ಸಾರಾಂಶ
ಕನ್ನಡಪ್ರಭವಾರ್ತೆ ಮೂಲ್ಕಿ
ಮಕ್ಕಳಲ್ಲಿ ಯಕ್ಷಗಾನವನ್ನು ಪ್ರೇರೇಪಿಸುವ ಪ್ರಯತ್ನಗಳು ನಡೆಯುತ್ತಿರುವುದರಿಂದ ಯಕ್ಷಗಾನ ರಂಗ ಆಶಾದಾಯಕವಾಗಿದೆ. ಯಕ್ಷಗಾನ ಕಲೆಗೆ ದಾಮೋದರ ಶೆಟ್ಟಿಗಾರರ ಕೊಡುಗೆ ಸ್ಮರಣೀಯವಾಗಿದ್ದು ತನ್ನ ಮಕ್ಕಳೊಂದಿಗೆ ಅನೇಕ ಶಿಷ್ಯರನ್ನು ಹೊಂದಿರುವ ಶೆಟ್ಟಿಗಾರರ ಸಂಸ್ಮರಣೆ, ಅವರ ಹೆಸರಿನಲ್ಲಿ ಕೊಡುವ ಪ್ರಶಸ್ತಿ ಅಭಿನಂದನೀಯ ಎಂದು ಉಡುಪಿ ಕಲಾ ರಂಗದ ಕಾರ್ಯದರ್ಶಿ ಮುರಳಿ ಕಡೇಕಾರ್ ಹೇಳಿದರು.ಕಿನ್ನಿಗೋಳಿ ನೇಕಾರ ಸೌಧದಲ್ಲಿ ಜರಗಿದ ಯಕ್ಷಗಾನ ಕಲಾವಿದ ವೇಷಭೂಷಣ ಪ್ರಸಾಧನ ಕಲಾಪರಿಣತ, ಮೋಹಿನಿ ಕಲಾ ಸಂಪದದ ಸಂಸ್ಥಾಪಕ ಟಿ. ದಾಮೋದರ ಶೆಟ್ಟಿಗಾರ್ ಕಿನ್ನಿಗೋಳಿ ರವರ 25ನೇ ವರ್ಷದ ಸಂಸ್ಮರಣೆ ಕಾರ‍್ಯಕ್ರಮದಲ್ಲಿ ಮಾತನಾಡಿದರು.
ಸಮಾಜ ಸೇವಕ, ಕಲಾಪೋಷಕ ಡಾ. ಹರಿಕೃಷ್ಣ ಪುನರೂರು, ಯಕ್ಷಗಾನ ಕಲಾವಿದ ಪಡ್ರೆ ಕುಮಾರ, ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್, ಪಿ.ವಿ. ಪರಮೇಶ್, ಲಲಿತ ಕಲಾ ಆರ್ಟ್ಸ್ ಧನಪಾಲ ಎಚ್. ಶೆಟ್ಟಿಗಾರ್ ಅವರಿಗೆ ಯಕ್ಷ ದಾಮೋದರ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಟೀಲು ದೇವಳದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ ಪುರಾಣದ ಕಥೆಗಳನ್ನು ಈಗಿನ ಕಾಲಕ್ಕೆ ಯಕ್ಷಗಾನದ ಮೂಲಕ ತೋರಿಸಿಕೊಡುವ ಸವಾಲು ನಿರ್ದೇಶಕನಿಗಿದ್ದು ತಿಂಗಳುಗಟ್ಟಲೆ ಮನೆ ಬಿಟ್ಟು, ಬದುಕನ್ನೇ ತ್ಯಾಗ ಮಾಡಿ ಯಕ್ಷಗಾನವನ್ನು ಉಳಿಸಿದ ಹಿಂದಿನ ಕಲಾವಿದರು ಸದಾ ಸ್ಮರಣೀಯರು ಎಂದರು.ರಾಮಪ್ರಸಾದ ಅಮ್ಮನಡ್ಕ ಬೆಹರೈನ್, ದೀಪ್ತಿ ಬಾಲಕೃಷ್ಣ ಭಟ್, ಸಂಘಟಕರಾದ ಮೋಹಿನೀ ಶೆಟ್ಟಿಗಾರ್, ಶೇಖರ ಡಿ. ಶೆಟ್ಟಿಗಾರ್, ಸದಾಶಿವ ಶೆಟ್ಟಿಗಾರ್, ಗಂಗಾಧರ ಶೆಟ್ಟಿಗಾರ್, ಬಾಲಕೃಷ್ಣ ಶಟ್ಟಿಗಾರ್ ಮತ್ತಿತರರಿದ್ದರು.
ಸಾಯಿಸುಮ ನಾವಡ ನಿರೂಪಿಸಿದರು. ದುಬೈ ಯುಎಇನ ಯಕ್ಷಗಾನ ಅಭ್ಯಾಸ ಕೇಂದ್ರದವರಿಂದ ಅಳ್ವಾಸ್ ಧೀಂಕಿಟ ತಂಡ, ದಾಮೋದರ ಶೆಟ್ಟಿಗಾರ್ ಶಿಷ್ಯವೃಂದ ಹಾಗೂ ಖ್ಯಾತ ಕಲಾವಿದರಿಂದ ಯಕ್ಷಗಾನ ಪ್ರದರ್ಶನಗಳು ನಡೆಯಿತು.ಉದ್ಘಾಟನೆ : ಸಂಸ್ಮರಣೆ ಕಾರ‍್ಯಕ್ರಮದ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಿನ್ನಿಗೋಳಿ ಯುಗಪುರುಷದ ಭುವನಾಭಿರಾಮ ಉಡುಪ, ಸುನಿಲ್ ಭಟ್, ರಶ್ಮಿ ಉಡುಪ, ದಿನೇಶ್ ಶೆಟ್ಟಿ ಕೊಟ್ಟಿಂಜ, ಮೋಜಿನೀ ಶೆಟ್ಟಿಗಾರ್, ಮಾಧವ ಶೆಟ್ಟಿಗಾರ್ ಕೆರೆಕಾಡು ಮತ್ತಿತರರಿದ್ದರು.