ಸಾರಾಂಶ
ಉತ್ತಮ ಮೌಲ್ಯಗಳನ್ನು ಪಡೆಯಲು ಶಿಕ್ಷಣ ಮುಖ್ಯ ಎಂದು ಸ್ವಾಮಿ ವಿವೇಕಾನಂದರು ನಂಬಿದ್ದರು. ಒಳ್ಳೆಯದರ ಬಗ್ಗೆ ಧೃಡವಾದ ನಂಬಿಕೆ, ಅನುಮಾನ ಅಸೂಯೆ ಇಲ್ಲದಿರುವುದು. ಒಳ್ಳೆಯವರಿಗೆ ಪ್ರೋತ್ಸಾಹಿಸುವುದು ಆಗಾಗಿ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಜೀವನದಲ್ಲಿ ಪ್ರತಿಯೊಬ್ಬರೂ ರೂಢಿಸಿಕೊಳ್ಳಿ.
ಕನ್ನಡಪ್ರಭ ವಾರ್ತೆ ದಾವಣಗೆರೆ
ಸ್ವಾಮಿ ವಿವೇಕಾನಂದರು ಮಾನವೀಯತೆ, ಏಕಾಗ್ರತೆ, ಬ್ರಹ್ಮಚಾರ್ಯ, ಶಿಕ್ಷಣ ಮತ್ತು ಭಾರತದ ಬಗ್ಗೆ ಅವರಿಗಿದ್ದ ದೂರದೃಷ್ಟಿ ದೇಶದ ಪ್ರಗತಿ ಬಗ್ಗೆ ಅವರ ನಿಲುವುಗಳು ಪ್ರತಿಯೊಬ್ಬರಿಗೆ ಬೆಳಕು ಚೆಲ್ಲಿವೆ. ಸ್ವಾಮಿ ವಿವೇಕಾನಂದರ ಉಪದೇಶಗಳು ಯುವ ಮನಸ್ಸುಗಳಿಗೆ ತನ್ನದೇ ಆದ ಚೈತನ್ಯಕ್ಕೆ ಸ್ಫೂರ್ತಿ ಎಂದು ನಗರದ ರಾಮಕೃಷ್ಣ ಮಿಷನ್‌ನ ಶ್ರೀತೀರ್ಥಂಕರಾನಂದ ಸ್ವಾಮಿ ತಿಳಿಸಿದರು.ನಗರದ ಎ.ಆರ್.ಜಿ. ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ ಉತ್ತಮ ಮೌಲ್ಯಗಳನ್ನು ಪಡೆಯಲು ಶಿಕ್ಷಣ ಮುಖ್ಯ ಎಂದು ಸ್ವಾಮಿ ವಿವೇಕಾನಂದರು ನಂಬಿದ್ದರು. ಒಳ್ಳೆಯದರ ಬಗ್ಗೆ ಧೃಡವಾದ ನಂಬಿಕೆ, ಅನುಮಾನ ಅಸೂಯೆ ಇಲ್ಲದಿರುವುದು. ಒಳ್ಳೆಯವರಿಗೆ ಪ್ರೋತ್ಸಾಹಿಸುವುದು ಆಗಾಗಿ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಜೀವನದಲ್ಲಿ ಪ್ರತಿಯೊಬ್ಬರೂ ರೂಢಿಸಿಕೊಳ್ಳಿ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ.ಜಿ.ಬಿ.ಬೋರಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕರಾದ ಪ್ರೊ.ರಶ್ಮಿ, ಡಾ.ಎಚ್.ಆರ್. ತಿಪ್ಪೇಸ್ವಾಮಿ, ಪ್ರೊ.ರಮೇಶ ಪೂಜಾರ್, ಪ್ರೊ.ಆನಂದ. ಡಾ. ಚಮನ್ ಸಾಬ್, ಕಛೇರಿ ಅಧೀಕ್ಷಕರಾದ ಜಿ.ಆರ್. ಕರಿಬಸಪ್ಪ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.