ರೈತರಿಗೆ ವಿಮಾ ಹಣ: ಜಿಲ್ಲಾಧಿಕಾರಿಗೆ ಅಭಿನಂದನೆ

| Published : Apr 07 2024, 01:51 AM IST

ಸಾರಾಂಶ

ಲೋಕಸಭೆ ಚುನಾವಣಾ ಕೆಲಸದ ಒತ್ತಡದಲ್ಲಿದ್ದರೂ ಮಾನ್ಯ ಜಿಲ್ಲಾಧಿಕಾರಿ ರೈತರಿಗೆ ಬರಬೇಕಾಗಿದ್ದ ವಿಮಾ ಹಣವನ್ನು ಕೊಡಿಸುವಲ್ಲಿ ಮುಂದಾಗಿರುವುದು ರೈತ ಸಮುದಾಯಕ್ಕೆ ಹೆಮ್ಮೆ ತಂದಿದೆ. ವಿಮಾ ಹಣ ರೈತರ ಖಾತೆಗೆ ಜಮಾ ಮಾಡಿಸುವಲ್ಲಿ ಅವರು ಮುಂದಾಗಿರುವುದು ಸಂತಸದಾಯಕವಾಗಿದ್ದು ಜಿಲ್ಲಾಧಿಕಾರಿ ವೆಂಕಟೇಶ್‌ ಹಾಗೂ ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಇವರಿಗೆ ಹಸಿರು ಶಾಲು ಹೊದಿಸಿ ಅಭಿನಂದಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಲೋಕಸಭೆ ಚುನಾವಣಾ ಕೆಲಸದ ಒತ್ತಡದಲ್ಲಿದ್ದರೂ ಮಾನ್ಯ ಜಿಲ್ಲಾಧಿಕಾರಿ ರೈತರಿಗೆ ಬರಬೇಕಾಗಿದ್ದ ವಿಮಾ ಹಣವನ್ನು ಕೊಡಿಸುವಲ್ಲಿ ಮುಂದಾಗಿರುವುದು ರೈತ ಸಮುದಾಯಕ್ಕೆ ಹೆಮ್ಮೆ ತಂದಿದೆ. ವಿಮಾ ಹಣ ರೈತರ ಖಾತೆಗೆ ಜಮಾ ಮಾಡಿಸುವಲ್ಲಿ ಅವರು ಮುಂದಾಗಿರುವುದು ಸಂತಸದಾಯಕವಾಗಿದ್ದು ಜಿಲ್ಲಾಧಿಕಾರಿ ವೆಂಕಟೇಶ್‌ ಹಾಗೂ ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಇವರಿಗೆ ಹಸಿರು ಶಾಲು ಹೊದಿಸಿ ಅಭಿನಂದಿಸಲಾಯಿತು.೨೦೨೩ನೇ ಸಾಲಿನ ಮುಂಗಾರಿನಲ್ಲಿ ರೈತರು ವಿಮಾ ಕಂಪನಿಗಳಿಗೆ ೧೫ ಕೋಟಿ ವಿಮೆ ಹಣ ಪಾವತಿಸಿದ್ದರು. ಮಳೆ ಬಾರದೆ ಸಂಪೂರ್ಣ ಬೆಳೆ ನಾಶವಾದ ಹಿನ್ನೆಲೆ ರೈತರು ಬೆಳೆ ವಿಮಾ ಹಣವನ್ನು ನೀಡುವಂತೆ ಮನವಿ ಮಾಡಿದ್ದರು. ಅನೇಕ ಸಭೆಗಳಲ್ಲಿ ನಡೆಸಿದ ಜಿಲ್ಲಾಧಿಕಾರಿ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ರೈತರಿಗೆ ವಿಮಾ ಹಣವನ್ನು ನೀಡುವಂತೆ ಸೂಚನೆ ನೀಡಿದರು. ಚುನಾವಣೆ ಬಂದ ಹಿನ್ನೆಲೆ ಬಹುತೇಕ ಜಿಲ್ಲೆಗಳಲ್ಲಿ ವಿಮಾ ಹಣವನ್ನು ಕೊಡಿಸುವುದನ್ನೇ ಮರೆತಂತೆ ಕಾಣುತ್ತಿತ್ತು. ಜಿಲ್ಲಾಧಿಕಾರಿ ಚುನಾವಣೆ ಕರ್ತವ್ಯದ ನಡುವೆಯೂ ವಿಮಾ ಕಂಪನಿ ಅಧಿಕಾರಿಗಳಿಗೆ ವಿಮಾ ಹಣವನ್ನು ಕೊಡುವಂತೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ ಫಲವಾಗಿ ಜಿಲ್ಲೆಯ ೮೭ ಸಾವಿರ ರೈತರಿಗೆ ೨೮೪ ಕೋಟಿ ರು. ಹಣ ಸಂದಾಯವಾಗಿದೆ. ಇದರಿಂದ ಸಂತಸಗೊಂಡ ರೈತರು ಅಭಿನಂದಿಸಿ ಉಳಿದ ಕೆಲವರಿಗೆ ವಿಮಾ ಹಣ ಕೊಡಿಸುವಂತೆ ಮನವಿ ಸಲ್ಲಿಸಿದರು.

ಹಿರಿಯ ಮುಖಂಡರಾದ ಕೆ.ಪಿ.ಭೂತಯ್ಯ, ಬಸ್ತಿಹಳ್ಳಿ ಸುರೇಶ್‌ಬಾಬು, ರೆಡ್ಡಿಹಳ್ಳಿ ವೀರಣ್ಣ, ಎಂ.ಬಿ.ತಿಪ್ಪೇಸ್ವಾಮಿ .ಧನಂಜಯ್ಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಹಂಪಣ್ಣ, ತಿಮ್ಮಣ್ಣ, ತಿಪ್ಪೇಸ್ವಾಮಿ ಹಾಗೂ ಇತರರು ಈ ಸಂದರ್ಭದಲ್ಲಿ ಇದ್ದರು.