ಮಾಸ್ತಮ್ಮ ದೇವಸ್ಥಾನದಲ್ಲಿ ಶಿಲಾ ಹಾಗೂ ಶಿಖರ ಕಳಸ ಪ್ರತಿಷ್ಠಾಪನೆ

| Published : Oct 24 2025, 01:00 AM IST

ಮಾಸ್ತಮ್ಮ ದೇವಸ್ಥಾನದಲ್ಲಿ ಶಿಲಾ ಹಾಗೂ ಶಿಖರ ಕಳಸ ಪ್ರತಿಷ್ಠಾಪನೆ
Share this Article
  • FB
  • TW
  • Linkdin
  • Email

ಸಾರಾಂಶ

ಗುರುವಾರ ಬೆಳಗ್ಗೆ ಮಾಸ್ತಮ್ಮದೇವಿ ದೇವತೆಯ ಶಿಲಾ ಪ್ರತಿಷ್ಠಾಪನೆ, ಶಿಖರ ಕಳಸ ಸ್ಥಾಪನೆ, ನೇತ್ರೋನ್ನಿಲನ, ದುರ್ಗಾ ಹೋಮ, ಶಾಂತಿ ಹೋಮ ನಡೆಸಲಾಯಿತು. ನಂತರ ಮಹಾಮಂಗಳಾರತಿ ನಡೆಸಿ ಪ್ರಸಾದ ವಿನಿಯೋಗ ಮಾಡಲಾಯಿತು.

ಕನ್ನಡ ಪ್ರಭ ವಾರ್ತೆ ಮಳವಳ್ಳಿ

ತಾಲೂಕಿನ ಕ್ಯಾತೇಗೌಡನದೊಡ್ಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮಾಸ್ತಮ್ಮ ದೇವಸ್ಥಾನದಲ್ಲಿ ಗುರುವಾರ ಶಿಲಾ ಹಾಗೂ ಶಿಖರ ಕಳಸ ಪ್ರತಿಷ್ಠಾಪನೆಯು ಅದ್ಧೂರಿಯಾಗಿ ನಡೆಯಿತು.

ಗ್ರಾಮ ದೇವತೆ ಮಾಸ್ತಮ್ಮ ದೇವಸ್ಥಾನವನ್ನು ನೂತನವಾಗಿ ನಿರ್ಮಾಣ ಮಾಡಿರುವ ಶಿಲಾ ಶಿಖರ ಕಳಸ ಪ್ರತಿಷ್ಠಾಪನೆ ಹಾಗೂ 8ನೇ ವರ್ಷದ ಕಾರ್ತಿಕ ಮಹೋತ್ಸವದ ಅಂಗವಾಗಿ ಬುಧವಾರ ಸಂಜೆಯಿಂದಲೇ ಗಣಪತಿ ಪೂಜೆ, ಗಂಗೆ ತಡಿಯಿಂದ ಹೂ-ಹೊಂಬಾಳೆ ಸಮೇತ ಮಳವಳ್ಳಿ ಮಂಟೇಸ್ವಾಮಿ ಬಸಪ್ಪ, ಹೊನ್ನಾಯಕನಹಳ್ಳಿ ಮಂಟೇಸ್ವಾಮಿ ಬಸಪ್ಪ, ಕಂದೇಗಾಲ ಮತ್ತಿತಾಳೇಶ್ವರಸ್ವಾಮಿ ಬಸಪ್ಪ, ಮಂಚನಹಳ್ಳಿ ಹೆಬ್ಬೆಟ್ಟದ ಬಸವೇಶ್ವರಸ್ವಾಮಿ ಬಸಪ್ಪ ದೇವರುಗಳ ಸಮೇತ ಮೆರವಣಿಗೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮವು ಗುರುವಾರ ವಿಜೃಂಭಣೆಯಿಂದ ನಡೆಯಿತು.

