ಘನ ತ್ಯಾಜ್ಯವಿಲೇವಾರಿ ಘಟಕದಲ್ಲಿ ಶೇಖರಿಸಲಾಗಿದ್ದ ಪಾರಂಪರಿಕ ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ಸಂಸ್ಕರಿಸುವ ಮೂಲಕ ಕಸದ ಸಮಸ್ಯೆಯನ್ನು ತಪ್ಪಿಸಿ ಇದರಿಂದ ಗೊಬ್ಬರವನ್ನು ತಯಾರಿಸಿ ರೈತರಿಗೆ ಕಡಿಮೆ ಬೆಲೆಯಲ್ಲಿ ನೀಡುವಂತೆ ಶಾಸಕ ಸಿ.ಬಿ.ಸುರೇಶ್‌ಬಾಬು ಸೂಚಿಸಿದರು.

ಕನ್ನಡ ಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಘನ ತ್ಯಾಜ್ಯವಿಲೇವಾರಿ ಘಟಕದಲ್ಲಿ ಶೇಖರಿಸಲಾಗಿದ್ದ ಪಾರಂಪರಿಕ ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ಸಂಸ್ಕರಿಸುವ ಮೂಲಕ ಕಸದ ಸಮಸ್ಯೆಯನ್ನು ತಪ್ಪಿಸಿ ಇದರಿಂದ ಗೊಬ್ಬರವನ್ನು ತಯಾರಿಸಿ ರೈತರಿಗೆ ಕಡಿಮೆ ಬೆಲೆಯಲ್ಲಿ ನೀಡುವಂತೆ ಶಾಸಕ ಸಿ.ಬಿ.ಸುರೇಶ್‌ಬಾಬು ಸೂಚಿಸಿದರು.ಪಟ್ಟಣದ ಹೊರವಲಯದಲ್ಲಿರವು ಘನ ತ್ಯಾಜ್ಯವಿಲೇವಾರಿ ಘಟಕದಲ್ಲಿ ಕಸವಿಲೇವಾರಿ ಮಾಡುವ ಯಂತ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಘಟಕದಲ್ಲಿರುವ ಸುಮಾರು ೨೫ವರ್ಷಗಳಿಂದ ಪಾರಂಪರಿಕ ಕಸವನ್ನು ಈ ಯಂತ್ರಗಳ ಮೂಲಕ ಸರಿಯಾದ ರೀತಿಯಲ್ಲಿ ೫೦ ದಿನಗಳಲ್ಲಿ ವಿಲೇವಾರಿ ಮಾಡಿ ಇದರಲ್ಲಿ ಹಸಿಕಸ ಹಾಗೂ ಒಣಕಸಗಳನ್ನು ಬೇರ್ಪಡಿಸಿ ಸರಿಯಾದ ರೀತಿಯಲ್ಲಿ ಗೊಬ್ಬರನವ್ನು ತಯಾರಿಸಿ ಅದನ್ನು ರೈತರಿಗೆ ಮಾರಾಟ ಮಾಡಿ ಸಾದ್ಯವಾದಷ್ಟೂ ಭೂಮಿಗೆ ಯಾವುದೇ ರೀತಿಯ ತ್ಯಾಜ್ಯ ಸೇರದಂತೆ ಎಚ್ಚರಿಕೆ ವಹಿಸಬೇಕಿದೆ. ಕಸವಿಲೇವಾರಿ ಪ್ರತಿ ಮನೆಗಳಿಂದಲೇ ಮಾಡಿದಾಗ ಮಾತ್ರ ಈ ಕಸದ ಸಮಸ್ಯೆ ತಪ್ಪುತ್ತದೆ ಎಂದರು.ಈ ಸಂದರ್ಭದಲ್ಲಿ ಎಂಜಿನಿಯರ್ ಮಂಜುನಾಥ್ ಮಾತನಾಡಿ ಪಟ್ಟಣದಲ್ಲಿ ಪ್ರತಿದಿನ ಸುಮಾರು ೧೦ಟನ್ ಕಸ ಶೇಖರಣೆಯಾಗುತ್ತಿದ್ದು ಅಂದಿನ ಕಸವನ್ನು ಅಂದೇ ಸರಿಯಾದ ರೀತಿಯಲ್ಲಿ ವಿಂಗಡಣೆ ಮಾಡಲಾಗುತ್ತಿದೆ. ಇಷ್ಟು ದಿನ ಶೇಖರಣೆಯಾಗಿದ್ದ ಕಸವನ್ನು ಈ ಯಂತ್ರದ ಮೂಲಕ ಅದಷ್ಟು ವಿಲೇಮಾಡಲಾಗುವುದು. ಸುಮಾರು ೨೫-೨೬ವರ್ಷಗಳಿಂದ ಶೇಖರಿಸಲಾಗಿದ್ದ ೨೫ಸಾವಿರ ಟನ್ ಘನತ್ಯಾಜ್ಯ ವಿಲೇವಾರಿಗೆ ಒಂದುಕೋಟಿ ೭೯ಲಕ್ಷಕ್ಕೆ ಟೆಂಡರ್ ಆಗಿದ್ದು ಇದನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಎಂಜಿನಿಯರ್ ವಿನಯ್ , ಗುತ್ತಿಗೆದಾರ ಗುಂಟೂರು ಜಾನಿ, ಕೋ.ಬ್ಯಾಂಕ್ ನಿದೇಶಕಿ ಶಿಲ್ಪಧರಣಿಶ್ ಯುವ ಮುಖಂಡ ಸುಬ್ರಮಣ್ಯ ಸೇರಿದಂತೆ ಇತರರು ಇದ್ದರು.