ಸಾರಾಂಶ
ಪಟ್ಟಣದ ಹೊರವಲಯದಲ್ಲಿ ನಾಲ್ಕು ಕಡೆಯಿಂದ, ಅರೆಮಲೆನಾಡು ಗಣಪನ ಬೀಡಿಗೆ ಸ್ವಾಗತ ನಾಮಫಲಕ ಅಳವಡಿಸಬೇಕು ಹಾಗೂ ವೀರಶೈವ ರುದ್ರಭೂಮಿಗೆ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿ ನಗರ ಘಟಕದ ರೈತ ಸಂಘದ ಪದಾಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಅವರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಪಟ್ಟಣದ ಹೊರವಲಯದಲ್ಲಿ ನಾಲ್ಕು ಕಡೆಯಿಂದ, ಅರೆಮಲೆನಾಡು ಗಣಪನ ಬೀಡಿಗೆ ಸ್ವಾಗತ ನಾಮಫಲಕ ಅಳವಡಿಸಬೇಕು ಹಾಗೂ ವೀರಶೈವ ರುದ್ರಭೂಮಿಗೆ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿ ನಗರ ಘಟಕದ ರೈತ ಸಂಘದ ಪದಾಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಅವರಿಗೆ ಮನವಿ ಸಲ್ಲಿಸಿದರು.ಹೊಳಲ್ಕೆರೆ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಎನ್.ಎಚ್13 ಸೊಲ್ಲಾಪುರದಿಂದ ಮಂಗಳೂರು ಮಾರ್ಗ ರಸ್ತೆ ಹಾದು ಹೋಗಿದ್ದು, ಪಟ್ಟಣದ ಮೂಲಕ ದಿನನಿತ್ಯ ಸಾವಿರಾರು ವಾಹನಗಳು ಈ ಮಾರ್ಗವಾಗಿ ಸಂಚರಿಸುತ್ತವೆ. ಅರೆಮಲೆನಾಡು ಗಣಪನ ಬೀಡು ಹೊಳಲ್ಕೆರೆ ಪುರಸಭೆಗೆ ಸುಸ್ವಾಗತ ಎನ್ನುವ ಹೆಸರಿಟ್ಟು ಶಿವಮೊಗ್ಗ ರಸ್ತೆಯ ಕುಕ್ಕಡೇಶ್ವರಿ ದೇವಾಲಯ, ದುರ್ಗದ ಒಂಟಿ ಕಂಬ, ಹೊಸದುರ್ಗ ರಸ್ತೆಯ ಸಪ್ತಪದಿ ಕಲ್ಯಾಣ ಮಂಟಪ, ದಾವಣಗೆರೆ ರಸ್ತೆಯ ಮೈರಾಡ ಮುಂಭಾಗ ನಾಲ್ಕು ಸುಸ್ವಾಗತ ಕಮಾನು ಬೋರ್ಡ್ ಗಳನ್ನು ಹಾಕಬೇಕು ಎಂದು ಒತ್ತಾಯಿಸಿದರು.ಪಟ್ಟಣದ ವೀರಶೈವ ಲಿಂಗಾಯತ ಸಮಾಜದ ರುದ್ರಭೂಮಿ ಹಾಗೂ ಹಿಂದೂ ಸಮಾಜದ ರುದ್ರಭೂಮಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ದೇವಸ್ಥಾನ, ಜಂಗಲ್ ಕ್ಲೀನ್ ಮಾಡಬೇಕು. ದೇಗುಲದ ಕಾಪೌಂಡ್ ನಿರ್ಮಾಣಕ್ಕೆ 2025ರ ಮಾರ್ಚಿನಲ್ಲಿ ನಡೆಯುವ ಪುರಸಭಾ ಪ್ರಥಮ ಬಜೆಟ್ ನಲ್ಲಿ ಅನುದಾನ ಮೀಸಲಿಟ್ಟು ಅಭಿವೃದ್ಧಿಪಡಿಸಬೇಕೆಂದು ಅಗ್ರಹಿಸಿದ್ದಾರೆ.
ನಗರ ಘಟಕದ ರೈತ ಸಂಘದ ಅಧ್ಯಕ್ಷ ಎಸ್. ಸಿದ್ದರಾಮಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಎನ್. ಅಜಯ್, ಗೌರವಾಧ್ಯಕ್ಷ ಸಿದ್ದರಾಮಪ್ಪ, ಉಪಾಧ್ಯಕ್ಷ ಸನಾಉಲ್ಲಾ, ಕಾಂತರಾಜ್, ಶಂಕ್ರಪ್ಪ, ಪ್ರಭಾಕರ್, ಗುರುರಾಜ್, ಲೋಕೇಶ್, ಶ್ರೀಧರ್, ಖಜಾಂಚಿ ಶಿವಮೂರ್ತಿ, ಲೋಕಮಾನ್ಯ, ಶಿವುನಾಡಿಗ್, ಮಲ್ಲಿಕಣ್ಣ, ಬಸಪ್ಪ, ನಾಗರಾಜ್, ಕುಮಾರಾಚಾರ್, ನೂರುಲ್ಲಾ ಹಾಗು ರೈತರು ಪಾಲ್ಗೊಂಡಿದ್ದರು.