ಸಾರಾಂಶ
25 ವರ್ಷಗಳ ಬಳಿಕ ರಾಜ್ಯದಲ್ಲಿ ಅನುಷ್ಠಾನಕ್ಕೆ ಬಂದಿರುವ ಗ್ರಾಚ್ಯುಯಿಟಿಗೆ ವಿಮೆಯ ರಕ್ಷಣೆ ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಸಂತಸ ತಂದಿದೆ ಎಂದು ಮಾಜಿ ಎಂಎಲ್‌ಸಿ ಡಾ. ಎಂ.ಆರ್. ಹುಲಿನಾಯ್ಕರ್ ಸಂತಸ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ತುಮಕೂರು
25 ವರ್ಷಗಳ ಬಳಿಕ ರಾಜ್ಯದಲ್ಲಿ ಅನುಷ್ಠಾನಕ್ಕೆ ಬಂದಿರುವ ಗ್ರಾಚ್ಯುಯಿಟಿಗೆ ವಿಮೆಯ ರಕ್ಷಣೆ ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಸಂತಸ ತಂದಿದೆ ಎಂದು ಮಾಜಿ ಎಂಎಲ್‌ಸಿ ಡಾ. ಎಂ.ಆರ್. ಹುಲಿನಾಯ್ಕರ್ ಸಂತಸ ವ್ಯಕ್ತಪಡಿಸಿದರು.ತುಮಕೂರು ಮಾನವ ಸಂಪನ್ಮೂಲ ವೇದಿಕೆ, ವ್ಯವಹಾರ ಆಡಳಿತ ವಿಭಾಗ, ಶ್ರೀದೇವಿ ಇನ್ಸ್ ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸಹಯೋದಲ್ಲಿ ಆಯೋಜಿಸಿದ್ದ ‘ಕರ್ನಾಟಕ ಕಡ್ಡಾಯ ಗ್ರಾಚ್ಯುಯಿಟಿ ವಿಮಾ ನಿಯಮಗಳು ’ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೆಂಗಳೂರು ವಿಭಾಗ-1ರ ಉಪ ಕಾರ್ಮಿಕ ಆಯುಕ್ತ ಎ.ಎಚ್. ಉಮೇಶ್ ಮಾತನಾಡಿ, ಕಾರ್ಮಿಕ ಚಳವಳಿ ಸ್ವಾತಂತ್ರ್ಯ ಪೂರ್ವದಿಂದಲೂ ನಡೆಯುತ್ತಿದ್ದು, ಅದನ್ನು ಬಗೆಹರಿಸುವ ದೃಷ್ಟಿಕೋನದಿಂದ ಸರ್ಕಾರವು ಕಾರ್ಮಿಕರಿಗೆ ಅನುಕೂಲವಾಗುವ ಕಾಯ್ದೆಗಳನ್ನು ಜಾರಿಗೊಳಿಸಿದೆ. ಕಾರ್ಮಿಕರ ಹಿತಕ್ಕಾಗಿ ಕಾರ್ಖಾನೆಗಳು ಇದನ್ನು ಅಳವಡಿಸಿಕೊಳ್ಳಬೇಕು ಎಂದರು.ಜೀವ ವಿಮಾ ನಿಗಮದ ಹರೀಶ್ ಅವರು ಕಾರ್ಖಾನೆಗಳು ಈ ಗ್ರಾಚ್ಯುಯಿಟಿಯನ್ನು ವಿಮೆಯಲ್ಲಿ ಜೋಡಿಸಿದರೆ ಅದರಿಂದ ಆಗುವ ಪ್ರಯೋಜನಗಳನ್ನು ತಿಳಿಸಿದರು.
ತುಮಕೂರು ಮಾನವ ಸಂಪನ್ಮೂಲ ವೇದಿಕೆ ಅಧ್ಯಕ್ಷ ಗೋವಿಂದರಾಜು ಅವರು ಮಾನವ ಸಂಪನ್ಮೂಲ ವೇದಿಕೆಯ ಉದ್ದೇಶ ಮತ್ತು ಕಾರ್ಯಗಳ ಕುರಿತು ವಿವರಿಸಿದರು.ಬೆಂಗಳೂರು ವಿಭಾಗ-1ರ ಸಹಾಯಕ ಕಾರ್ಮಿಕ ಆಯುಕ್ತ ಎಂ.ಎನ್. ದೇವರಾಜ್, ತುಮಕೂರು ವಿಭಾಗದ ಕಾರ್ಮಿಕ ಅಧಿಕಾರಿ ಕೆ. ತೇಜವತಿ, ತುಮಕೂರು ಮಾನವ ಸಂಪನ್ಮೂಲ ವೇದಿಕೆಯ ಉಪಾಧ್ಯಾಕ್ಷ ಪ್ರೊ.ಕೆ.ಜಿ. ಪರಶುರಾಮ, ಕಾರ್ಯದರ್ಶಿ ಎಲ್.ಆರ್. ಚಿದಾನಂದ, ಕೋಶಾಧಿಕಾರಿ ಮಂಜುನಾಥ್ ನಾಯಕ್, ಶ್ರೀದೇವಿ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥ ಡಾ. ಕೆ.ಎಸ್. ರಾಮಕೃಷ್ಣ ಉಪಸ್ಥಿತರಿದ್ದರು.