ಪಂಚಮಸಾಲಿಗೆ 2ಎ ಬದಲು ಸರ್ಕಾರ ಬೇರೆ ಮೀಸಲಾತಿ ಕಲ್ಪಿಸಲಿ

| Published : Dec 15 2024, 02:03 AM IST

ಸಾರಾಂಶ

ಈಗಾಗಲೇ 2ಎ ಮೀಸಲಾತಿ ಪಟ್ಟಿಯಲ್ಲಿ ಸುಮಾರು 108 ಹಿಂದುಳಿದ ಜಾತಿಗಳಿವೆ. ಬೇರೆ ವರ್ಗದವರನ್ನು ಇದೇ ಪಟ್ಟಿಯಲ್ಲಿ ಯಾವುದೇ ಕಾರಣಕ್ಕೂ ಸೇರ್ಪಡೆಗೊಳಿಸಬಾರದು. ಒಂದುವೇಳೆ 2ಎ ಮೀಸಲು ಪಟ್ಟಿಗೆ ಅನ್ಯ ಜಾತಿಗಳನ್ನೂ ಸೇರಿಸಿದರೆ ಯಾರಿಗೂ ಸರಿಯಾದ ನ್ಯಾಯ ಸಿಗದೇ ಹೋಗಬಹುದು ಎಂದು ತಾಲೂಕು ಕುರುಬ ಸಮಾಜದ ಅಧ್ಯಕ್ಷ ಎಂ.ಎಸ್. ಪಾಲಾಕ್ಷಪ್ಪ ಹೇಳಿದ್ದಾರೆ.

- ಹೊನ್ನಾಳಿ ತಾಲೂಕು ಕುರುಬ ಸಮಾಜ ಅಧ್ಯಕ್ಷ ಪಾಲಾಕ್ಷಪ್ಪ ಹೇಳಿಕೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಈಗಾಗಲೇ 2ಎ ಮೀಸಲಾತಿ ಪಟ್ಟಿಯಲ್ಲಿ ಸುಮಾರು 108 ಹಿಂದುಳಿದ ಜಾತಿಗಳಿವೆ. ಬೇರೆ ವರ್ಗದವರನ್ನು ಇದೇ ಪಟ್ಟಿಯಲ್ಲಿ ಯಾವುದೇ ಕಾರಣಕ್ಕೂ ಸೇರ್ಪಡೆಗೊಳಿಸಬಾರದು. ಒಂದುವೇಳೆ 2ಎ ಮೀಸಲು ಪಟ್ಟಿಗೆ ಅನ್ಯ ಜಾತಿಗಳನ್ನೂ ಸೇರಿಸಿದರೆ ಯಾರಿಗೂ ಸರಿಯಾದ ನ್ಯಾಯ ಸಿಗದೇ ಹೋಗಬಹುದು ಎಂದು ತಾಲೂಕು ಕುರುಬ ಸಮಾಜದ ಅಧ್ಯಕ್ಷ ಎಂ.ಎಸ್. ಪಾಲಾಕ್ಷಪ್ಪ ಹೇಳಿದರು.

ತಾಲೂಕು ಕುರುಬ ಸಮಾಜದಿಂದ ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೈಕ್ಷಣಿಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ತೀರಾ ಹಿಂದುಳಿದ ನೂರಾರು ವರ್ಗಗಳು ಈಗಾಗಲೇ 2ಎ ಮೀಸಲಾತಿ ಪಟ್ಟಿಯಲ್ಲಿವೆ. ಪಂಚಮಸಾಲಿಗೆ 2ಎ ಮೀಸಲಾತಿ ಕೊಡಬಾರದು ಎನ್ನುವ ಉದ್ದೇಶ ನಮ್ಮದಲ್ಲ. ಅವರಿಗೂ ಸರ್ಕಾರ ಮೀಸಲಾತಿಯ ಬೇರೆ ವ್ಯವಸ್ಥೆ ಮಾಡಿಕೊಡಲಿ ಎಂದರು.

ಪ್ರಸ್ತುತ ಶೇ.27ರಷ್ಟು 2ಎ ಮೀಸಲಾತಿ ಪಟ್ಟಿಯಲ್ಲಿ 108 ತೀರಾ ಹಿಂದುಳಿದ ವರ್ಗಗಳಿವೆ. ಅವರಿಗೆ ಅನ್ಯಾಯ ಆಗದಂತೆ ಸರ್ಕಾರ ನೋಡಿಕೊಳ್ಳಬೇಕಾಗುತ್ತದೆ. ಒಂದುವೇಳೆ ಅನ್ಯಾಯವಾದರೆ ಕುರುಬ ಸಮಾಜದ ಸೇರಿದಂತೆ ಮೀಸಲಾತಿ ಪಟ್ಟಿಯಲ್ಲಿರುವ ಎಲ್ಲ ಹಿಂದುಳಿದ ವರ್ಗಗಳು ಸುಮ್ಮನೇ ಕೂರುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕುರುಬ ಸಮಾಜದ ಗೌರವಾಧ್ಯಕ್ಷರಾದ ದಿಡಗೂರು ಪಾಲಾಕ್ಷಪ್ಪ, ಗಾಳಿ ನಾಗರಾಜ್, ಕಾರ್ಯಾಧ್ಯಕ್ಷರಾದ ಬಾಬೂ ಹೋಬಳದಾರ್ ,ಕಾಂಗ್ರೇಸ್ ನ ಹಿರಿಯ ಮುಖಂಡ ಬಿ.ಸಿದ್ದಪ್ಪ, ಕರವೇ ಶ್ರೀನಿವಾಸ್, ಹನುಮಂತಪ್ಪ ಇನ್ನಿತರ ಮುಖಂಡರು ಇದ್ದರು.

- - - -14ಎಚ್.ಎಲ್.ಐ2: