ಕುದೂರು: ಯಾವುದಾದರೂ ಸರಿಯೇ ಅದು ಅತಿಯಾದರೆ ಅತ್ಯಂತ ಅಪಾಯಕಾರಿ. ಸ್ವಾತಂತ್ರ್ಯವಾದರೂ ಅಷ್ಟೆ, ಬಂಧನವಾದರೂ ಅಷ್ಟೆ. ಇತಿಮಿತಿಯಾದ ನಡವಳಿಕೆ ಮನೆ ಮತ್ತು ದೇಶವನ್ನು ಗಟ್ಟಿಯಾಗಿ ಬೆಳೆಸುತ್ತದೆ ಎಂದು ಸಂಗೀತ ವಿದ್ವಾಂಸ ಗಂಗಮುನಿಯಪ್ಪ ತಿಳಿಸಿದರು.

ಕುದೂರು ಗ್ರಾಪಂ ವತಿಯಿಂದ ಶ್ರೀ ರಾಮಲೀಲಾ ಮೈದಾನದಲ್ಲಿ ಏರ್ಪಡಿಸಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಮ್ಮಗಳ ಮೈಮರೆವಿನಿಂದ ಇನ್ನೂರಕ್ಕೂ ಹೆಚ್ಚು ವರ್ಷಗಳ ಕಾಲ ಪರದೇಶಿಗರ ಕೈಗೆ ದೇಶ ಕೊಟ್ಟಿದ್ದೆವು. ಅದನ್ನು ಪಡೆಯಲು ಹರಿಸಿದ ರಕ್ತದ ಕಾಲುವೆಗಳೆಷ್ಟು. ಅದೆಷ್ಟು ಜನರು ಬಲಿದಾನ ಮಾಡಿದ್ದಾರೆಂದು ಇಂದಿನ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ಪರಿಣಾಮಕಾರಿ ತಿಳಿಸಿಬೇಕು ಎಂದು ಎಚ್ಚರಿಸಿದರು.

ಆದಾಯ ತೆರಿಗೆ ನ್ಯಾಯಾಧಿಕರಣದ ನ್ಯಾಯಾಧೀಶ ರಘುನಾಥ್ ಮಾತನಾಡಿ, ಇಂದಿನ ಯುಗ ಬುದ್ದಿವಂತರ ಯುಗವಾಗಿದೆ. ಯಾವುದೇ ಕ್ಷೇತ್ರದಲ್ಲಾದರೂ ಪರಿಣತಿಯನ್ನು ಕೇಳುತ್ತದೆ. ಇಂತಹ ಸ್ಥಿತಿಯಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳು ಹೆಚ್ಚಿನ ಶ್ರಮವಹಿಸಿ ಈ ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಶ್ರದ್ಧೆಯಿಂದ ಹೋಗಬೇಕಿದೆ. ಶ್ರದ್ದೆ ಯಾರಿಗೂ ಕೆಡುಕು ಮಾಡಿಲ್ಲ. ಅದರ ಜೊತೆಗಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.

ಇದೇ ವೇಳೆ ರಂಗಭೂಮಿ ಕಲಾವಿದೆ ಸೌಭಾಗ್ಯ, ಉರಗತಜ್ಞ ಅರುಣ್‌ಕುಮಾರ್, ನಿವೃತ್ತ ಸೈನಿಕ ಕುಮಾರ್, ಮತ್ತು ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಗ್ರಾಪಂ ಮಾಜಿ ಅಧ್ಯಕ್ಷರಾದ ಹನುಮಂತರಾಯಪ್ಪ, ಕೆ.ಬಿ.ಬಾಲರಾಜ್, ಮಾಜಿ ಸದಸ್ಯ ಕೆ.ಟಿ.ವೆಂಕಟೇಶ್, ಹೊನ್ನರಾಜ್, ಜಯರಾಮ್, ಪಿಡಿಒ ಸತೀಶ್, ಕಾರ್ಯದರ್ಶಿ ವೆಂಕಟೇಶ್, ಯುವ ಮುಖಂಡ ಚಂದ್ರಶೇಖರ್, ಅಭಿಷೇಕ್, ವಿವೇಕ್, ಮಂಜುನಾಥ್, ನಾರಾಯಣ್, ಗೋಪಿ ಕೃಷ್ಣಕುಮಾರ್ ಮತ್ತಿತರರು ಭಾಗವಹಿಸಿದ್ದರು.

ಫೋಟೋ :


ಕುದೂರು ಗ್ರಾಮದ ಶ್ರೀರಾಮಲೀಲಾ ಮೈದಾನದಲ್ಲಿ ಏರ್ಪಡಿಸಿದ್ದ 80ನೇ ಸ್ವಾತಂತ್ರ್ಯ ದಿನಾಚಾರಣೆಯ ಸಂದರ್ಭದಲ್ಲಿ ವಿವಿಧ ವೇಷಭೂಷಣ ಧರಿಸಿ ಮಕ್ಕಳು ಸಂಭ್ರಮಿಸಿದರು.