ಸಾರಾಂಶ
ವಿಜಯಪುರ ಲೋಕಸಭಾ ಚುನಾವಣೆಯನ್ನು ಸುಗಮವಾಗಿ ನಡೆಸಲು ಪೂರ್ವಭಾವಿ ಕ್ರಮವಾಗಿ ಪಟ್ಟಣಕ್ಕೆ ಚುನಾವಣಾ ವೀಕ್ಷಕರಾಗಿ ಡಾ.ರತನಕುಮಾರಿ ಕನವರ(ಐಎಎಸ್) ಅವರು ಭೇಟಿ ನೀಡಿ ಮತದಾನದ ಸಿದ್ಧತೆ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ವಿಜಯಪುರ ಲೋಕಸಭಾ ಚುನಾವಣೆಯನ್ನು ಸುಗಮವಾಗಿ ನಡೆಸಲು ಪೂರ್ವಭಾವಿ ಕ್ರಮವಾಗಿ ಪಟ್ಟಣಕ್ಕೆ ಚುನಾವಣಾ ವೀಕ್ಷಕರಾಗಿ ಡಾ.ರತನಕುಮಾರಿ ಕನವರ(ಐಎಎಸ್) ಅವರು ಭೇಟಿ ನೀಡಿ ಮತದಾನದ ಸಿದ್ಧತೆ ಪರಿಶೀಲಿಸಿದರು.ಪಟ್ಟಣದಲ್ಲಿ ಗುರುವಾರ ಎ.ಬಿ.ಸಾಲಕ್ಕಿ ಪದವಿ ಪೂರ್ವ ಕಾಲೇಜಿನಲ್ಲಿ ಭದ್ರತಾ ಕೊಠಡಿ ವೀಕ್ಷಣೆ ಮಾಡಿ ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ, ತಾಲೂಕು ಸ್ವೀಪ್ ಸಮಿತಿ ಹಾಗೂ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಹಾಗೂ ಮತದಾರರಲ್ಲಿ ಜಾಗೃತಿ ಮೂಡಿಸುವ ಚುನಾವಣಾ ಪರ್ವ ದೇಶದ ಗರ್ವ ಚುನಾವಣಾ ರಥಕ್ಕೆ ಚಾಲನೆ ನೀಡಿದರು. ನಂತರ ಚುನಾವಣಾ ಕಾರ್ಯಕ್ಕೆ ನೇಮಕರಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಸಹಾಯಕ ಚುನಾವಣಾಧಿಕಾರಿಗಳಾದ (ಎಆರ್‌ಒ), ಪ್ರವೀಣ್ ಜೈನ್, ತಹಸೀಲ್ದಾರ್ ಪ್ರಕಾಶ ಸಿಂದಗಿ ಸೇರಿದಂತೆ ಫ್ಲೈಯಿಂಗ್ ಸ್ಕ್ವಾಡ್ ತಂಡಗಳು, ವಿಡಿಯೋ ಕಣ್ಗಾವಲು ತಂಡಗಳು, ವಿಡಿಯೋ ವೀಕ್ಷಣೆ ತಂಡ ಮತ್ತು ಲೆಕ್ಕಪರಿಶೋಧಕ ತಂಡಗಳು ಭಾಗವಹಿಸಿದ್ದರು.
ಲೋಕಸಭೆ ಚುನಾವಣೆಗೆ ಕೈಗೊಂಡಿರುವ ಸಿದ್ಧತೆಗಳನ್ನು ವೀಕ್ಷಕರು ಸೂಕ್ಷ್ಮವಾಗಿ ಪರಿಶೀಲಿಸಿದ ಅವರು ತಮ್ಮ ಕರ್ತವ್ಯಗಳನ್ನು ಅಚಲವಾದ ಸಮರ್ಪಣೆ ಮತ್ತು ಶ್ರದ್ಧೆಯಿಂದ ನಿರ್ವಹಿಸುವ ಮಹತ್ವವನ್ನು ಒತ್ತಿ ಹೇಳಿದರು.ನಂತರ ಪಟ್ಟಣದ ಮತಗಟ್ಟೆ ಸಂಖ್ಯೆ 31,36,28,29,30,39,40,41ಕ್ಕೆ ಹಾಗೂ ಜಾಲವಾದ, ಕೊಂಡಗೂಳಿ ಗ್ರಾಮದ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೇ 7ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡುವಂತೆ ಜಾಗೃತಿ ಮೂಡಿಸುವ ಜೊತೆ ಜಾಗೃತಿ ಕರ ಪತ್ರಗಳನ್ನು ಗೋಡೆಗಳಿಗೆ ಅಂಟಿಸಲಾಯಿತು.ಇದೇ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಪ್ರವೀಣ್ ಜೈನ್, ತಹಸೀಲ್ದಾರ್ ಪ್ರಕಾಶ ಸಿಂದಗಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂಜೀವಕುಮಾರ ಜುನ್ನುರ, ಪಪಂ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ಮತ್ತು ಇತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.