ತಾಲೂಕು ಆಸ್ಪತ್ರೆಗೆ ವೈದ್ಯರ ನಿಯೋಜನೆ ಆದೇಶ ಕೈಬಿಡಲು ಸೂಚನೆ: ದಿನೇಶ್ ಗುಂಡುರಾವ್

| Published : Oct 07 2025, 01:02 AM IST

ತಾಲೂಕು ಆಸ್ಪತ್ರೆಗೆ ವೈದ್ಯರ ನಿಯೋಜನೆ ಆದೇಶ ಕೈಬಿಡಲು ಸೂಚನೆ: ದಿನೇಶ್ ಗುಂಡುರಾವ್
Share this Article
  • FB
  • TW
  • Linkdin
  • Email

ಸಾರಾಂಶ

ಬೀರೂರು, ರಾಜ್ಯದಲ್ಲಿ ತಾಯಂದಿರ ಮರಣ ತಡೆಗಟ್ಟು ನಿಟ್ಟಿನಲ್ಲಿ ಬಾಣಂತಿಯರ ಆರೈಕೆ ಹೆಚ್ಚಿಸುವ ಸಲುವಾಗಿ ರಾಜ್ಯದ ಪ್ರತಿ ತಾಲ್ಲೂಕು ಆಸ್ಪತ್ರೆಗಳು 24*7 ತ್ರಿವಳಿ ತಜ್ಞ ವೈದ್ಯರ ಲಭ್ಯತೆ ಹಿನ್ನಲೆಯಲ್ಲಿ ಬೀರೂರು ಸಾರ್ವಜನಿಕ ಆಸ್ಪತ್ರೆಯ ವೈದ್ಯರನ್ನು ಸಹ ತಾಲೂಕು ಆಸ್ಪತ್ರೆಗೆ ನಿಯೋಜಿಸುವಂತೆ ನೀಡಲಾದ ಆದೇಶ ಕೈಬಿಡುವಂತೆ ಸೂಚಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡುರಾವ್ ತಿಳಿಸಿದರು.

ಬೀರೂರು ಸಾರ್ವಜನಿಕ ಆಸ್ಪತ್ರೆಗೆ ಭೇಟಿ । ಸಮುದಾಯ ಆರೋಗ್ಯ ಕೇಂದ್ರಗಳ ಪಟ್ಟಿಯಿಂದ ಬೀರೂರು ಸಾರ್ವಜನಿಕ ಆಸ್ಪತ್ರೆಯನ್ನು ಕೈಬಿಡಲು ಸೂಚನೆ

ಕನ್ನಡಪ್ರಭ ವಾರ್ತೆ, ಬೀರೂರು.ರಾಜ್ಯದಲ್ಲಿ ತಾಯಂದಿರ ಮರಣ ತಡೆಗಟ್ಟು ನಿಟ್ಟಿನಲ್ಲಿ ಬಾಣಂತಿಯರ ಆರೈಕೆ ಹೆಚ್ಚಿಸುವ ಸಲುವಾಗಿ ರಾಜ್ಯದ ಪ್ರತಿ ತಾಲ್ಲೂಕು ಆಸ್ಪತ್ರೆಗಳು 24*7 ತ್ರಿವಳಿ ತಜ್ಞ ವೈದ್ಯರ ಲಭ್ಯತೆ ಹಿನ್ನಲೆಯಲ್ಲಿ ಬೀರೂರು ಸಾರ್ವಜನಿಕ ಆಸ್ಪತ್ರೆಯ ವೈದ್ಯರನ್ನು ಸಹ ತಾಲೂಕು ಆಸ್ಪತ್ರೆಗೆ ನಿಯೋಜಿಸುವಂತೆ ನೀಡಲಾದ ಆದೇಶ ಕೈಬಿಡುವಂತೆ ಸೂಚಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡುರಾವ್ ತಿಳಿಸಿದರು.ತರೀಕೆರೆಗೆ ತೆರಳುವಾಗ ಬೀರೂರಿನ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಕೆ.ಎಸ್.ಆನಂದ್ ಜೊತೆ ಸೋಮವಾರ ಭೇಟಿ ನೀಡಿ ಮಾತನಾಡಿದರು. ತಿಂಗಳಿಗೆ ಸರಾಸರಿ 30 ಅಥವಾ ಅದಕ್ಕಿಂತ ಹೆಚ್ಚಿನ ಹೆರಿಗೆ ಹೊರೆ ಹೊಂದಿರುವ ಸಮುದಾಯ ಆರೋಗ್ಯ ಕೇಂದ್ರಗಳ ಅನಸ್ತೇಶಿಯಾ, ಮಕ್ಕಳ ತಜ್ಞರು, ಪ್ರಸೂತಿ ತಜ್ಞರನ್ನು ತಾಲೂಕು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿತ್ತು. ಇದನ್ನು ಸದ್ಯ ರದ್ದು ಗೊಳಿಸುವಂತೆ ಸೂಚಿಸಲಾಗುವುದು. ಇಲ್ಲಿನ ಆಡಳಿತ ವೈದ್ಯಾಧಿಕಾರಿ ಮತ್ತು ಪ್ರಸೂತಿ ತಜ್ಞರು ಮಾಸಿಕ 30ಕ್ಕಿಂತ ಸುಸೂತ್ರ ಹೆರಿಗೆ ಮಾಡಿಸಬೇಕು ಎಂದರು.