ಗುರುವಾರ ಬೆಳಗ್ಗೆ ಮಾಸ್ತಮ್ಮದೇವಿ ದೇವತೆಯ ಶಿಲಾ ಪ್ರತಿಷ್ಠಾಪನೆ, ಶಿಖರ ಕಳಸ ಸ್ಥಾಪನೆ, ನೇತ್ರೋನ್ನಿಲನ, ದುರ್ಗಾ ಹೋಮ, ಶಾಂತಿ ಹೋಮ ನಡೆಸಲಾಯಿತು. ನಂತರ ಮಹಾಮಂಗಳಾರತಿ ನಡೆಸಿ ಪ್ರಸಾದ ವಿನಿಯೋಗ ಮಾಡಲಾಯಿತು. ಅಂಚೇದೊಡ್ಡಿ, ಅಂಕನಹಳ್ಳಿ, ಮಳವಳ್ಳಿ ಪೇಟೆ ಬೀದಿ, ಮಂಚನಹಳ್ಳಿ, ನಿಡಘಟ್ಟ, ಚೋಳನಹಳ್ಳಿ ಹಾಗೂ ಅಕ್ಕ ಪಕ್ಕದ ಗ್ರಾಮದ ನೂರಾರು ಭಕ್ತರು ಭಾಗಿಯಾಗಿದ್ದರು.

ದೇವಸ್ಥಾನದಲ್ಲಿ ಆಲಯ ಪ್ರವೇಶ, ಕಳಸಗಳ ಪೂಜೆ, ನವಗ್ರಹ ಪೂಜೆ, ಗಣಪತಿ ಹೋಮ, ರಾಕ್ಷೆಘ್ನ ಹೋಮ, ವಾಸ್ತು ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪುರೋಹಿತರಾದ ಅಂಚೇದೊಡ್ಡಿಯ ನಾಗಭೂಷಣಾರಾಧ್ಯರ ನೇತೃತ್ವದಲ್ಲಿ ನಡೆಯಿತು. ಮಧ್ಯಾಹ್ನ ದೇವಸ್ಥಾನದ ಆವರಣದಲ್ಲಿ ಅನ್ನಸಂತರ್ಪಣೆ ಜರುಗಿತು.

ನಾಡಿದ್ದು ಕೃತಿಗಳ ಲೋಕಾರ್ಪಣೆ

ಮಂಡ್ಯ:

ಚಿರಂತ ಪ್ರಕಾಶನ ಆಶ್ರಯದಲ್ಲಿ ಅ.26ರಂದು ನಗರದ ಗಾಂಧಿ ಭವನದಲ್ಲಿ ಬೆಳಗ್ಗೆ 10.30ಕ್ಕೆ ಕೆ.ಪ್ರಭಾಕರ್ ರವರ ಜಡ್ಜ್ ಮೆಂಟ್ ಹಾಗೂ ಡಾ.ಸುಮಾರಾಣಿ ಶಂಭು ಅವರ ದೇವರ ಹುಡುಕಾಟದಲ್ಲಿ ಕೃತಿಗಳ ಲೋಕಾರ್ಪಣೆ ಸಮಾರಂಭ ನಡೆಯಲಿದೆ. ಸಮಾರಂಭದಲ್ಲಿ ಎಸ್.ಬಿ.ಎಜುಕೇಷನ್ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಅಧ್ಯಕ್ಷತೆ ವಹಿಸುವರು. ನಟ, ರಂಗಕರ್ಮಿ, ಲೇಖಕ ಶ್ರೀನಿವಾಸ್ ಪ್ರಭು ಕೃತಿಗಳ ಲೋಕಾರ್ಪಣೆ ಮಾಡುವರು. ಕೃತಿಗಳ ಕುರಿತು ಪ್ರಾಧ್ಯಾಪಕ ಕೆ.ಸೋಮಶೇಖರ್, ವಕೀಲ ಲೋಹಿತ್ ಹಂಪಾಪುರ ಮಾತನಾಡುವರು. ಲೇಖಕಿ ರಂಜನಿಪ್ರಭು, ಶಮಂತಕ ಪ್ರಭಾಕರ್ , ಕಬ್ಬನಹಳ್ಳಿ ಶಂಭು ಮಾತನಾಡುವರು.