ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ: ಜಯಕುಮಾರ್

| Published : Aug 20 2025, 01:30 AM IST

ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ: ಜಯಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ನಮ್ಮ ಸುತ್ತಮುತ್ತಲಿನ ಪರಿಸರ ಉತ್ತಮವಾಗಿರಬೇಕಾದರೆ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್ ಹೇಳಿದರು.

ಶೃಂಗೇರಿ ಶಾರದಾ ಭವನದಲ್ಲಿ ಶಾಂತಿಸಭೆ

ಕನ್ನಡಪ್ರಭ ವಾರ್ತೆ, ತರೀಕೆರೆ

ನಮ್ಮ ಸುತ್ತಮುತ್ತಲಿನ ಪರಿಸರ ಉತ್ತಮವಾಗಿರಬೇಕಾದರೆ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್ ಹೇಳಿದರು.ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಯಿಂದ ಪಟ್ಟಣದ ಶೃಂಗೇರಿ ಶಾರದಾ ಭವನದಲ್ಲಿ ಸೋಮವಾರ ಗೌರಿ ಗಣೇಶ ಹಾಗೂ ಈದ್‌ ಮಿಲಾದ್ ಪ್ರಯುಕ್ತ ಆಯೋಜಿಸಿದ್ದ ಶಾಂತಿಸಭೆಯಲ್ಲಿ ಮಾತನಾಡಿದರು. ಗಣಪತಿ ಪ್ರತಿಷ್ಠಾಾಪಿಸುವ ಸ್ಥಳದಲ್ಲಿ ಸುರಕ್ಷತೆ ದೃಷ್ಟಿಯಿಂದ ಸಿಸಿ ಕ್ಯಾಮೆರ ಅಳವಡಿಸಬೇಕು. ಸಮಿತಿಯವರು ಸ್ವಯಂ ಸೇವಕರನ್ನು ನೇಮಿಸಿ ಅಚ್ಚುಕಟ್ಟಾಾಗಿ ನಿರ್ವಹಣೆ ಮಾಡಬೇಕು. ಎಲ್ಲರೂ ಸಾಮರಸ್ಯದಿಂದ ಹಬ್ಬಗಳನ್ನು ಆಚರಿಸಬೇಕು ಎಂದು ತಿಳಿಸಿದರು.ಉಪವಿಭಾಗಾಧಿಕಾರಿ ನಟೇಶ್ ಮಾತನಾಡಿ, ಎಲ್ಲಾ ಧರ್ಮದವರ ಧಾರ್ಮಿಕ ಹಬ್ಬಗಳಲ್ಲಿ ಶಾಂತಿ, ಸೌಹಾರ್ಧತೆಯನ್ನು ಕಾಪಾಡಿಕೊಳ್ಳಬೇಕು. ಕಾನೂನಿನ ಉಲ್ಲಂಘನೆಗೆ ಅವಕಾಶವಿಲ್ಲ ಎಂದು ತಿಳಿಸಿದರು.ಡಿವೈಎಸ್‌ಪಿ ಹಾಲಮೂರ್ತಿರಾವ್ ಮಾತನಾಡಿ, ಗೌರಿ ಗಣೇಶ ಮತ್ತು ಈದ್‌ ಮಿಲಾದ್ ಹಬ್ಬಗಳ ಶಾಂತಿಯುತ ಆಚರಣೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಇಲಾಖೆ ಕೈಗೊಳ್ಳಲಿದೆ. ಅನಗತ್ಯವಾಗಿ ಸುಳ್ಳು ಸುದ್ದಿ ಹರಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮೆರವಣಿಗೆ ಸಂದರ್ಭದಲ್ಲಿ ಡಿಜೆ ಬಳಸಲು ಅವಕಾಶವಿಲ್ಲವೆಂದು ರಾಜ್ಯ ಉಚ್ಚ ನ್ಯಾಾಯಾಲಯದ ಆದೇಶವಿದೆ ಎಂದು ತಿಳಿಸಿದರು.ಪುರಸಭೆ ಅಧ್ಯಕ್ಷ ವಸಂತಕುಮಾರ್ ಮಾತನಾಡಿ, ಗೌರಿ ಗಣೇಶ ಮತ್ತು ಈದ್‌ ಮಿಲಾದ್ ಹಬ್ಬಗಳು ಸೌಹಾರ್ದತೆ ಸಂಕೇತ ಎಂದು ತಿಳಿಸಿದರು.

ಪುರಸಭೆ ಸದಸ್ಯ ಟಿ.ಎಂ.ಭೋಜರಾಜ್ ಮಾತನಾಡಿ, ಗೌರಿ ಗಣೇಶ ಮತ್ತು ಈದ್‌ ಮಿಲಾದ್ ಹಬ್ಬದ ಸಂದರ್ಭದಲ್ಲಿ ಅಪಪ್ರ ಚಾರಗಳಿಗೆ ಯಾರೂ ಕಿವಿಗೊಡಬಾರದು. ಯಾರಿಗೂ ತೊದರೆಯಾಗದಂತೆ ಹಬ್ಬ ಆಚರಿಸಬೇಕು ಎಂದು ತಿಳಿಸಿದರು.ಪೊಲೀಸ್ ಇನ್‌ಸ್‌‌ಪೆಕ್ಟರ್ ರಾಮಚಂದ್ರನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಉಪಾಧ್ಯಕ್ಷೆ ಪಾರ್ವತಮ್ಮ, ಸದಸ್ಯರಾದ ದಾದಾಪೀರ್, ಆದಿಲ್‌ಪಾಷಾ, ಪೊಲೀಸ್ ಇನ್‌ಸ್‌‌ಪೆಕ್ಟರ್‌ಗಳಾದ ಗಿರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ, ಪುರಸಭೆ ಮುಖ್ಯಾಾಧಿಕಾರಿ "ಜಯಕುಮಾರ್, ಮೆಸ್ಕಾಂ ಎಇಇ ಮಂಜುನಾಥ್, ಪಿಎಸ್‌ಐಗಳಾದ ನಾಗೇಂದ್ರನಾಯ್ಕ, ಶಶಿಕುಮಾರ್, ವಿಶ್ವನಾಥ್ ಹಾಗೂ ಇತರರು ಹಾಜರಿದ್ದರು.ಪೋಟೋ : ಇದೆ.