ಮೈಷುಗರ್ ಗತವೈಭವ ಮರುಕಳಿಸುವಂತೆ ಸಮಗ್ರ ಅಭಿವೃದ್ಧಿ: ಸಿ.ಡಿ.ಗಂಗಾಧರ್

| Published : Mar 05 2024, 01:30 AM IST

ಮೈಷುಗರ್ ಗತವೈಭವ ಮರುಕಳಿಸುವಂತೆ ಸಮಗ್ರ ಅಭಿವೃದ್ಧಿ: ಸಿ.ಡಿ.ಗಂಗಾಧರ್
Share this Article
  • FB
  • TW
  • Linkdin
  • Email

ಸಾರಾಂಶ

ಕಬ್ಬಿನ ಅಭಾವದಿಂದ ಕಾರ್ಖಾನೆ ಸ್ಥಗಿತಗೊಂಡಿದೆ. ಈ ಬಾರಿ ಹಂಗಾಮಿನಲ್ಲಿ ಕಾರ್ಖಾನೆಗೆ ಅಗತ್ಯವಾದ ಕಬ್ಬನ್ನು ತಂದು ಉತ್ತಮ ರೀತಿಯಲ್ಲಿ ಕಬ್ಬು ಅರೆದು ಉನ್ನತ ಸ್ಥಿತಿಗೆ ಕೊಂಡೊಯ್ಯಲಾಗುವುದು. ಈಗಾಗಲೇ ಕಬ್ಬು ಒಪ್ಪಿಗೆಗಾಗಿ ನಾನೂ ಸರಿದಂತೆ ಶಾಸಕರು ರೈತರಿಗೆ ಮನವರಿಕೆ ಮಾಡಿಕೊಟ್ಟಿದ್ದು, ಹಲವು ರೈತರು ಕಾರ್ಖಾನೆಗೆ ಕಬ್ಬು ಸಾಗಿಸಲು ಸಹಮತ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನನ್ನ ಅಧಿಕಾರದ ಅವಧಿಯಲ್ಲಿ ಮೈಷುಗರ್ ಕಾರ್ಖಾನೆಯ ಗತವೈಭವ ಮರುಕಳುಸುವಂತೆ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ನೂತನ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.

ನಗರದ ಮೈಷುಗರ್ ಕಾರ್ಖಾನೆ ಆಡಳಿತ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿ, ಕಾರ್ಖಾನೆ ಇತ್ತೀಚಿನ ದಿನಗಳಲ್ಲಿ ಆರ್ಥಿಕ ಸಂಕಷ್ಟ ಎದುರಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಬಾರಿ ₹50 ಕೋಟಿ ಅನುದಾನ ಬಿಡುಗಡೆ ಮಾಡಿ ಕಾರ್ಖಾನೆ ಪುನ ಪ್ರಾರಂಭಿಸಿದ್ದರು ಎಂದರು.

ಕಬ್ಬಿನ ಅಭಾವದಿಂದ ಕಾರ್ಖಾನೆ ಸ್ಥಗಿತಗೊಂಡಿದೆ. ಈ ಬಾರಿ ಹಂಗಾಮಿನಲ್ಲಿ ಕಾರ್ಖಾನೆಗೆ ಅಗತ್ಯವಾದ ಕಬ್ಬನ್ನು ತಂದು ಉತ್ತಮ ರೀತಿಯಲ್ಲಿ ಕಬ್ಬು ಅರೆದು ಉನ್ನತ ಸ್ಥಿತಿಗೆ ಕೊಂಡೊಯ್ಯಲಾಗುವುದು. ಈಗಾಗಲೇ ಕಬ್ಬು ಒಪ್ಪಿಗೆಗಾಗಿ ನಾನೂ ಸರಿದಂತೆ ಶಾಸಕರು ರೈತರಿಗೆ ಮನವರಿಕೆ ಮಾಡಿಕೊಟ್ಟಿದ್ದು, ಹಲವು ರೈತರು ಕಾರ್ಖಾನೆಗೆ ಕಬ್ಬು ಸಾಗಿಸಲು ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.

ರಾಜ್ಯ ಸರ್ಕಾರ ಹೊಸದಾಗಿ ಕಾರ್ಖಾನೆ ಸ್ಥಾಪನೆ ಮಾಡಲಿದೆ. ಹಗಲಿರುಳು ಕಾರ್ಖಾನೆ ಉನ್ನತಿಗೆ ದುಡಿಯುವ ಮೂಲಕ ರೈತರಿಗೆ ಅನುಕೂಲವಾಗುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಅಧಿಕಾರ ಸ್ವೀಕಾರಕ್ಕೂ ಮುನ್ನ ನಾಲ್ವಡಿ ಕೃಷ್ಣರಾಜ ಒಡೆಯರ್, ಕಾವೇರಿ ಮಾತೆ ಹಾಗೂ ಕೋಲ್ಮನ್ ತಿಮೆಗಳಿಗೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ಈ ವೇಳೆ ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ಕೆಪಿಸಿಸಿ ಸದಸ್ಯರಾದ ವಿಜಯಲಕ್ಷ್ಮಿ, ಎಚ್.ತ್ಯಾಗರಾಜು, ಸಿ.ಜೆ.ನಾಗರಾಜು, ಮುಖಂಡರಾದ ಕೆ.ಆರ್.ಪೇಟೆ ದೇವರಾಜು, ಎಂ.ಪುಟ್ಟೇಗೌಡ, ವಿಜಯ ರಾಮೇಗೌಡ, ಹಾಲಹಳ್ಳಿ ರಾಮಲಿಂಗೇಗೌಡ, ಸಿ.ಆರ್.ರಮೇಶ್ , ರುದ್ರಪ್ಪ, ನಗರಸಭೆ ಸದಸ್ಯರಾದ ಪೂರ್ಣಿಮಾ, ನಯೀಂ, ಶ್ರೀಧರ್, ಎನ್.ಕೃಷ್ಣೇಗೌಡ ಇತರರು ಉಪಸ್ಥಿತರಿದ್ದರು.