ಸಿದ್ದಗಂಗಾ ಕಾಲೇಜಲ್ಲಿ ಪೇಪರ್‌ ಗಣೇಶಮೂರ್ತಿ ಪ್ರತಿಷ್ಠಾಪನೆ

| Published : Sep 13 2024, 01:33 AM IST

ಸಿದ್ದಗಂಗಾ ಕಾಲೇಜಲ್ಲಿ ಪೇಪರ್‌ ಗಣೇಶಮೂರ್ತಿ ಪ್ರತಿಷ್ಠಾಪನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾಗಡಿ: ಪಟ್ಟಣದ ಸಿದ್ದಗಂಗಾ ಕಾಲೇಜಿನ ಕಲಾ ಮಂದಿರದಲ್ಲಿ ಪರಿಸರ ಸ್ನೇಹಿ 5 ಅಡಿಯ ಪೇಪರ್ ಗಣೇಶಮೂರ್ತಿ ಪ್ರತಿಷ್ಠಾಪಿಸಿರುವುದು ಸಾರ್ವಜನಿಕರ ಗಮನ ಸೆಳೆಯಿತು.

ಮಾಗಡಿ: ಪಟ್ಟಣದ ಸಿದ್ದಗಂಗಾ ಕಾಲೇಜಿನ ಕಲಾ ಮಂದಿರದಲ್ಲಿ ಪರಿಸರ ಸ್ನೇಹಿ 5 ಅಡಿಯ ಪೇಪರ್ ಗಣೇಶಮೂರ್ತಿ ಪ್ರತಿಷ್ಠಾಪಿಸಿರುವುದು ಸಾರ್ವಜನಿಕರ ಗಮನ ಸೆಳೆಯಿತು.

ಸಿದ್ದಗಂಗಾ ವಿದ್ಯಾಸಂಸ್ಥೆಯ ದಾವಣಗೆರೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಕೈ ಚಳಕದಲ್ಲಿ ಮೂಡಿಬಂದಿರುವ ಈ ಗಣಪನನ್ನು ಸಂಪೂರ್ಣವಾಗಿ ಕಾಗದ, ಮೈದಾ ಅಂಟು ಮತ್ತು ಇದ್ದಿಲಿನ ಪುಡಿಯಿಂದ ನಿರ್ಮಿಸಲಾಗಿದೆ. 5 ಅಡಿ ಎತ್ತರದ ಗಣಪ ಕೇವಲ 2 ಮಕ್ಕಳು ಸುಲಭವಾಗಿ ಎತ್ತಿ ಇಳಿಸಬಹುದಾಗಿದೆ.

ದಾವಣಗೆರೆಯ ವಿದ್ಯಾರ್ಥಿಗಳು ಪೇಪರ್‌ ಗಣೇಶಮೂರ್ತಿಯನ್ನು ಮಾಗಡಿಗೆ ಕಳುಹಿಸಿಕೊಟ್ಟಿದ್ದು ಸಿದ್ದಗಂಗಾ ಕಲಾ ಮಂದಿರದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಪರಿಸರ ಸ್ನೇಹಿ ಗಣಪತಿ ಮೂರ್ತಿಯನ್ನುನಿರ್ಮಾಣ ಮಾಡಲು ಸಹಕರಿಸಿದ ದಾವಣಗೆರೆ ಸಿದ್ದಗಂಗಾ ಸಂಸ್ಥೆಯ ನಿರ್ದೇಶಕರಾದ ಡಾ. ಜಯಂತ್, ಕಾರ್ಯದರ್ಶಿಗಳಾದ ಡಿ.ಎಸ್.ಹೇಮಂತ್ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ಪೂಜಾ ಕಾರ್ಯಕ್ರಮದಲ್ಲಿ ಉಪನ್ಯಾಸಕರು ಹಾಗೂ ಸಂಸ್ಥೆಯ ಅಧ್ಯಕ್ಷರಾದ ಶ್ರೀನಾಗ, ಕಾರ್ಯದರ್ಶಿ ರಾಮಾಂಜಿನಯ್ಯ, ಪ್ರಾಂಶುಪಾಲ ವಿಶ್ವನಾಥ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

12ಮಾಗಡಿ2 :

ಮಾಗಡಿಯ ಸಿದ್ದಗಂಗಾ ಕಾಲೇಜಿನ ಸಿದ್ದಗಂಗಾ ಕಲಾ ಮಂದಿರದಲ್ಲಿ ಪರಿಸರ ಸ್ನೇಹಿ 5 ಅಡಿ ಎತ್ತರದ ಪೇಪರ್ ಗಣಪತಿ ಪ್ರತಿಷ್ಠಾಪಿಸಿ ದ ವಿಶೇಷ ಪೂಜೆ ಸಲ್ಲಿಸಲಾಯಿತು.