ಯುಗಾದಿ ಉತ್ಸವದ ವಿಶೇಷ ಬೌದ್ಧಿಕ ಮಾಡಿ, ಭಾರತಿಯರಿಗೂ ಯುಗಾದಿ ಹಬ್ಬ ಹೊಸ ವರ್ಷವಾಗಿದೆ.ಪರಿಸರದಲ್ಲಿ ಕೂಡಾ ಗಿಡ, ಮರಗಳಲ್ಲಿ ಚಿಗುರು ಬಿಡುತ್ತದೆ
ಗಂಗಾವತಿ: ದೇಶದಲ್ಲಿ ಜಾತಿ, ಧರ್ಮ ಮೀರಿ ಪ್ರತಿಯೊಬ್ಬ ಪ್ರಜೆಯಲ್ಲೂ ದೇಶಭಕ್ತಿ ಮೂಡುವಂತಾಗಬೇಕು, ಆರ್‌ಎಸ್‌ಎಸ್ ಜನರಲ್ಲಿ ಈ ಭಾವನೆ ಮೂಡಿಸುತ್ತದೆ ಎಂದು ವಾಲ್ಮಿಕಿ ನಾಯಕ ಸಮಾಜದ ಹಿರಿಯ ಮುಖಂಡ,ಕೃಷಿಕ ಹಾಗೂ ನಗರಸಭೆ ಮಾಜಿ ಉಪಾಧ್ಯಕ್ಷ ಕೃಷ್ಣಪ್ಪ ನಾಯಕ ಹೇಳಿದರು.
ನಗರದ ಶ್ರೀಕೊಟ್ಟೂರೇಶ್ವರ ದೇವಸ್ಥಾನದ ಆವರಣದಲ್ಲಿ ಅಯೋಜಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಯುಗಾದಿ ಉತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅಭಿಪ್ರಾಯ ವ್ಯಕ್ತಪಡಿಸಿದರು. ಹಿಂದುಗಳೆಲ್ಲರು ಒಂದಾಗಿರಲು ಸಂಘ ಕೆಲಸ ಮಾಡುತ್ತಿದೆ. ದೇಶದ ವಿಷಯದಲ್ಲಿ ಎಲ್ಲರು ಒಂದಾಗಿರಬೇಕು ಎಂದು ಕರೆ ನೀಡಿದರು.ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಳ್ಳಾರಿ ವಿಭಾಗ ಸಹ ಕಾರ್ಯವಾಹ ಲಿಂಗಸಗೂರಿನ ವೈದ್ಯ ಡಾ. ಪಾಂಡುರಂಗ ಆಪ್ಟೆ ಮಾತನಾಡಿ, ಯುಗಾದಿ ಉತ್ಸವದ ವಿಶೇಷ ಬೌದ್ಧಿಕ ಮಾಡಿ, ಭಾರತಿಯರಿಗೂ ಯುಗಾದಿ ಹಬ್ಬ ಹೊಸ ವರ್ಷವಾಗಿದೆ.ಪರಿಸರದಲ್ಲಿ ಕೂಡಾ ಗಿಡ, ಮರಗಳಲ್ಲಿ ಚಿಗುರು ಬಿಡುತ್ತದೆ. ಹಿಂದು ಸಂಸ್ಕೃತಿಯಲ್ಲಿ ಪ್ರತಿಯೊಂದು ಹಬ್ಬಕ್ಕೂ ವಿಶೇಷತೆ ಇದೆ.ಯುಗಾದಿ ದೇಶದಾದ್ಯಂತ ಆಚರಿಸುತ್ತಾರೆ. ಸಂಘವು ಕೂಡ ಪ್ರತಿ ವರ್ಷ ಯುಗಾದಿ ಉತ್ಸವ ಆಚರಿಸಲಾಗುತ್ತದೆ. ಸಂಘ ಈಗ ಶತಾಬ್ಧಿ ವರ್ಷ ಆಚರಿಸುತ್ತಿದೆ. ಸಮಾಜದಲ್ಲಿ ಸಾಮರಸ್ಯ ಮೂಡಿಸುವುದು. ಪರಿಸರ ಜಾಗೃತಿ ಸೇರಿದಂತೆ ಪಂಚ ಪರಿವರ್ತನೆ ಅನುಷ್ಠಾನಗೊಳಿಸಲು ಸಮಸ್ತ ಹಿಂದು ಸಮಾಜವನ್ನು ಜಾಗೃತಿ ಮೂಡಿಸುತ್ತಿದೆ.ಸಂಘದ ಶತಾಬ್ಧಿ ಕಾರ್ಯದಲ್ಲಿ ಹಿಂದು ಸಮಾಜದ ಎಲ್ಲರು ಬೆಂಬಲವಾಗಿ ನಿಂತಿರುವುದು ಸಂಘಕ್ಕೆ ಮತ್ತಷ್ಟು ಶಕ್ತಿ ಹೆಚ್ಚಿದೆ ಎಂದರು.
ಉತ್ಸವದಲ್ಲಿ ಸಂಘದ ಕಾರ್ಯಕರ್ತರು,ಪರಿವಾರ ಸಂಘಟನೆಯ ಮುಖಂಡರು, ಮಾಜಿ ಶಾಸಕರು ಭಾಗವಹಿಸಿದ್ದರು.