ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ಕರುನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ನವೆಂಬರ್ ಕನ್ನಡಿಗರಾಗದೇ ನಿತ್ಯ ಕನ್ನಡವನ್ನು ಬಳಸುವ ಮೂಲಕ ನಾಡು, ನುಡಿ, ಸಂಸ್ಕೃತಿ, ಪರಂಪರೆ ಉಳಿಸಲು ಪ್ರತಿಯೊಬ್ಬರು ಕಟಿಬದ್ಧರಾಗುವ ದೃಢಸಂಕ್ಪಲ್ಪ ಮಾಡಬೇಕು ಎಂದು ಕ.ರ.ವೇ. ತಾಲೂಕು ಅಧ್ಯಕ್ಷ ಸಿ.ಕೆ. ಬಲಿಂದ್ರಪ್ಪ ಹೇಳಿದರು. ತಾಲೂಕಿನ ಆನವಟ್ಟಿ ಪಟ್ಟಣದ ನೃಪತುಂಗ ಶಾಲಾ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಜನದನಿ ಜನಸೇವಾ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಮತ್ತು ಜನದನಿ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಅನ್ಯಭಾಷಿಗರಿಗೂ ಕನ್ನಡವನ್ನು ಕಲಿಸಿ, ನಾವು ಹೆಚ್ಚು ಕನ್ನಡವನ್ನು ಬಳಕೆ ಮಾಡಿ, ಭಾಷಾ ಶ್ರೀಮಂತಿಕೆಯನ್ನು ಎತ್ತಿಹಿಡಿಯಬೇಕು. ರಾಜ್ಯದಲ್ಲಿ ಕನ್ನಡ ನಾಡು-ನುಡಿ, ಗಡಿಯ ವಿಷಯದಲ್ಲಿ ಯಾವುದೇ ಸಮಸ್ಯೆ ಎದುರಾದಾಗ ಕರವೇ ಖಂಡಿಸುತ್ತ ಬಂದಿದೆ. ಈ ಮೂಲಕ ಕನ್ನಡಿಗರನ್ನು ಒಗ್ಗೂಡಿಸಲು ವೇದಿಕೆಯು ಶ್ರಮಿಸುತ್ತಿದೆ. ಆನವಟ್ಟಿಯಲ್ಲಿಯೂ ಕಳೆದ ಸುಮಾರು 15 ವರ್ಷಗಳಿಂದ ಉತ್ತಮ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜನದನಿ ಜನಸೇವಾ ಸಂಸ್ಥೆ ಅಧ್ಯಕ್ಷ ಕೆ.ಇ. ವಿಜಯಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಆನವಟ್ಟಿ ಪಿಎಸ್‌ಐ ರಾಜು ರೆಡ್ಡಿ, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭು ಕೆ. ಸಾಹುಕಾರ್, ದಂತ ವೈದ್ಯ ಡಾ. ಎಚ್.ಇ. ಜ್ಞಾನೇಶ್, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಎಸ್. ಶಂಕರ್ ಶೇಟ್, ಮುಖಂಡ ಗಿರೀಶ್ ಕುಬಟೂರು ಅವರಿಗೆ ಜನದನಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.ಕಲಾಕಾರ್ ನೃತ್ಯ ಶಾಲೆ ಮಕ್ಕಳಿಂದ ಡ್ಯಾನ್ಸ್-ಡ್ಯಾನ್ಸ್, ಬಾಲಾ ನೃತ್ಯ ಶಾಲೆ ಮಕ್ಕಳಿಂದ ನೃತ್ಯ ಹಾಗೂ ಕೃಷ್ಣವೇಷ ಸ್ಪರ್ಧೆ ಹಾಗೂ ಜ್ಯೂನಿಯರ್ ಯಶ್ ಅವರಿಂದ ಮನೋರಂಜನಾ ಕಾರ್ಯಕ್ರಮ ಜರುಗಿತು. ಕರವೇ ಗೌರವಾಧ್ಯಕ್ಷ ಜಿ. ರಾಘವೇಂದ್ರ, ಪುರಸಭೆ ಮುಖ್ಯಾಧಿಕಾರಿ ಎಚ್. ಸಂತೋಷ್ ಕುಮಾರ್, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಅಧ್ಯಕ್ಷ ಸಿ.ಪಿ. ಈರೇಶ್ ಗೌಡ, ಪ್ರಮುಖರಾದ ಚಂದ್ರಶೇಖರ ನಿಜಗುಣ, ನಿರ್ಮಲಾ ಶಿವಕುಮಾರ್, ರಾಜೇಂದ್ರ ನಾಯ್ಕ್, ಎಚ್. ಜಯಪ್ಪ, ರಾಜೇಂದ್ರ ನಾಯ್ಕ್, ಸುಜಾತಾ, ಶಿವರಾಜ್, ಮಕ್ಬೂಲ್ ಸಾಬ್ ಎಂಎಂಸಿ, ಟಿ.ಕೆ. ಅಸಾದುಲ್ಲಾ, ಕೆ. ಅರುಣ್, ನಾಗರಾಜ ಗುತ್ತಿ, ಡಾ. ಶಿವಕುಮಾರ್ ಸೇರಿದಂತೆ ಇತರರಿದ್ದರು.
- - -ಕೋಟ್‌ಎಸ್. ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ದಿಟ್ಟ ನಿಲುವು ಕೈಗೊಂಡಿದ್ದರು. ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಸುಗ್ರೀವಾಜ್ಞೆ ಜಾರಿಗೊಳಿಸಿದ್ದರು. ಈ ಕಾರಣದಿಂದಲೇ ಮಂಡ್ಯ- ಮೈಸೂರು ಭಾಗದಲ್ಲಿ ಬಂಗಾರಪ್ಪ ಅವರನ್ನು ಜನತೆ ಇಂದಿಗೂ ಸ್ಮರಿಸುತ್ತಾರೆ. ಇಂದಿನ ರಾಜಕಾರಣಿಗೆ ಅಂತಹ ತೀರ್ಮಾನಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ನಾಡು ಕಂಡ ಅಪರೂಪದ ರಾಜಕಾರಣಿ ಎಸ್. ಬಂಗಾರಪ್ಪ
- ಸಿ.ಕೆ. ಬಲೀಂದ್ರಪ್ಪ, ತಾಲೂಕು ಅಧ್ಯಕ್ಷ, ಕರವೇ- - - -20ಕೆಪಿಸೊರಬ01:ಸೊರಬ ತಾಲೂಕಿನ ಆನವಟ್ಟಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಜನದನಿ ಜನಸೇವಾ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರಿಗೆ ಜನದನಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.