ಸಾರಾಂಶ
ಚಿಕ್ಕಮಗಳೂರು, ಹನ್ನೊಂದನೇ ವರ್ಷದ ಹಿಂದೂ ಮಹಾ ಗಣಪತಿ ಹಬ್ಬದ ಅಂಗವಾಗಿ ಶ್ರದ್ಧಾಭಕ್ತಿ ಹಾಗೂ ಹಿಂದೂ ಸಂಪ್ರದಾಯದಂತೆ ಧಾರ್ಮಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ಸೆ.7 ರಿಂದ ಸೆ.18 ರವರೆಗೆ ಗಣೇಶೋತ್ಸವ ಹಮ್ಮಿಕೊಂಡಿದೆ ಎಂದು ಹಿಂದೂ ಮಹಾ ಗಣಪತಿ ಸೇವಾ ಸಂಘದ ನಿರ್ದೇಶಕ ಸಂತೋಷ್ ಕೋಟ್ಯಾನ್ ಹೇಳಿದರು.
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಹನ್ನೊಂದನೇ ವರ್ಷದ ಹಿಂದೂ ಮಹಾ ಗಣಪತಿ ಹಬ್ಬದ ಅಂಗವಾಗಿ ಶ್ರದ್ಧಾಭಕ್ತಿ ಹಾಗೂ ಹಿಂದೂ ಸಂಪ್ರದಾಯದಂತೆ ಧಾರ್ಮಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ಸೆ.7 ರಿಂದ ಸೆ.18 ರವರೆಗೆ ಗಣೇಶೋತ್ಸವ ಹಮ್ಮಿಕೊಂಡಿದೆ ಎಂದು ಹಿಂದೂ ಮಹಾ ಗಣಪತಿ ಸೇವಾ ಸಂಘದ ನಿರ್ದೇಶಕ ಸಂತೋಷ್ ಕೋಟ್ಯಾನ್ ಹೇಳಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಬಸವನಹಳ್ಳಿ ಮುಖ್ಯರಸ್ತೆ ಓಂಕಾರೇಶ್ವರ ದೇವಾಲಯ ಹಿಂಭಾಗ ದಲ್ಲಿ ಭವ್ಯ ಮಂಪಟದಲ್ಲಿ ವಿಭಿನ್ನ ಶೈಲಿಯಲ್ಲಿ ಮಂಪಟದ ಸುತ್ತಲು ಅಲಂಕರಿಸಲಾಗುವುದು ಎಂದು ತಿಳಿಸಿದರು.ಬಾಲಗಂಗಾಧರ ತಿಲಕ್ ಹಾಗೂ ವಿನಾಯಕ ದಾಮೋದರ ಸಾವರ್ಕರ್ ಚಿಂತನೆ ಹಾಗೂ ಪ್ರೇರಣೆಯಿಂದ ಆರಂಭವಾದ ಹಿಂದೂ ಮಹಾ ಗಣಪತಿ ಸಮಾಜ ಕೇವಲ ಧಾರ್ಮಿಕ ಚಟುವಟಿಕೆ, ಗಣೇಶೋತ್ಸವಕ್ಕೆ ಸೀಮಿತವಾಗದೇ ಅನೇಕ ಸೇವಾ ಚಟುವಟಿಕೆಗಳನ್ನು ರೂಪಿಸಲಾಗುತ್ತಿದೆ ಎಂದರು.
