ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂದಗಿ ವಿದೇಶಗಳಲ್ಲಿ ಬುದ್ಧಿಗೆ ಮಹತ್ವ ನೀಡಿದರೇ ನಮ್ಮ ಭಾರತದಲ್ಲಿ ಹೃದಯವಂತಿಕೆಗೆ ಮೊದಲು ಆದ್ಯತೆ ನೀಡಲಾಗುತ್ತದೆ. ಇದು ನಮ್ಮ ದೇಶದ ಸಂಸ್ಕೃತಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ ಹೇಳಿದರು. ತಾಲೂಕಿನ ಹಿಕ್ಕನಗುತ್ತಿ ಗ್ರಾಮದ ಲಿಂಗಾಯತ ಮಹಾಮಠದಲ್ಲಿ ಹಮ್ಮಿಕೊಂಡ ಮಾಸಿಕ ೮ನೇ ಶರಣಾನುಭವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಾನವನಿಗೆ ವೈಭವದ ಜೀವನಕ್ಕೆ ಬೇಕಾಗುವ ಎಲ್ಲ ಸಂಪತ್ತಿದೆ. ಆದರೆ, ಬದುಕಿನಲ್ಲಿ ನೆಮ್ಮದಿಯಿಲ್ಲ.
ಕನ್ನಡಪ್ರಭ ವಾರ್ತೆ ಸಿಂದಗಿ
ವಿದೇಶಗಳಲ್ಲಿ ಬುದ್ಧಿಗೆ ಮಹತ್ವ ನೀಡಿದರೇ ನಮ್ಮ ಭಾರತದಲ್ಲಿ ಹೃದಯವಂತಿಕೆಗೆ ಮೊದಲು ಆದ್ಯತೆ ನೀಡಲಾಗುತ್ತದೆ. ಇದು ನಮ್ಮ ದೇಶದ ಸಂಸ್ಕೃತಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ ಹೇಳಿದರು.ತಾಲೂಕಿನ ಹಿಕ್ಕನಗುತ್ತಿ ಗ್ರಾಮದ ಲಿಂಗಾಯತ ಮಹಾಮಠದಲ್ಲಿ ಹಮ್ಮಿಕೊಂಡ ಮಾಸಿಕ ೮ನೇ ಶರಣಾನುಭವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮಾನವನಿಗೆ ವೈಭವದ ಜೀವನಕ್ಕೆ ಬೇಕಾಗುವ ಎಲ್ಲ ಸಂಪತ್ತಿದೆ. ಆದರೆ, ಬದುಕಿನಲ್ಲಿ ನೆಮ್ಮದಿಯಿಲ್ಲ. ಏಕೆಂದರೆ ಮಠ, ಮಂದಿರದ ಪರಂಪರೆಯನ್ನು ನಾವು ಮರೆಯುತ್ತಿದ್ದೇವೆ. ಅದಕ್ಕೆ ಎಷ್ಟೇ ಆಸ್ತಿ ಇದ್ದರೂ ಸಮಸ್ಯೆಯಿಂದ ಮುಕ್ತಿ ಹೊಂದಲು ಸಾಧ್ಯವಾಗುತ್ತಿಲ್ಲ. ಮಾನವನಿಗೆ ಸಂಸ್ಕೃತಿ, ಸಂಸ್ಕಾರ ಬರಬೇಕಾದರೇ ಮಠ, ಮಂದಿರಕ್ಕೆ ಹೋಗುವಂತೆ ಕಿವಿಮಾತು ಹೇಳಿದರು.ತಾಲೂಕು ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ, ಸಾಹಿತಿ ಶಂಕರ ಬೈಚಬಾಳ ಮಾತನಾಡಿ, ಮನೆಗಳೇ ಮಠಗಳಾಗಬೇಕೆಂದು ಶರಣರು ಕಂಡ ಕನಸು ಇಂದು ಈ ಮಠದಲ್ಲಿ ನಾ ಕಂಡಿರುವೆ. ಶ್ರೀಮಠವು ಪ್ರಶಸ್ತಿಯನ್ನು ಆಶೀರ್ವಾದ ರೂಪದಲ್ಲಿ ನೀಡಿ ತಾಯಿ ಮತ್ತು ಮಕ್ಕಳ ಅನುಭವವನ್ನು ನೀಡುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಪಾವನ ಸಾನ್ನಿಧ್ಯವನ್ನು ಶ್ರೀಮಠದ ಪ್ರಭುಲಿಂಗ ಶರಣರು ಹಾಗೂ ಸಾನ್ನಿಧ್ಯವನ್ನು ಸಿಂದಗಿ ಆದಿಶೇಷ ಸಂಸ್ಥಾನ ಮಠದ ನಾಗರತ್ನ ವೀರರಾಜೇಂದ್ರ ಮಹಾಸ್ವಾಮಿಗಳು, ತಾರಾಪುರ ಹಾಜಿ ಮಲಂಗ ದರ್ಗಾದ ಮುರುಳಿ ಮುತ್ಯಾ ವಹಿಸಿಕೊಂಡಿದ್ದರು. ರಾಂಪುರ ಪಿ.ಎ ಷಾ ಹುಸೇನ್ ಬಾಷಾ ದರ್ಗಾದ ಅಮೀರಹ್ಮಜಾ ಮುಜಾವರ ನೇತೃತ್ವ ವಹಿಸಿದ್ದರು.ಈ ವೇಳೆ ಕನ್ನಡ ಜನಪದ ಪರಿಷತ್ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಪಡಗಾನೂರ, ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಬಿ.ಉಕ್ಕಲಿ ಲಕ್ಷ್ಮೀ ಪೊಲೀಸ್ ಪಾಟೀಲ್ ಸೇರಿದಂತೆ ಅನೇಕರಿಗೆ ಬಸವಶ್ರೀ ರಕ್ಷೆ ನೀಡಿ ಸನ್ಮಾನಿಸಿ, ಗೌರವಿಸಲಾಯಿತು. ಲಿಂಗಾಯತ ಮಹಾಮಠದ ಟ್ರಸ್ಟ್ ಕಮಿಟಿಯ ನೂತನ ಸಲಹಾ ಸಮಿತಿಯ ಸದಸ್ಯರ ಪದಗ್ರಹಣವು ಜರುಗಿತು.ಕಾರ್ಯಕ್ರಮದಲ್ಲಿ ಆನಂದ ಶಾಬಾದಿ, ಮಲ್ಲಿಕಾರ್ಜುನ ಬಿರಾದಾರ, ಶಂಕರ ಬೈಚಬಾಳ, ದೇವರ ಹಿಪ್ಪರಗಿ ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಗುರುರಾಜ ಆಕಳವಾಡಿ, ಮಲಕಪ್ಪ ತಳವಾರ, ಶೌಕತಲಿ ಮುಜಾವರ, ಸುನಂದಾ ಯಂಪುರೆ, ಪಂಡಿತ ಯಂಪುರೆ, ಅಂಬಿಕಾ ಪಾಟೀಲ್, ಮೇಘಾ ಗುಣಾರಿ, ಸಂತೋಷಕುಮಾರ ಕುಂಬಾರ, ಶರಣಪ್ಪ ಹಡಪದ, ಅಮೃತ ಮರಬದ, ಗೊಲ್ಲಾಳಪ್ಪ ಚೌಧರಿ, ದತ್ತಾತ್ರೇಯ ಪಾಟೀಲ, ಸಂಗಣ್ಣ ಬ್ಯಾಕೋಡ, ಶರಣಪ್ಪ ಖಜೂರಗಿ, ಪುಂಡಲೀಕ ಬಡಿಗೇರ, ಸಿದ್ದರಾಮ ಪಟ್ಟಣಶೆಟ್ಟಿ, ಪ್ರಕಾಶ ಬಿರಾದಾರ, ಶಾಂತವ್ವ ಚಟ್ಟರಕಿ, ಗಿರಿಜಾ ಚೌಧರಿ, ರವಿ ಐರೋಡಗಿ, ಸಿದ್ದನಗೌಡ ಪಾಟೀಲ, ಶರಣಮ್ಮ ನಾಯಕ, ಚನ್ನಪ್ಪಗೌಡ ಹಚಡದ, ನಾಡಗೌಡ ಕಲಹಳ್ಳಿ, ಡಾ.ಶಿವಾನಂದ ಹೊಸಮನಿ, ನಾಗಿಣಿ ಹೊಸಮನಿ, ಶ್ರೀಮಂತ ಹಿರೇಗೌಡರ, ರಾಮನಗೌಡ ಅಸ್ಕಿ, ಗೋಲ್ಲಾಳಪ್ಪಗೌಡ ಯರಗಲ್, ಶಾಂತಪ್ಪ ಹಿಕ್ಕನಗುತ್ತಿ, ಎಂ.ಬಿ.ಅಲ್ದಿ, ಸಂಗಣ್ಣ ಬ್ಯಾಕೋಡ, ಮಲಕಣ್ಣ ತಳವಾರ, ಕೋರವಾರದ ರಮೇಶ ಶರಣರು ಸೇರಿದಂತೆ ಶ್ರೀಮಠದ ಭಕ್ತರು ಹಾಜರಿದ್ದರು.