ದ್ಯಾಮವ್ವ, ದುರ್ಗಮ್ಮ ದೇವತೆಯರ ಪ್ರತಿಷ್ಠಾಪನೆ

| Published : Jul 01 2025, 12:47 AM IST

ಸಾರಾಂಶ

ಗ್ರಾಮ ದೇವತೆಯರಾದ ದ್ಯಾಮವ್ವ ಮತ್ತು ದುರ್ಗಮ್ಮ ದೇವತೆಯರನ್ನು ನಗರದ ಜೀನಗಾರ ಮನೆಯಿಂದ ಅಂಬಿಗೇರ ಗಲ್ಲಿಗೆ ಕರೆ ತಂದು ಸಾಂಪ್ರದಾಯದಂತೆ ಪ್ರತಿಷ್ಠಾಪಿಸಲಾಯಿತು.

ಕನ್ನಡಪ್ರಭ ವಾರ್ತೆ ಗೋಕಾಕ

ಗ್ರಾಮ ದೇವತೆಯರಾದ ದ್ಯಾಮವ್ವ ಮತ್ತು ದುರ್ಗಮ್ಮ ದೇವತೆಯರನ್ನು ನಗರದ ಜೀನಗಾರ ಮನೆಯಿಂದ ಅಂಬಿಗೇರ ಗಲ್ಲಿಗೆ ಕರೆ ತಂದು ಸಾಂಪ್ರದಾಯದಂತೆ ಪ್ರತಿಷ್ಠಾಪಿಸಲಾಯಿತು.

ನಗರದ ಜೀನಗಾರ ಮನೆಯಲ್ಲಿ ಬಣ್ಣಕ್ಕೆ ತೆರಳಿದ್ದ ದೇವಿಯರ ವಿಗ್ರಹಗಳನ್ನು ಸೋಮವಾರ ವಿಶೇಷ ಪೂಜೆ ಸಲ್ಲಿಸಿ ಗ್ರಾಮ ದೇವತೆಯರ ಜಾತ್ರಾ ಕಮಿಟಿಯವರ ನೇತೃತ್ವದಲ್ಲಿ ಗ್ರಾಮ ದೇವತೆಯರಾದ ದ್ಯಾಮವ್ವ ಮತ್ತು ದುರ್ಗಮ್ಮ ದೇವತೆಯರನ್ನು ನಗರದ ವಿವಿಧ ಬೀದಿಗಳಲ್ಲಿ ಮೆರವಣಿಗೆ ಮೂಲಕ ಅಂಬಿಗೇರ ಗಲ್ಲಿಗೆ ಕರೆ ತಂದು ಸಾಂಪ್ರದಾಯದಂತೆ ಪ್ರತಿಷ್ಠಾಪಿಸಲಾಯಿತು. ಮೆರವಣಿಗೆಯೂದ್ದಕ್ಕೂ ದೇವತೆಯರ ಪರ ಜಯಘೋಷ, ಭಜನೆ, ವಿವಿಧ ವಾದ್ಯಮೇಳಗಳೊಂದಿಗೆ ಸಾವಿರಾರು ಜನ ಭಕ್ತಾದಿಗಳು ಭಾಗವಹಿಸಿ ಶ್ರೀದೇವಿಯರ ಭಕ್ತಿಗೆ ಪಾತ್ರರಾದರು. ಮೆರವಣಿಗೆಯಲ್ಲಿ 200ಕ್ಕೂ ಹೆಚ್ಚು ಜನ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿತ್ತು.ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಹಿರಿಯ ರಾಜಕೀಯ ಮುಖಂಡ ಅಶೋಕ ಪೂಜಾರಿ, ಯುವ ಮುಖಂಡರಾದ ಅಮರನಾಥ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ಸನತ ಜಾರಕಿಹೊಳಿ, ಜಾತ್ರಾ ಕಮೀಟಿಯ ಪ್ರಭು ಚವ್ಹಾನ, ಬಸವಣ್ಣೆಪ್ಪ ಬನ್ನಿಶೆಟ್ಟಿ, ಶ್ರೀಪಾದ ದೇಶಪಾಂಡೆ, ಅಶೋಕ ಹೆಗ್ಗಣ್ಣವರ, ಅಡಿವೆಪ್ಪ ಕಿತ್ತೂರ, ತಹಸೀಲ್ದಾರ್‌ ಡಾ.ಮೋಹನ ಭಸ್ಮೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಘಸ್ತೆ, ನಗರಸಭೆ ಪ್ರಭಾರ ಪೌರಾಯುಕ್ತ ಆರ್.ಎಸ್.ರಣಸುಭೆ, ಡಿವೈಎಸ್ಪಿ ರವಿ ನಾಯಿಕ, ಸಿಪಿಐ ಸುರೇಶಬಾಬು, ಪಿಎಸೈಗಳಾದ ಕೆ.ಬಿ.ವಾಲಿಕಾರ, ಕಿರಣ ಮೋಹಿತೆ ಇದ್ದರು.