ಮುಂದಿನ ತಲೆಮಾರಲ್ಲಿ ದೇಶಪ್ರೇಮ ಮೂಡಿಸಿ

| Published : Aug 19 2024, 12:45 AM IST

ಸಾರಾಂಶ

ಕುದೂರು: ದೇಶ ಉಳಿದರೆ ನಾವು ಉಳಿಯುತ್ತೇವೆ ಎಂಬ ಭಾವ ನಮ್ಮಲ್ಲಿರಬೇಕು. ದೇಶಪ್ರೇಮ ಮುಂದಿನ ತಲೆಮಾರಿನಲ್ಲಿ ಮೂಡಿಸುವ ಅಗತ್ಯವಿದೆ ಎಂದು ಗ್ರಾಪಂ ಅಧ್ಯಕ್ಷೆ ಕುಸುಮಾ ಹೇಳಿದರು.

ಕುದೂರು: ದೇಶ ಉಳಿದರೆ ನಾವು ಉಳಿಯುತ್ತೇವೆ ಎಂಬ ಭಾವ ನಮ್ಮಲ್ಲಿರಬೇಕು. ದೇಶಪ್ರೇಮ ಮುಂದಿನ ತಲೆಮಾರಿನಲ್ಲಿ ಮೂಡಿಸುವ ಅಗತ್ಯವಿದೆ ಎಂದು ಗ್ರಾಪಂ ಅಧ್ಯಕ್ಷೆ ಕುಸುಮಾ ಹೇಳಿದರು.

ಗ್ರಾಮದ ಶ್ರೀರಾಮಲೀಲಾ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಸಮಿತಿ ಏರ್ಪಡಿಸಿದ್ದ 78ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ನಮ್ಮಲ್ಲಿ ಒಗ್ಗಟ್ಟಿಲ್ಲದೆ ಈಗಾಗಲೇ ದೇಶವನ್ನು ಅನೇಕ ವಿದೇಶಿಗರು ಆಳಿ ಹೋಗಿದ್ದಾರೆ. ಅನೇಕ ಮಹನೀಯರು ತ್ಯಾಗ ಬಲಿದಾನಗಳಿಂದ ತಂದುಕೊಟ್ಟಿರುವ ಸ್ವಾತಂತ್ರ್ಯವನ್ನು ನಾವು ಕಾಪಾಡಿಕೊಳ್ಳಬೇಕು ಎಂದರು.

ಗ್ರಾಪಂ ಸದಸ್ಯ ಕೆ.ಟಿ.ವೆಂಕಟೇಶ್ ಮಾತನಾಡಿ, ಸಮಸ್ಯೆಗಳನ್ನು ಮೆಟ್ಟಿ ನಡೆದವರು ಮಾತ್ರ ಬದುಕಿನಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ. ಕತ್ತಲೆಯನ್ನು ದೂರುತ್ತಾ ಕೂತರೆ ಬೆಳಕು ಬರುವುದಿಲ್ಲ. ಕತ್ತಲಿದ್ದಾಗ ಬೆಳಕು ತರುವ ಕೆಲಸ ಮಾಡಬೇಕಿದೆ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗ್ರಾಪಂ ವತಿಯಿಂದ ಸನ್ಮಾನಿಸಲಾಯಿತು. ಕುದೂರು ಹಾಗೂ ಸೋಲೂರು ಹೋಬಳಿಯ ವಿವಿಧ ಶಾಲೆಯ ಮಕ್ಕಳಿಂದ ಆಕರ್ಷಕ ಪಥಸಂಚಲನ ಮತ್ತು ಕವಾಯತ್ ಹಾಗೂ ಸಾಂಸ್ಕೃತಿಕ ಕಾರ್‍ಯಕ್ರಮಗಳು ಜನಮನ ಸೆಳೆಯಿತು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯೆ ಲತಾಗಂಗಯ್ಯ,, ಉಪಾಧ್ಯಕ್ಷೆ ರಮ್ಯಜ್ಯೋತಿ, ಸನ್ಮಾನಿತರಾದ ಡಾ.ನಾಗಭೂಷಣ್. ಡಾ.ಗುರುರಾಜ್, ಅನುಷಾ, ಪಿಡಿಒ ಪುರುಷೋತ್ತಮ್, ಹರೀಶ್, ಮಧುಸೂಧನ್, ಮಾಜಿ ಅಧ್ಯಕ್ಷ ಕೆ.ಬಿ.ಬಾಲರಾಜ್ ಮಾತನಾಡಿದರು. ಶ್ರೀ ಮಹಂತೇಶ್ವರ ಪ್ರೌಢಶಾಲೆ ಮುಖ್ಯಶಿಕ್ಷಕ ಕಾಂತರಾಜ್, ಕಾರ್‍ಯದರ್ಶಿ ವೆಂಕಟೇಶ್, ಶಿಕ್ಷಕ ಮಂಜುನಾಥ್, ಗ್ರಾಮಪಂಚಾಯತಿ ಸದಸ್ಯರು ಹಾಜರಿದ್ದರು.

16ಕೆಆರ್ ಎಂಎನ್ 1.ಜೆಪಿಜಿ

ಕುದೂರು ಗ್ರಾಮದ ಶ್ರೀರಾಮಲೀಲಾ ಮೈದಾನದಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಕೆಪಿಎಸ್ ಶಾಲೆಯ ಮಕ್ಕಳ ನೃತ್ಯ ಪ್ರದರ್ಶಿಸಿದರು.