ಸಾರಾಂಶ
ಸ್ವರ್ಣ ಗಣೇಶ ಮೂರ್ತಿ ಪ್ರತಿಷ್ಠಾಪನಾ ವಿವಿಧ ಪೂಜೆ, ಧಾರ್ಮಿಕ ಕೈಂಕರ್ಯಗಳೊಂದಿಗೆ ಅತಿ ವಿಜೃಂಭಣೆಯಿಂದ ಶ್ರದ್ಧಾ ಭಕ್ತಿಯಿಂದ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಯಿತು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ 61ನೇ ವರ್ಷದ ಸ್ವರ್ಣ ಗಣೇಶ ಮೂರ್ತಿ ಪ್ರತಿಷ್ಠಾಪನಾ ವಿವಿಧ ಪೂಜೆ ಹಾಗೂ ಧಾರ್ಮಿಕ ಕೈಂಕರ್ಯಗಳೊಂದಿಗೆ ಅತೀ ವಿಜೃಂಭಣೆ ಶ್ರದ್ಧಾ ಭಕ್ತಿಯಿಂದ ಬುಧವಾರ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಯಿತು. ಬೆಳಗ್ಗೆ 10.30ಕ್ಕೆ ಗಣಹೋಮದೊಂದಿಗೆ ಆರಂಭಗೊಂಡು 11.30ಗಂಟೆಗೆ ತುಲಾ ಲಗ್ನದಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪಿಸಲಾಯಿತು.ದಿನದ ವಿಶೇಷ ಪೂಜಾ ಕೈಂಕರ್ಯಗಳನ್ನು ಹಿರಿಯ ಹಾ.ಮ.ಗಣೇಶ್ ಶರ್ಮಾ, ಮಂಜುನಾಥ್ ಶರ್ಮಾ ನೆರವೇರಿಸಿದರು. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಮಂಗಳಾರತಿ ಹಾಗೂ ನೆರೆದಿದ್ದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಶ್ರೀರಾಮ ಸೇವಾ ಸಮಿತಿ ಟ್ರಸ್ಟಿ ಕಾರ್ಯದರ್ಶಿ ಆಶೋಕ್‌ಶೇಟ್, ಟ್ರಸ್ಟಿ ಎ.ಲೋಕೇಶ್‌ಕುಮಾರ್, ಶಾಂತರಾಂ ಕಾಮತ್, ಬಿ.ಎಂ.ಸುರೇಶ್, ಧನು ಕಾವೇರಪ್ಪ, ಎಂ.ಎಸ್.ಸುನಿಲ್, ಪಟ್ಟೆಮನೆ ಉದಯಕುಮಾರ್, ಪಟ್ಟೆಮನೆ ಸದಾಶಿವ, ಪಟ್ಟೆಮನೆ ಅನಿಲ್‌ಕುಮಾರ್, ಬಿ.ಕೆ.ಮೋಹನ್, ಗೌರಿಗಣೇಶೋತ್ಸವ ಸಮಿತಿಯ ಅಧ್ಯಕ್ಷ ಎಸ್.ವಿಘ್ನೇಶ್, ಉಪಾಧ್ಯಕ್ಷರಾದ ಬಿ.ಕೆ.ಪ್ರಶಾಂತ್, ಸಿ.ಸಿ.ಸುನಿಲ್‌ಕುಮಾರ್, ಎಂ.ಗಣೇಶ್, ಪ್ರಧಾನಕಾರ್ಯದರ್ಶಿಎಚ್. ಎಂ.ನಿಖಿಲ್, ಖಜಾಂಜಿ ಪದ್ಮನಾಭ, ಪದಾಧಿಕಾರಿಗಳಾದ ಎಂ. ಪಾಂಡ್ಯನ್, ಎಚ್.ನವೀನ್, ಜಿ.ಹೃತಿಕ್, ಆರ್.ಮಣಿ, ಕೆ.ಎಂ.ಅಜಿತ್, ಆರ್.ಪ್ರಶಾಂತ್, ಎಸ್.ರಾಜೇಶ್, ಬಿ.ಡಿ.ಆಶ್ವಥ್, ಹೆಚ್.ಸಿ.ಯೋಗೇಶ್, ಚೇತನ್, ಆರ್.ಪುನೀತ್, ಗುಣಶೇಖರ್, ತ್ರೀಜಲ್, ಮಹೇಶ್, ದಿನೇಶ್, ಮಿಥುನ್, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನೂರಾರು ಭಕ್ತಾದಿಗಳು ನೆರೆದಿದ್ದರು.