ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಉಲ್ಲಂಜೆ ಜಂಕ್ಷನ್ ಬಳಿ ಗ್ರಾಮಸ್ಥರ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಬೇಡಿಕೆಯಂತೆ ಮುಂಜಾಗ್ರತ ಕ್ರಮವಾಗಿ ಅಳವಡಿಸಲಾದ ಸಿ ಸಿ ಕ್ಯಾಮೆರಾಕ್ಕೆ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆ ಅಂಗಡಿಯವರು ಚಾಲನೆ ನೀಡಿದರು.

ಕನ್ನಡಪ್ರಭವಾರ್ತೆ ಮೂಲ್ಕಿ

ಈ ಸಂದರ್ಭ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ಸದಸ್ಯರಾದ ಪ್ರಕಾಶ್ ಕಿನ್ನಿಗೋಳಿ, ಲೋಕಯ್ಯ ಸಾಲಿಯನ್ ಕೊಂಡೆಲಾ, ಶೈಲೇಶ್ ಅಂಚನ್, ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ, ಕೊಡೆತ್ತೂರು ಅರಸು ಕುಂಜರಾಯ ದೈವಸ್ಥಾನದ ಜಯರಾಮ್ ಮುಕ್ಕಾಲ್ದಿ, ಶ್ರೀದೇವಿ ಪ್ರಸಾದ್ ಶೆಟ್ಟಿ ಕೊಡೆತ್ತೂರು, ಪ್ರೇಮ್ ರಾಜ್ ಶೆಟ್ಟಿ , ಮೂರು ಕಾವೇರಿ ಮಹಾಮಾಯಿ ದೇವಸ್ಥಾನದ ಕೃಷ್ಣಪಾತ್ರಿ, ಯುವಶಕ್ತಿ ಫ್ರೆಂಡ್ಸಿನ ಅಧ್ಯಕ್ಷ ಉಮಾನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.