ಗಣೇಶೋತ್ಸವ ಕಾರ್ಯಕ್ರಮ ಸೆ.8 ರಂದು ಭರತನಾಟ್ಯ, 9 ರಂದು ಸಂಗೀತ ಹಾಗೂ ನೃತ್ಯ, 10 ರಂದು ಭಕ್ತಿಭಾವ ಸಂಗಮ, 11 ರಂದು ಯೋಧ ನಮನ, 12 ರಂದು ನೃತ್ಯ ರೂಪಕ, 13 ಛದ್ಮವೇಷ, 14 ಜುಗಲ್ ಬಂಧಿ, 15 ಭರತನಾಟ್ಯ, 16 ಯಕ್ಷಗಾನ, 17 ರಂದು ಸಮಾರೋಪ ಸಮಾರೋಪ, ಬಹುಮಾನ ವಿತರಣೆ ಹಾಗೂ 18 ರಂದು ಮಧ್ಯಾಹ್ನ 2 ಗಂಟೆಗೆ ಗಣೇಶಮೂರ್ತಿಯನ್ನು ನಗರದ ಪ್ರಮಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ವಿಸರ್ಜಿಸಲಾಗುವುದು. ಗಣೇಶೋತ್ಸವದಲ್ಲಿ ಪ್ರತಿನಿತ್ಯ ಸಂಜೆ 5.30 ರಿಂದ 6.30 ರವರೆಗೆ ಭಜನೆ ನಡೆಯಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಆಟೋ ಶಿವಣ್ಣ, ನಿರ್ದೇಶಕ ಶ್ಯಾಮ್ ವಿ.ಗೌಡ, ಶರತ್, ಗೌತಮ್, ನೂತನ್ ಹಾಜರಿದ್ದರು. 5 ಕೆಸಿಕೆಎಂ 6
-----ಆಜಾದ್ ಪಾರ್ಕ್ ಗಣಪತಿಯಲ್ಲಿ 29 ರವರೆಗೆ ವಿವಿಧ ಕಾರ್ಯಕ್ರಮ - ಕೇಶವಮೂರ್ತಿಚಿಕ್ಕಮಗಳೂರು: ನಗರದ ಆಜಾದ್ ಮೈದಾನದ 88ನೇ ವರ್ಷದ ಶ್ರೀ ಗಣಪತಿ ಪ್ರತಿಷ್ಟಾಪನಾ ಮಹೋತ್ಸವ ಸೆ.7 ರಿಂದ ಸೆ.29 ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ನಗರದ ಬೋಳರಾಮೇಶ್ವರ ಆವರಣದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ಶ್ರೀ ಗಣಪತಿ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಆರ್.ಕೇಶವಮೂರ್ತಿ ಹೇಳಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.7 ರಂದು ಮಧ್ಯಾಹ್ನ 3 ಗಂಟೆಗೆ ಗಣಪತಿ ವಿಗ್ರಹವನ್ನು ಮೆರವಣಿಗೆ ಮುಖಾಂತರ ಬೋಳರಾಮೇಶ್ವರ ದೇವಾಲಯದ ಆವರಣಕ್ಕೆ ಕರೆತಂದು ಸಂಜೆ 5ಕ್ಕೆ ಪ್ರತಿಷ್ಠಾಪಿಸಿ 21 ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಸೆ.28 ರಂದು ಮಧ್ಯಾಹ್ನ 3ಕ್ಕೆ ಅಲಂಕೃತ ಪ್ರಭಾವಳಿಯಲ್ಲಿ ಕುಳ್ಳಿರಿಸಿ, ಕೀಲುಕುದುರೆ, ನೃತ್ಯ, ಸ್ಯಾಕ್ಸೋಫೋನ್, ವಾದ್ಯ, ವೀರಗಾಸೆ ಕುಣಿತ, ಡೊಳ್ಳು ಕುಣಿತ, ಹಳ್ಳಿವಾದ್ಯ ಸೇರಿದಂತೆ ಮುಂತಾದ ಜನಪದ ಕಲಾತಂಡಗಳೊಂದಿಗೆ ಪ್ರಮುಖ ಬೀದಿ ಗಳಲ್ಲಿ ಮೆರವಣಿಗೆ ಸಾಗಿ ಸೆ.29 ರಂದು ಮುಂಜಾನೆ ಬಸವನಹಳ್ಳಿ ಕೆರೆಯಲ್ಲಿ ವಿಸರ್ಜಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸೇವಾ ಸಮಿತಿ ಅಧ್ಯಕ್ಷ ಸಿ.ಎಸ್.ಕುಬೇರ, ಗೌರವಾಧ್ಯಕ್ಷ ದಿವಾಕರ್, ಉಪಾಧ್ಯಕ್ಷ ಉಮೇಶ್, ಕಾರ್ಯದರ್ಶಿ ಸಚ್ಚಿನ್‌ಗೌಡ, ಖಜಾಂಚಿ ಎಚ್.ಕೆ.ಮಂಜುನಾಥ್, ಕಾರ್ಯಾಧ್ಯಕ್ಷ ಈಶ್ವರಪ್ಪ ಹಾಜರಿದ್ದರು.ಪೋಟೋ ಫೈಲ್ ನೇಮ್ 5 ಕೆಸಿಕೆಎಂ 7