಅವರು, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಯುವ ಕಲಾರತ್ನ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ನಿವೃತ್ತ ಶಿಕ್ಷಕಿ ಶ್ಯಾಮಲಾ ಭಟ್ ಹಾಗೂ ಕೆ. ವೆಂಕಟೇಶ ಅವರ ಪುತ್ರಿಯಾಗಿರುವ ಹರ್ಷಿತಾ, ಪ್ರಸಿದ್ಧ ಕಲಾವಿದರ ಸಹಭಾಗಿತ್ವದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಅಂಬಾ ಏಕವ್ಯಕ್ತಿ ನೃತ್ಯ ಪ್ರದರ್ಶನ ಇರಲಿದೆ ಎಂದರು.ಯಕ್ಷಗಾನ ಕಲಾವಿದ ವಿದ್ಯಾಧರ ಜಲವಳ್ಳಿ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ವಿದುಷಿ ಹರ್ಷಿತಾ ಎಸ್.ವಿ., ಮುಕ್ತಾ ನಾಯ್ಕ ಹಾಗೂ ಶ್ಯಾಮಲಾ ಭಟ್ ಉಪಸ್ಥಿತರಿದ್ದರು.