ಶಾಸಕ ಕೆ.ಎಸ್.ಆನಂದ್ ಈ ಸಾರ್ವಜನಿಕ ಆಸ್ಪತ್ರೆ ಉತ್ತಮ ಸೇವೆ ನೀಡುವ ಮೂಲಕ ಅಕ್ಕ-ಪಕ್ಕದ ಜಿಲ್ಲೆಗಳ ರೋಗಿಗಳನ್ನು ಉಪಚರಿಸುವ ಮೂಲಕ ಉತ್ತಮ ಹೆಸರುಗಳಿಸಿದೆ. ಎಲ್ಲಿ ಇಂದು ಹೆಸರಾಂತ ವೈದ್ಯರು ಕಾರ್ಯನಿರ್ವಹಿಸಿರುವ ಉದಾಹರಣೆ ಗಳಿವೆ. ಹಿಂದೆ ಇದನ್ನು ಹೆರಿಗೆಗಳ ವಿಚಾರದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಎಂದು ಪರಿಗಣಿಸಿದೆ. ಅದನ್ನು ಕೈ ಬಿಡಬೇಕು.3500ಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದ ಬೀರೂರಿಗೆ 1985ರಲ್ಲಿ 50 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆ ಮಂಜೂರಾತಿ ಪಡೆದಿದೆ. ಇದರನ್ವಯ ಇಲ್ಲಿ ಫಿಜಿಷಿಯನ್, ಸರ್ಜನ್, ಮಕ್ಕಳ ತಜ್ಞರು ಮತ್ತು ರೇಡಿಯಾಲಾಜಿಸ್ಟ್ ಮತ್ತು ಎಲ್ಲಾ ನೌಕರರು ನೇಮಕಾತಿ ಮತ್ತು ವರ್ಗಾವಣೆಯಲ್ಲಿ ಸಾರ್ವಜನಿಕ ಆಸ್ಪತ್ರೆ ಎಂದು ನಮುದಾಗಿದೆ. ಸಾಕಷ್ಟು ಸಂಖ್ಯೆಯ ಸುತ್ತಮುತ್ತಲ ಗ್ರಾಮಗಳಿಂದ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹೊರ ರೋಗಿಗಳು ದಾಖಲಾಗುವುದರಿಂದ ಸಾರ್ವಜನಿಕರಿಗೆ ಹೆಚ್ಚಿನ ಆರೋಗ್ಯ ಸೇವೆ ನೀಡಲು 100 ಹಾಸಿಗೆಗಳ ಸೌಲಭ್ಯ ನೀಡಿ ಮೇಲ್ದರ್ಜೆಗೆರಿಸಬಹುದು. ಈ ಕುರಿತು ಪ್ರಸ್ತಾವನೆಸರ್ಕಾರಕ್ಕೆ ಕಳುಹಿಸಲಾಗಿದೆ. ಈ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವಂತೆ ಸಚಿವರಿಗೆ ಮನವಿ ಮಾಡಿದರು.ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಅರುಣ್ ಮಾತನಾಡಿ, ಸದ್ಯ ಈ ಆಸ್ಪತ್ರೆಯಲ್ಲಿ ಎಲ್ಲಾ ನುರಿತ ವೈದ್ಯರಿದ್ದು ಹೆರಿಗೆ ಮಾಡಿಸಲು ಪ್ರಸೂತಿ ತಜ್ಞರೂ ಇದ್ದಾರೆ. ಹೆರಿಗೆ ಮಾಡಿಸಲು ಅನಸ್ತೇಷಿಯಾ ವೈದ್ಯರನ್ನು ನಮ್ಮ ಆಸ್ಪತ್ರೆಗೆ ಹಾಕಿದರೆ ರೋ ಗಿಗಳ ಸೇವೆಗೆ ಅನುಕೂಲ ಎಂದು ಸಚಿವರಿಗೆ ಮನವಿ ಮಾಡಿದರು. ರೋಗಿಗಳಿಗೆ ಉತ್ತಮ ಸೇವೆ ಮಾಡಿದರೆ ಆದಷ್ಟು ಬೇಗ ಶಾಸಕರು ತಿಳಿಸಿದಂತೆ ಎಲ್ಲವನ್ನು ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್, ಪುರಸಭೆ ಸದಸ್ಯ ಬಿ.ಕೆ.ಶಶೀಧರ್, ಆಶ್ರಯ ಸಮಿತಿ ಸದಸ್ಯ ಬಿ.ಟಿ.ಚಂದ್ರಶೇಖರ್, ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್, ಆರೀಫ್, ವೈದ್ಯರಾದ ಕಿಶೋರ್, ಗವಿರಂಗಪ್ಪ, ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಾರ್ವಜನಿಕರು ಇದ್ದರು.

6 ಬೀರೂರು 2ಬೀರೂರಿನ ಸಾರ್ವಜನಿಕ ಆಸ್ಪತ್ರೆಗೆ ಸೋಮವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡುರಾವ್ ಭೇಟಿ ನೀಡಿದರು. ಶಾಸಕ ಕೆ.ಎಸ್.ಆನಂದ್, ಆಡಳಿತ ವೈದ್ಯಾಧಿಕಾರಿ ಡಾ.ಅರುಣ್ ಇದ್ದರು.