ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವ ಎಲ್ಲಾ ಮೈಕ್ರೋ ಫೈನಾನ್ಸ್ ಕಂಪನಿಗಳು ತಮ್ಮ ಕಂಪನಿಗಳ ಸಂಬಂಧಿಸಿದ ಪರವಾನಿಗೆ ಮತ್ತು ಸಿಬ್ಬಂದಿ ವಿವರವನ್ನು ಠಾಣೆಗೆ ಸಲ್ಲಿಸಬೇಕೆಂದು ಹಲಗೂರು ಪಿಎಸ್ಐ ಬಿ.ಮಹೇಂದ್ರ ಕಂಪನಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಹಲಗೂರಿನ ಪೊಲೀಸ್ ಠಾಣೆಯಲ್ಲಿ ಮೈಕ್ರೋ ಫೈನಾನ್ಸ್ ಕಂಪನಿ ವ್ಯವಸ್ಥಾಪಕರು, ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಸಭೆ ನಡೆಸಿ ಮಾತನಾಡಿ, ಯಾವುದೇ ಫೈನಾನ್ಸ್ ಕಂಪನಿ ಅಧಿಕಾರಿಗಳು ಸಾಲಗಾರರ ಮನೆ ಬಳಿ ಹೋಗಿ ಸಾಲ ಪಾವತಿಸುವ ಬಗ್ಗೆ ಬಲವಂತ ಮಾಡಬಾರದು, ಸಾಲಗಾರರಿಗೆ ಕಿರುಕುಳ ನೀಡಿ ವಸೂಲಾತಿ ಸಮಯದಲ್ಲಿ ವಿಡಿಯೋ ಮತ್ತು ಫೋಟೋ ತೆಗೆಯಬಾರದು ಎಂದು ಎಚ್ಚರಿಕೆ ನೀಡಿದರು.
ಅರ್.ಬಿ.ಐ ಸೂಚನೆ ಮತ್ತು ಕರ್ತವ್ಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮವಹಿಸಬೇಕು. ಸಾಲ ಪಡೆಯುವವರಿಗೆ ಸಾಲ ಮಂಜೂರಾತಿ ವಿವರವನ್ನು ಕನ್ನಡದಲ್ಲಿ ನೀಡಿ ಅರ್ಥ ಆಗುವಂತೆ ಓದಿ ಹೇಳಬೇಕು ಎಂದು ಸೂಚನೆ ನೀಡಿದರು.ಇತ್ತೀಚಿನ ದಿನಗಳಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಸಾಲ ವಸೂಲಿಯಲ್ಲಿ ಒತ್ತಡ ಹೇರಿದ ಪರಿಣಾಮ ಹಲವೆಡೆ ಆತ್ಮಹತ್ಯೆ ಸಂಭವಿಸಿವೆ. ಈ ಸಂಬಂಧ ಜಿಲ್ಲಾಡಳಿತ ಮಂಡ್ಯದಲ್ಲಿ ಸಹಾಯವಾಣಿ ತೆರೆದಿದ್ದು ಅಗತ್ಯ ಉಳ್ಳವರು ದೂರವಾಣಿ ಸಂಖ್ಯೆ 08232- 224655 ಕರೆ ಮಾಡಬೇಕೆಂದು ಅವರು ತಿಳಿಸಿದರು.
ಈ ವೇಳೆ ಬಂಧನ್ ಮೈಕ್ರೋ ಫೈನಾನ್ಸ್, ಕ್ರೆಡಿಟ್ ಅ್ಯಕ್ಸಿಸ್ ಬ್ಯಾಂಕ್, ಭರತ್ ಫೈನಾನ್ಸ್, ಎಲ್. ಅಂಡ್ ಎನ್ ರೂರಲ್ ಫೈನಾನ್ಸ್, ಬೆಲ್ ಸ್ಟಾರ್, ಅಶೀರ್ವಾದ್, ದ್ವಾರಾ ಮೈಕ್ರೋ ಫೈನಾನ್ಸ್ ಕಂಪನಿಗಳ ವ್ಯವಸ್ಥಾಪಕರು ಭಾಗವಹಿಸಿದ್ದರು.ರೈತರಿಂದ ಸಹಾಯಧನಕ್ಕಾಗಿ ಅರ್ಜಿ ಅಹ್ವಾನ
ಮಂಡ್ಯ: ರೈತರ ಹೊಲಗಳಿಗೆ ಸ್ಲಿಂಕ್ಲರ್ ಸೆಟ್/ಹನಿ ನೀರಾವರಿ ಘಟಕ ಅಳವಡಿಕೆಗೆ ಶೇ.90% ರಷ್ಟು ಸಹಾಯಧನ ನೀಡಲು ಅರ್ಜಿ ಅಹ್ವಾನಿಸಲಾಗಿದೆ. 2024-25 ನೇ ಸಾಲಿನಲ್ಲಿ ರೈತರಿಗೆ ಕೃಷಿ ಇಲಾಖೆ ವವತಿಯಿಂದ ಸ್ಲಿಂಕ್ಲರ್ ಸೆಟ್/ ಹನಿ ನೀರಾವರಿ ಘಟಕ ಅಳವಡಿಸಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದವರಿಗೆ ಶೇ.90% ರಷ್ಟು ಸಹಾಯ ಧನ ನೀಡಲಾಗುತ್ತದೆ. ಆಸಕ್ತ ರೈತರು ಹೋಬಳಿಯಲ್ಲಿನ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ, ಆಧಾರ್ ಕಾರ್ಡ್ ಪ್ರತಿ, ಜೆರಾಕ್ಸ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ ಮತ್ತು ಸ್ಟಾಂಪ್ ಅಳತೆ 2 ಭಾವಚಿತ್ರ ಅಂಟಿಸಿ ಅರ್ಜಿ ಸಲ್ಲಿಸಲು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.ನಾಳೆ ವಿದ್ಯುತ್ ವ್ಯತ್ಯಯಮಂಡ್ಯ: 66/11 ಕೆ.ವಿ ಬಸರಾಳು ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ಕಾರ್ಯನಿರ್ವಹಣೆ ಹಮ್ಮಿಕೊಳ್ಳಲಾಗಿದ್ದು ಫೆ.7ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಈ ಕೆಳಕಂಡ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬಸರಾಳು ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಒಳಪಡುವ ಪ್ರದೇಶಗಳು : ಬಸರಾಳು, ಶಿವಪುರ , ಬೇಬಿ, ಕಂಬದಹಳ್ಳಿ, ಬಿದರಕಟ್ಟೆ, ಮಾರಸಿಂಗನಹಳ್ಳಿ, ಅಂಕುಶಾಪುರ, ಬೆನ್ನಹಟ್ಟಿ, ಶಾನಭೋಗನಹಳ್ಳಿ, ಬೊಮ್ಮನಹಳ್ಳಿ, ಅನುಕುಪ್ಪೆ, ಮನುಗನಹಳ್ಳಿ, ಎಂ.ಹಟ್ನ, ಗಣಿಗ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.