ಸಾರಾಂಶ
ಅಣ್ಣಾಸಾಹೇಬ ಜೊಲ್ಲೆ ಎಂ.ಪಿ.ಟ್ರೋಫಿ ಪುರುಷ ಮತ್ತು ಮಹಿಳಾ ಕಬಡ್ಡಿ ಪಂದ್ಯಾವಳಿಯ ಉದ್ಘಾಟನೆಯಲ್ಲಿ ಮಹಾವೀರ ನಿಲಜಗಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಜೊಲ್ಲೆ ಸಮೂಹ ಸಂಸ್ಥೆಯಿಂದ ಯುವಕರಿಗೆ ಸ್ಫೂರ್ತಿದಾಯಕ ಕಾರ್ಯಕ್ರಮಗಳ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಮಹಾವೀರ ಉದ್ಯೋಗ ಸಮೂಹ ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಗಿ ಹೇಳಿದರು.ಪಟ್ಟಣದ ಸಿ.ಎಸ್.ತುಬಚಿ ಶಿಕ್ಷಣ ಸಂಸ್ಥೆಯ ಎಸ್.ಹೈಸ್ಕೂಲ್ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ಅಣ್ಣಾಸಾಹೇಬ ಜೊಲ್ಲೆ ಎಂ.ಪಿ.ಟ್ರೋಫಿ ಹುಕ್ಕೇರಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ಪುರುಷ ಮತ್ತು ಮಹಿಳಾ ಕಬಡ್ಡಿ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಪ್ರಥಮ ದಿನವಾದ ಬುಧವಾರ ಹುಕ್ಕೇರಿ ಕ್ಷೇತ್ರದ 16 ಮಹಿಳಾ ಕಬಡ್ಡಿ ತಂಡಗಳು ಭಾಗವಹಿಸಿದ್ದವು. ಹುಕ್ಕೇರಿ ಎಸ್.ಎಸ್.ಎನ್ ಮಹಾವಿದ್ಯಾಲಯದ ಮಹಿಳಾ ತಂಡ ಪ್ರಥಮ ಹಾಗೂ ಎಸ್ ಕೆ ಪಿಯು ಕಾಲೇಜಿನ ಮಹಿಳಾ ತಂಡ ದ್ವಿತೀಯ ಮತ್ತು ಸಂಕೇಶ್ವರದ ಕೃಷ್ಣ ಮೆಡಿಕಲ್ ಕಾಲೇಜು ಮಹಿಳಾ ತಂಡ ತೃತೀಯ, ಅವರಗೋಳ ಸರ್ಕಾರಿ ಪ್ರೌಢಶಾಲೆಯ ಮಹಿಳಾ ತಂಡ ನಾಲ್ಕನೇ ಸ್ಥಾನ ಪಡೆದವು.ಕಬಡ್ಡಿ ಅಮೆಚೂರ್ ಕನ್ವೆನರ ಎಮ್.ಕೆ ಶಿರಗುಪ್ಪಿ, ನಿರ್ಣಾಯಕರಾಗಿ ಎಮ್.ಕೆ ಪೂಜೇರಿ, ಬಿರೇಶ ಕಾಂಬಳೆ,ಎಸ್.ಕೆ. ಕುರಬೇಟ, ಬಿರೇಶ ಶಿವಣ್ಣಗೋಳ, ಬಾಳೇಶ ನಾಯಕ, ಜೆ.ಎಂ.ಚೌಗಲಾ ಕನ್ನಡದಲ್ಲಿ ಪಂದ್ಯದ ವೀಕ್ಷಕ ವಿವರಣೆ ನೀಡಿದರು.
ಹಿರೇಮಠ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಿರಕ್ತಮಠ ಶಿವಬಸವ ಸ್ವಾಮೀಜಿ, ಕ್ಯಾರಗುಡ್ಡ ಅವುಜಿಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.