ಜಿ.ಶಂಕರ್ ಕಾಲೇಜಿನಲ್ಲಿ ಇನ್‌ಸ್ಪಾಯರ್-೨೦೨೪ ಸಂಪನ್ನ

| Published : Mar 28 2024, 12:51 AM IST

ಜಿ.ಶಂಕರ್ ಕಾಲೇಜಿನಲ್ಲಿ ಇನ್‌ಸ್ಪಾಯರ್-೨೦೨೪ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಕಾಲೇಜಿನ ನಿವೃತ್ತ ಪ್ರಾಂಶುಪಾಲರದ ಪ್ರೊ. ರಾಯ್ಕರ್ ಜಿ.ಆರ್. ಕಾರ್ಯಕ್ರಮದ ಉದ್ಘಾಟಿಸಿ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಭಾಸ್ಕರ್ ಶೆಟ್ಟಿ ಎಸ್. ಅಧ್ಯಕ್ಷತೆ ವಹಿಸಿದ್ದರು.

ಕನ್ನಡಪ್ರಭ ವಾರ್ತೆ ಉಡುಪಿನಗರದ ಅಜ್ಜರಕಾಡು ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಇನ್ ಸ್ಪಾಯರ್-೨೦೨೪ ಎಂಬ ಹೆಸರಿನಲ್ಲಿ ಅಂತರ್ ತರಗತಿ ಮಟ್ಟದ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್‌ ಫೆಸ್ಟ್ ನಡೆಯಿತು.ಕಾಲೇಜಿನ ನಿವೃತ್ತ ಪ್ರಾಂಶುಪಾಲರದ ಪ್ರೊ. ರಾಯ್ಕರ್ ಜಿ.ಆರ್. ಕಾರ್ಯಕ್ರಮದ ಉದ್ಘಾಟಿಸಿ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಭಾಸ್ಕರ್ ಶೆಟ್ಟಿ ಎಸ್. ಅಧ್ಯಕ್ಷತೆ ವಹಿಸಿದ್ದರು.ವಾಣಿಜ್ಯ ವಿಭಾಗದ ಮುಖ್ಯಸ್ಥೆ ಗೌರಿ ಎಸ್. ಭಟ್ ಸ್ವಾಗತಿಸಿದರು.ಪ್ರಾಧ್ಯಾಪಕರಾದ ಸೋಜನ್ ಕೆ.ಜೆ., ಡಾ.ಉಮೇಶ್ ಮಯ್ಯ, ಪುರುಷೋತ್ತಮ್ ಹಾಗೂ ವಾಣಿಜ್ಯ ಮತ್ತು ವ್ಯವಹಾರ ಸಂಘದ ವಿದ್ಯಾರ್ಥಿ ಕಾರ್ಯದರ್ಶಿಗಳಾದ ಬಾಂಧವ್ಯ ಮತ್ತು ಹುಸ್ನಾ ಉಪಸ್ಥಿತರಿದ್ದರು. ತೃತೀಯ ಬಿ.ಕಾಂ.ನ ಗೌರಿ ಕಾರ್ಯಕ್ರಮದ ನಿರೂಪಣೆ ಮಾಡಿದರು.ನಂತರ ವಿದ್ಯಾರ್ಥಿಗಳಿಗೆ ಬ್ಯುಸಿನೆಸ್ ಐಡಿಯಾ ಪ್ರೆಸೆಂಟೇಶನ್ ಸ್ಪರ್ಧೆ ನಡೆಸಲಾಯಿತು. ಸ್ಪರ್ಧಾಳುಗಳು ಪಿಪಿಟಿ ಪ್ರೆಸೆಂಟೇಷನ್ ಮೂಲಕ ಹೊಸ ರೀತಿಯ ಪ್ರಾಯೋಗಿಕವಾದ ಬಿಜಿನೆಸ್ ಐಡಿಯಾವನ್ನು ಪ್ರಸ್ತುತಪಡಿಸಿದ್ದರು.

ಅದಾದ ನಂತರ ಅಂತಿಮ ಬಿಕಾಂ ಮತ್ತು ಬಿಬಿಎ ವಿದ್ಯಾರ್ಥಿಗಳಿಗೆ ಬಿಸಿನೆಸ್ ಫೆಸ್ಟ್ ನಡೆಸಲು ಅವಕಾಶ ನೀಡಲಾಯಿತು. ವಿದ್ಯಾರ್ಥಿಗಳು ಒಂದು ದಿನದ ಮಟ್ಟಿಗೆ ತರಹೇವಾರು ಉದ್ಯಮಗಳನ್ನು ನಡೆಸಿ ಉದ್ಯಮಶೀಲತೆ ಗಳಿಸಿಕೊಂಡರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರು ಅಧ್ಯಕ್ಷತೆ ವಹಿಸಿದ್ದರು ಈ ಸಂದರ್ಭ ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಂಡರು. ಅದಾದ ನಂತರ ವಿಜೇತರಿಗೆ ಬಹುಮಾನವನ್ನು ನೀಡಿ ಅಭಿನಂದಿಸಲಾಯಿತು. ತೃತೀಯ ಬಿ.ಕಾಂನ ವಿದ್ಯಾರ್ಥಿನಿ ಶ್ರೇಯ ಕಾರ್ಯಕ್ರಮವನ್ನು ನಿರೂಪಿಸಿದ್ದರು.