ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ವಿದ್ಯುತ್ ಉಳಿತಾಯದ ಜೊತೆಗೆ ಅವಘಡಗಳನ್ನು ತಡೆಯಲು ಪಟ್ಟಣದ್ಯಾಂತ ಎಲ್‌ಟಿಎಬಿ ವಿದ್ಯುತ್ ಕೇಬಲ್ ಅಳವಡಿಸಲಾಗುತ್ತಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.ಪಟ್ಟಣದ ಸಿದ್ಧಾರ್ಥನಗರದಲ್ಲಿ ಎಲ್.ಟಿ ವಿದ್ಯುತ್ ವಾಹಕವನ್ನು ಬದಲಾಯಿಸಿ ಎಲ್‌ಟಿ ಎಬಿ ವಿದ್ಯುತ್ ಕೇಬಲ್ ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಿದ ನಂತರ ಮಾತನಾಡಿ, ಮಳೆಗಾಲದಲ್ಲಿ ಆಗುತ್ತಿದ್ದ ವಿದ್ಯುತ್ ಅಡಚಣೆ, ಸೋರಿಕೆ ಹಾಗೂ ಅಪಘಾತವನ್ನು ನಿಯಂತ್ರಿಸಲು ವಿದ್ಯುತ್ ಕೇಬಲ್ ಅಳವಡಿಕೆ ಸಹಕಾರಿಯಾಗಿದೆ ಎಂದರು.ಚೆಸ್ಕಾಂ ಎಇಇ ಪ್ರೇಮ್‌ಕುಮಾರ್ ಮಾತನಾಡಿ, ಪಟ್ಟಣಾದ್ಯಂತ ವಿದ್ಯುತ್ ಕೇಬಲ್ ಅಳವಡಿಸಲು ಈಗಾಗಲೇ 5 ಕೋಟಿ ರು. ಅನುದಾನ ಬಿಡುಗಡೆಯಾಗಿದೆ, ಶಾಸಕರಾದ ಪಿ.ಎಂ. ನರೇಂದ್ರಸ್ವಾಮಿ ಅವರ ಸಹಕಾರದೊಂದಿಗೆ ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪಟ್ಟಣದ ಎಲ್ಲಾ ವಾರ್ಡ್‌ಳಿಗೂ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಲು ಹೆಚ್ಚುವರಿ 5 ಕೋಟಿ ಬಿಡುಗಡೆಗೊಳಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆಂದು ಹೇಳಿದರು.
ಕೇಬಲ್ ಅಳವಡಿಕೆಯಿಂದ ಅನಾವಶ್ಯಕವಾಗಿ ಉಂಟಾಗುವ ವಿದ್ಯುತ್ ಅಡಚಣೆಗಳನ್ನು ನಿಯಂತ್ರಿಸುವುದರಿಂದ ವಿದ್ಯುತ್ ಸಮಸ್ಯೆ ಸಂಪೂರ್ಣ ಬಗೆಹರಿಸಿದಂತಾಗುತ್ತದೆ. ಸಾರ್ವಜನಿಕರು ಕಾಮಗಾರಿ ಅಂತಿಮಗೊಳ್ಳಲು ಸಹಕಾರ ನೀಡಬೇಕೆಂದು ಕೋರಿದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೊಡ್ಡಯ್ಯ, ಸಿ.ಪಿ.ರಾಜು, ಗ್ಯಾರಂಟಿ ಯೋಜನೆ ಅನುಷ್ಠಾನದ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ, ಮನ್ಮುಲ್ ನಿರ್ದೇಶಕ ಆರ್.ಎನ್ ವಿಶ್ವಾಸ್, ಪುರಸಭೆ ಸದಸ್ಯರಾದ ಶಿವಸ್ವಾಮಿ, ಪ್ರಮೀಳ, ಮುಖಂಡರಾದ ಸಂತೋಷ್, ಕಿರಣ್ ಶಂಕರ್, ಬಸವರಾಜು, ಆನಂದ್, ಆಜಾಮ್, ಆಯೂಬ್, ಮಂಜುನಾಥ್ ಪ್ರಮೀಳ, ಅಜೀದ್, ನಾರಯಣ್‌ಸ್ವಾಮಿ, ಅಶೋಕ್ ಶಿವಶಂಕರ್, ಶಂಕರ್ ಮೂರ್ತಿ, ಶಂಕರ್, ನಾಗಣ್ಣ, ಕುಮಾರ್, ವಿಷಕಂಠಮೂರ್ತಿ, ಸಿದ್ದರಾಜು, ಪ್ರಕಾಶ, ಯುವ ಮುಖಂಡ ಚೇತನ್ ನಾಯಕ್ ಸೇರಿದಂತೆ ಇತರರು ಇದ್ದರು.