ಇ-ಕೆವೈಸಿ, ನರೇಗಾ ಮಾನವ ದಿನಗಳ ಸೃಜನೆಯತ್ತ ಗಮನ ನೀಡಿ: ವಿಶ್ವನಾಥ ಹೊಸಮನಿ

| Published : Oct 17 2025, 01:02 AM IST

ಇ-ಕೆವೈಸಿ, ನರೇಗಾ ಮಾನವ ದಿನಗಳ ಸೃಜನೆಯತ್ತ ಗಮನ ನೀಡಿ: ವಿಶ್ವನಾಥ ಹೊಸಮನಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ನೋಂದಾಯಿತವಾಗಿರುವ ತಾಲೂಕಿನ ಎಲ್ಲ ಗ್ರಾಮೀಣ ಕುಟುಂಬಗಳ ಉದ್ಯೋಗ ಚೀಟಿ ಇ-ಕೆವೈಸಿ ಪ್ರಕ್ರಿಯೆಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಮುಂಡರಗಿ ತಾಲೂಕು ಪಂಚಾಯಿತಿ ನರೇಗಾ ಸಿಬ್ಬಂದಿಗೆ ತಾಪಂ ಇಒ ವಿಶ್ವನಾಥ ಹೊಸಮನಿ ಸೂಚಿಸಿದರು.

ಮುಂಡರಗಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ನೋಂದಾಯಿತವಾಗಿರುವ ತಾಲೂಕಿನ ಎಲ್ಲ ಗ್ರಾಮೀಣ ಕುಟುಂಬಗಳ ಉದ್ಯೋಗ ಚೀಟಿ ಇ-ಕೆವೈಸಿ ಪ್ರಕ್ರಿಯೆಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ತಾಲೂಕು ಪಂಚಾಯಿತಿ ನರೇಗಾ ಸಿಬ್ಬಂದಿಗೆ ತಾಪಂ ಇಒ ವಿಶ್ವನಾಥ ಹೊಸಮನಿ ಸೂಚಿಸಿದರು.

ತಾಪಂ ಕಚೇರಿಯಲ್ಲಿ ಗುರುವಾರ ನರೇಗಾ ಸಿಬ್ಬಂದಿ ಸಭೆ ನಡೆಸಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಿಂದ ಇ-ಕೆವೈಸಿ ಪ್ರಕ್ರಿಯೆ ಕಡ್ಡಾಯವಾಗಿ ಮಾಡಬೇಕು ಎಂಬ ಆದೇಶ ಇರುವುದರಿಂದ ನರೇಗಾ ಕೂಲಿಕಾರರ ಮನೆ ಮನೆ ಸಂಪರ್ಕಿಸಿ ಸಕ್ರಿಯವಾಗಿ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಿದರು.

ತಾಲೂಕಿನ 19 ಗ್ರಾಪಂ ಮಟ್ಟದಲ್ಲಿ ನರೇಗಾ ಸಿಬ್ಬಂದಿಯಾದ ಗ್ರಾಮ ಕಾಯಕ ಮಿತ್ರ, ಬಿಎಫ್‌ಟಿ, ತಾಂತ್ರಿಕ ಸಹಾಯಕರಿಗೆ ಇ-ಕೆವೈಸಿ ಕುರಿತು ತರಬೇತಿ ನೀಡಲಾಗಿದೆ. ಗ್ರಾಪಂಗಳ ಇತರ ಸಿಬ್ಬಂದಿ ಬಳಸಿಕೊಂಡು ಸಕ್ರಿಯ ಕೂಲಿಕಾರರ ಜಾಬ್ ಕಾರ್ಡ್‌ಗಳನ್ನು ಇ-ಕೆವೈಸಿ ಮೂಲಕ ಪರಿಶೀಲಿಸುವ ಕಾರ್ಯ ತುರ್ತಾಗಿ ನಡೆಯಲಿ ಎಂದರು.

ನರೇಗಾ ತಾಂತ್ರಿಕ ಸಹಾಯಕರು ಕೃಷಿ ಇಲಾಖೆ ಅಡಿಯ ಕೃಷಿ ಹೊಂಡ ಕಾಮಗಾರಿಗಳನ್ನು ಶೀಘ್ರವೇ ಆರಂಭಿಸಿ ಕೂಲಿಕಾರರಿಗೆ ಉದ್ಯೋಗ ನೀಡಲು ಸೂಚಿಸಿ ಇದರಿಂದ ಮಾನವ ದಿನಗಳ ಸೃಜನೆ ಸಾಧ್ಯವಾಗಲಿದೆ. ಹಾಗಾಗಿ ಆ ನಿಟ್ಟಿನ ಕಡೆಯು ಗಮನಹರಿಸಿ ಎಂದು ತಿಳಿಸಿದರು‌.

ಚಾಲ್ತಿ ಕಾಮಗಾರಿಗಳನ್ನು ಮುಕ್ತಾಯಗೊಳಿಸಿ ಹೊಸ ಕಾಮಗಾರಿಗಳ ಮೂಲಕ ಗ್ರಾಮೀಣ ಭಾಗದಲ್ಲಿ ಕೂಲಿಕಾರರಿಗೆ ಉದ್ಯೋಗ ನೀಡಲು ಗಮನಹರಿಸಲು ತಿಳಿಸಿದರು‌. 2026-27ನೇ ನರೇಗಾ ಕ್ರಿಯಾಯೋಜನೆಗೆ ಈಗಾಗಲೇ ಸುತ್ತೋಲೆ ಬಂದಿದ್ದು, ಕ್ರಿಯಾಯೋಜನೆ ಸಿದ್ಧಪಡಿಸುವ ಕಾರ್ಯವು ನಡೆಯಲಿ ಎಂದರು.

ಈ ವೇಳೆ ಟಿಸಿ ಪ್ರವೀಣ ಸೂಡಿ, ಟಿಎಂಐಎಸ್ ಬಸವರಾಜ ಮಣ್ಣಮ್ಮನವರ, ತಾಂತ್ರಿಕ ಸಹಾಯಕರು, ಬಿಎಫ್‌ಟಿ ಉಪಸ್ಥಿತರಿದ್ದರು.