ಸಾರಾಂಶ
ಮಕ್ಕಳ ಜ್ಞಾನ ವೃದ್ದಿಗೆ ವಿಜ್ಞಾನ ಪ್ರದರ್ಶನಗಳು ಪೂರಕವಾಗಿವೆ. ಅವರಲ್ಲಿ ತಂತ್ರಜ್ಞಾನ, ಪರಿಸರ ಕಾಳಜಿ ಹಾಗೂ ಚರಿತ್ರೆಯ ಬಗ್ಗೆ ಆಸಕ್ತಿ ಬೆಳೆಯುತ್ತದೆಯಲ್ಲದೇ ಅವರಲ್ಲಿರುವ ಸೃಜನಶೀಲತೆಗೆ ಉತ್ತೇಜನ ಸಿಗಲಿದೆ.
ಬ್ಯಾಡಗಿ: ಮಕ್ಕಳಿಗೆ ಕೇವಲ ಕಟ್ಟು ಕಥೆಗಳನ್ನು ಹೇಳಿ ದೇಶವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಅವರಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಮೂಡಿಸದಿದ್ದಲ್ಲಿ ಇಡೀ ಭೂಮಿಯೇ ನಿಂತ ನೀರಾಗಲಿದೆ ಎಂದು ತಮಿಳುನಾಡಿನ ವಿರುದ್ಧುನಗರದ ಇದಯಂ ಆಯಿಲ್ ಕಂಪನಿಯ ಹರಿವರ್ಧನ ಅಭಿಪ್ರಾಯಪಟ್ಟರು.
ಪಟ್ಟಣದ ವರ್ತಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್, ತಮಿಳುನಾಡಿನ ಇದಯಂ ಆಯಿಲ್ ಕಂಪನಿಯ ಆಶ್ರಯದಲ್ಲಿ ಏರ್ಪಡಿಸಿದ್ದ ವಿಜ್ಞಾನ ಪ್ರಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಕ್ಕಳ ಜ್ಞಾನ ವೃದ್ದಿಗೆ ವಿಜ್ಞಾನ ಪ್ರದರ್ಶನಗಳು ಪೂರಕವಾಗಿವೆ. ಅವರಲ್ಲಿ ತಂತ್ರಜ್ಞಾನ, ಪರಿಸರ ಕಾಳಜಿ ಹಾಗೂ ಚರಿತ್ರೆಯ ಬಗ್ಗೆ ಆಸಕ್ತಿ ಬೆಳೆಯುತ್ತದೆಯಲ್ಲದೇ ಅವರಲ್ಲಿರುವ ಸೃಜನಶೀಲತೆಗೆ ಉತ್ತೇಜನ ಸಿಗಲಿದೆ ಎಂದರು.
ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದುವರಿಯದೇ ಸ್ವಾವಲಂಬಿಗಳಾಗಲು ಸಾಧ್ಯವಿಲ್ಲ. ಸಾರ್ವಭೌಮತ್ವ ಪಡೆಯುವ ಉದ್ದೇಶದಿಂದ ವಿಶ್ವದೆಲ್ಲೆಡೆ ಬಹಳಷ್ಟು ರಾಷ್ಟ್ರಗಳು ಸ್ಪರ್ಧೆಗಿಳಿದಿವೆ. ನೂತನ ಅವಿಷ್ಕಾರಗಳಿಗಾಗಿ ಕೋಟಿಗಟ್ಟಲೇ ಹಣ ವ್ಯಯಿಸುತ್ತಿವೆ ಎಂದರು.ವಿಜ್ಞಾನ ಪ್ರಯೋಗ ಪ್ರದರ್ಶನ ತೋರಿಸಲು ತಮ್ಮದೇ ಪ್ರಾಯೋಜಕತ್ವದಲ್ಲಿ ಶಿಕ್ಷಕ ಸಿಬ್ಬಂದಿ ವಿಜ್ಞಾನ ರಥ ಎನ್ನುವ ವಾಹನ ಸಮೇತ ಆಗಮಿಸಿ ವಿಜ್ಞಾರ್ಥಿಗಳೆದುರು ಪ್ರದರ್ಶನ ತೋರಿದರು. ಡಾ. ಬಿ.ಆರ್. ಅಂಬೇಡ್ಕರ, ಎಸ್ಸೆಸ್ಸೆಪಿಎನ್, ನೂತನ ಶಿಕ್ಷಣ ಸಂಸ್ಥೆ, ನವವೈತನ್ಯ, ಆದರ್ಶ ಶಿಕ್ಷಣ ಸಂಸ್ಥೆ, ಎಸ್‌ಜೆಜೆಎಂ ಮತ್ತು ಬಿಇಎಸ್ ಪ್ರೌಢಶಾಲೆಯ ನೂರಾರು ಮಕ್ಕಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಇದಯಂ ಆಯಿಲ್ ಕಂಪನಿಯ ನವೀನಕುಮಾರ, ಸತೀಶಕುಮಾರ, ರೋಟರಿ ಮಾಜಿ ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ, ಇನ್ನರ್‌ವಿಲ್ ಕ್ಲಬ್ಬಿನ ಅಧ್ಯಕ್ಷರಾದ ಪ್ರತಿಭಾ ಮೇಲಗಿರಿ, ಕಾರ್ಯದರ್ಶಿ ಲಕ್ಷ್ಮಿ ಉಪ್ಪಾರ, ವಿಜಯಲಕ್ಷ್ಮಿ ಯಾದವಾಡ, ಸಂಧ್ಯಾರಾಣಿ ದೇಶಪಾಂಡೆ, ಮಹೇಶ್ವರಿ ಪಸಾರದ, ಪುಷ್ಪ ಇಂಡಿಮಠ ಶೋಭಾ ನೋಟದ, ಜಾನವಿ ಎಲಿ, ವಿಜಯಾ ಪಾಟೀಲ ರೋಟರಿ ಕ್ಲಬ್ ಅಧ್ಯಕ್ಷ ಅನಿಲಕುಮಾರ ಬೊಡ್ಡಪಾಟಿ, ಮಾಲತೇಶ ಅರಳಿಮಟ್ಟಿ, ಪರಶುರಾಮ ಮೇಲಗಿರಿ, ಕಿರಣ ಮಾಳೇನಹಳ್ಳಿ ಪವಾಡಪ್ಪ ಅಚನೂರ, ಕಾಶಿನಾಥ ಕಮ್ಮಾರ, ಮಾಲತೇಶ ಕಲ್ಯಾಣಿ ಸೇರಿದಂತೆ ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು.