18 ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ

| Published : Mar 20 2024, 01:24 AM IST

ಸಾರಾಂಶ

ದಾಬಸ್‌ಪೇಟೆ: ಪಟ್ಟಣದಲ್ಲಿ ದಿನೇದಿನೇ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿವೆ. ಇವುಗಳ ನಿಯಂತ್ರಣ ಹಾಗೂ ಅಪರಾಧಗಳನ್ನು ಪರಿಶೀಲಿಸಲು ಪೊಲೀಸರ ಮನವಿ ಮೇರೆಗೆ ಪಟ್ಟಣದ ಎಲ್ಲಾ ವೃತ್ತಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ ಎಂದು ಸೋಂಪುರ ಗ್ರಾಪಂ ಅಧ್ಯಕ್ಷೆ ಪ್ರೇಮಾ ತೀರ್ಥಪ್ರಸಾದ್ ಹೇಳಿದರು.

ದಾಬಸ್‌ಪೇಟೆ: ಪಟ್ಟಣದಲ್ಲಿ ದಿನೇದಿನೇ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿವೆ. ಇವುಗಳ ನಿಯಂತ್ರಣ ಹಾಗೂ ಅಪರಾಧಗಳನ್ನು ಪರಿಶೀಲಿಸಲು ಪೊಲೀಸರ ಮನವಿ ಮೇರೆಗೆ ಪಟ್ಟಣದ ಎಲ್ಲಾ ವೃತ್ತಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ ಎಂದು ಸೋಂಪುರ ಗ್ರಾಪಂ ಅಧ್ಯಕ್ಷೆ ಪ್ರೇಮಾ ತೀರ್ಥಪ್ರಸಾದ್ ಹೇಳಿದರು.

ಸೋಂಪುರ ಗ್ರಾಪಂ 6 ಲಕ್ಷ ವೆಚ್ಚದ ಸಿಸಿಟಿವಿಗಳನ್ನು ಅಳವಡಿಸಿ ಪೊಲೀಸ್ ಠಾಣೆಯ ನಿರೀಕ್ಷಕ ಬಿ.ರಾಜು ಅವರಿಗೆ ಪರಿಕರಗಳನ್ನು ಹಸ್ತಾಂತರಿಸಿದರು.

ಆರಕ್ಷಕ ನಿರೀಕ್ಷಕ ರಾಜು ಮಾತನಾಡಿ, ಪೊಲೀಸ್ ಠಾಣಾ ವ್ಯಾಪ್ತಿಗೆ ಅತಿದೊಡ್ಡ ಸೋಂಪುರ ಕೈಗಾರಿಕಾ ಪ್ರದೇಶ ಒಳಪಟ್ಟಿದೆ. ಈ ಪ್ರದೇಶದಲ್ಲಿ ಬೈಕ್, ಕಾರು ಕಳ್ಳತನ ಹಾಗೂ ಮೊಬೈಲ್ ಕಳ್ಳತನ ನಡೆಯುತ್ತಿವೆ. ಈ ಪ್ರಕರಣಗಳನ್ನು ಬೇಧಿಸಿ ಆರೋಪಿಗಳನ್ನು ಕಂಡು ಹಿಡಿಯಲು ಸಿಸಿಟಿವಿ ನೆರವಾಗಲಿದೆ ಎಂದು ಹೇಳಿದರು.

ಸೋಂಪುರ ಗ್ರಾಪಂ ವತಿಯಿಂದ 16 ಸಿಸಿಟಿವಿ ಅಳವಡಿಸಲಾಗಿದೆ. ಯಾವ ಸರ್ಕಲ್‌ನಲ್ಲಿ ಅಪರಾಧ ನಡೆದರೂ ನಮ್ಮ ಠಾಣೆಗೆ ತಿಳಿಯುತ್ತದೆ. ವಾಹನಗಳ ನಂಬರ್ ಪ್ಲೇಟ್ ಗುರುತಿಸುವ ಪಿಟಿಝಡ್, 360 ಡಿಗ್ರಿ ಮಾದರಿಯ 4 ಸಿಸಿಟಿವಿಗಳನ್ನು ಮುಂದಿನ ದಿನಗಳಲ್ಲಿ ನೀಡುವಂತೆ ಮನವಿ ಮಾಡಿದ್ದೇವೆ ಎಂದರು.

ಆರಕ್ಷಕ ಉಪನಿರೀಕ್ಷಕ ಸಿದ್ದಯ್ಯ, ಉಪಾಧ್ಯಕ್ಷೆ ಲಾವಣ್ಯ, ಪಿಡಿಒ ರವಿಶಂಕರ್, ಕಾರ್ಯದರ್ಶಿ ಎಚ್. ಹನುಮಂತರಾಜು, ಲೆಕ್ಕ ಸಹಾಯಕ ಎಚ್.ಮಂಜುನಾಥ್‌, ಗ್ರಾಪಂ ಸದಸ್ಯರಾದ ಶಿವಕುಮಾರ್, ನಾಗರತ್ನಮ್ಮ, ಮಹಾಲಕ್ಷಮ್ಮ, ಇಂದ್ರಮ್ಮ ಪರಮೇಶ್, ಶಿಲ್ಪರಂಗಸ್ವಾಮಿ, ಬಸವರಾಜು, ಲಕ್ಷ್ಮೀದೇವಿ, ಅಶೋಕ, ಪ್ರೇಮಾ, ಚಿಕ್ಕಮ್ಮ, ಮಂಗಳಮ್ಮ ಉಪಸ್ಥಿತರಿದ್ದರು.ಫೋಟೋ 3 :

ದಾಬಸ್‌ಪೇಟೆಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳ ಪರಿಕರಗಳನ್ನು ಠಾಣೆಯ ನಿರೀಕ್ಷಕ ರಾಜು ಅವರಿಗೆ ಸೋಂಪುರ ಗ್ರಾಪಂ ಅಧ್ಯಕ್ಷೆ ಪ್ರೇಮಾ ಹಸ್ತಾಂತರಿಸಿದರು.