ಕುಡಿವ ನೀರು ಸರಬರಾಜು ಜಲ ಮೂಲ ಶುಚಿಗೊಳಿಸಲು ಸೂಚನೆ

| Published : Dec 18 2024, 12:47 AM IST

ಸಾರಾಂಶ

Instructions for cleaning drinking water supply water source

-ಮಲ್ಲದಗುಡ್ಡ ಗ್ರಾಪಂ, ಹಿರೇದಿನ್ನಿ ಗ್ರಾಮದ ಕುಡಿವ ನೀರಿನ ಕೆರೆಗೆ ಮಸ್ಕಿ ತಾಪಂ ಇಒ ಅಮರೇಶ ಯಾದವ ಭೇಟಿ

-----

ಕನ್ನಡಪ್ರಭ ವಾರ್ತೆ ಕವಿತಾಳ

ಪಟ್ಟಣ ಸಮೀಪದ ಮಲ್ಲದಗುಡ್ಡ ಗ್ರಾಪಂ ಮತ್ತು ಹಿರೇದಿನ್ನಿ ಗ್ರಾಮದ ಕುಡಿಯುವ ನೀರಿನ ಕೆರೆಗೆ ಮಸ್ಕಿ ತಾಪಂ ಇಒ ಅಮರೇಶ ಯಾದವ ಭೇಟಿ ನೀಡಿ ಪರಿಶೀಲಿಸಿದರು.

ಮಲ್ಲದಗುಡ್ಡ ಗ್ರಾಪಂಯಲ್ಲಿ ಮಾತನಾಡಿದ ಇಒ ಅವರು, ಸ್ಥಳೀಯ ಕೂಲಿಕಾರರ ಬೇಡಿಕೆಗೆ ಅನುಸಾರ ಬೇಸಿಗೆ ಅವಧಿಯಲ್ಲಿ ನರೇಗಾದಡಿ ಕೆಲಸ ಒದಗಿಸಬೇಕು. ಕುಡಿಯುವ ನೀರು ಸರಬರಾಜು ಮಾಡುವ ಜಲ ಮೂಲಗಳು, ನೀರಿನ ತೊಟ್ಟಿಗಳನ್ನು ಶುಚಿಗೊಳಿಸಬೇಕು, ಸ್ವಚ್ಛ ಭಾರತ್ ಯೋಜನೆಯಡಿ ಶೌಚಾಲಯ ನಿರ್ಮಿಸಿದ ಫಲಾನುಭಗಳಿಗೆ ಅನುದಾನ ಪಾವತಿ ಹಾಗೂ ಹೊಸದಾಗಿ ಶೌಚಾಲಯ ನಿರ್ಮಾಣಕ್ಕೆ ತಂತ್ರಾಂಶದ ಮೂಲಕ ಬೇಡಿಕೆ ಸ್ವೀಕರಿಸಬೇಕು, ಶುದ್ಧ ಕುಡಿಯುವ ನೀರಿನ ಘಟಕ ನಿರಂತರ ಲಭ್ಯವಿರಬೇಕು ಹಾಗೂ ಪ್ರತಿ ಗುರುವಾರ ತೆರಿಗೆ ವಸೂಲಾತಿ ಅಭಿಯಾನ ಕೈಗೊಂಡು ನಿಗದಿತ ಗುರಿ ಸಾಧಿಸಬೇಕು ಎಂದು ಸೂಚಿಸಿದರು.

ಹಿರೇದಿನ್ನಿ ಗ್ರಾಮದ ಕುಡಿವ ನೀರಿನ ಕೆರೆಗೆ ಭೇಟಿ ನೀಡಿದ ಅವರು ಕೆರೆ ನೀರು ಸೇವಿಸಿ ಪರೀಕ್ಷಿಸಿದರು. ಕೆರೆಯ ಸುತ್ತಲಿನ ಗಿಡಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಬೇಕು. ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾದ ತಕ್ಷಣ ಕೆರೆಯನ್ನು ಭರ್ತಿ ಮಾಡಬೇಕು. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಬಸವಲಿಂಗಪ್ಪ ಮತ್ತು ಲಕ್ಷ್ಮಣ, ಗ್ರಾಪಂ ಸಿಬ್ಬಂದಿ ಇದ್ದರು.

------------------

ಫೋಟೊ: ಕವಿತಾಳ ಪಟ್ಟಣ ಸಮೀಪದ ಮಲ್ಲದಗುಡ್ಡ ಗ್ರಾಪಂ ಮತ್ತು ಹಿರೇದಿನ್ನಿ ಗ್ರಾಮದ ಕುಡಿಯುವ ನೀರಿನ ಕೆರೆಗೆ ಮಸ್ಕಿ ತಾಪಂ ಇಒ ಅಮರೇಶ ಯಾದವ ಭೇಟಿ ನೀಡಿ ಪರಿಶೀಲಿಸಿದರು.

17ಕೆಪಿಕೆವಿಟಿ01