ಮಕ್ಕಳಿಗೆ ಜ್ಞಾನದ ಜತೆ ಹೃದಯವಂತಿಕೆ ಬೆಳೆಸಿ: ಚಿಂತಕ ಅಶೋಕ ಹಂಚಲಿ

| Published : Sep 19 2025, 01:00 AM IST

ಸಾರಾಂಶ

ಶಿಕ್ಷಕರ ವೃತ್ತಿ ಬಹಳ ಪವಿತ್ರವಾದದು ಇದಕ್ಕೆ ಪಗಾರದ ಹಂಗಿಲ್ಲ. ಸದೃಢ ಸಮಾಜದ ನಿರ್ಮಾಣಕ್ಕೆ ಮಕ್ಕಳಿಗೆ ಜ್ಞಾನದ ಜೊತೆಗೆ ಹೃದಯವಂತಿಕೆ ಬೆಳೆಯುವಂತೆ ಬೋಧಿಸಬೇಕೆಂದು ಚಿಂತಕ, ವಾಗ್ಮಿ ಅಶೋಕ ಹಂಚಲಿ ಹೇಳಿದರು.

ಲಿಂಗಸುಗೂರು: ಶಿಕ್ಷಕರ ವೃತ್ತಿ ಬಹಳ ಪವಿತ್ರವಾದದು ಇದಕ್ಕೆ ಪಗಾರದ ಹಂಗಿಲ್ಲ. ಸದೃಢ ಸಮಾಜದ ನಿರ್ಮಾಣಕ್ಕೆ ಮಕ್ಕಳಿಗೆ ಜ್ಞಾನದ ಜೊತೆಗೆ ಹೃದಯವಂತಿಕೆ ಬೆಳೆಯುವಂತೆ ಬೋಧಿಸಬೇಕೆಂದು ಚಿಂತಕ, ವಾಗ್ಮಿ ಅಶೋಕ ಹಂಚಲಿ ಹೇಳಿದರು.

ಪಟ್ಟಣದ ಚಿತ್ತರಗಿ ವಿಜಯ ಮಹಾಂತೇಶ್ವರ ಶಾಖಾ ಅನುಭವ ಮಂಟಪ ಮಠದಲ್ಲಿ ಜಿಲ್ಲಾ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ತಾಲೂಕ ಘಟಕದಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನಲ್ಲಿ ಮಾತನಾಡಿ, ಉತ್ತಮ ಶಿಕ್ಷಕರು ಉತ್ತಮ ಶಿಷ್ಯರನ್ನೂ ರೂಪಿಸಿದರೆ ಉತ್ತಮ ಶಿಷ್ಯರಿಂದ ಗುರುಗಳಿಗೆ ಗೌರವ ದೊರೆಯುತ್ತದೆ. ಇದನ್ನು ಅರಿತು ಶಿಕ್ಷಕರು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದರು.

ವಿಧಾನ ಪರಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ ಮಾತನಾಡಿದರು. ಉತ್ತಮ ಶಿಕ್ಷಕರು ಹಾಗೂ ರಾಜ್ಯ, ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದ ಪತ್ರಕರ್ತರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಅಮರೇಶ್ವರ ಗುರು ಅಭಿನವ ಗಜದಂಡ ಸ್ವಾಮಿಜಿ, ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ತೋರಣದಿನ್ನಿ, ಬಿಇಒ ಸುಜಾತ ಹುನೂರು, ಸಿದ್ರಾಮಪ್ಪ ಸಾಹುಕಾರ, ನರಸಪ್ಪ ಯಾದವ್, ಸಂಜೀವ ಕುಮಾರ ಕಂದಗಲ್, ಆದಯ್ಯ ದಳಪತಿ, ಶಾಂತನಗೌಡ ಪಾಟೀಲ್ ದಿದ್ದಿಗಿ, ವಿನಯ ಕುಮಾರ ಗಣಾಚಾರಿ, ಶಿವಕುಮಾರ ಎನ್, ಗವಿಸಿದ್ದಪ್ಪ ಭಜಂತ್ರಿ ಗೌಡೂರು, ಪಿ.ಜಿ ಪವಾರ ಹಲವರು ಇದ್ದರು.