ಕಲ್ಯಾಣ ಕರ್ನಾಟಕಕ್ಕೆ ನೀಡುವ ಸೌಲಭ್ಯಗಳಿಗೆ ಅಳವಡಿಸಿ ವಿಜಯಪುರ ಜಿಲ್ಲೆಯನ್ನು ಶೈಕ್ಷಣಿಕ, ಔದ್ಯೋಗಿಕ ಕ್ರಾಂತಿಗೆ ನಾಂದಿ ಹಾಡಬೇಕು. ಇಲ್ಲದಿದ್ದರೇ ಉಗ್ರವಾದ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಅನುಗೃಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ಡಾ.ಪ್ರಭುಗೌಡ ಬ ಲಿಂಗದಳ್ಳಿ (ಚಬನೂರ) ಎಚ್ಚರಿಕೆ ನೀಡಿದರು.
ಕನ್ನಡಪ್ರಭ ವಾರ್ತೆ ಸಿಂದಗಿ
ಕಲ್ಯಾಣ ಕರ್ನಾಟಕಕ್ಕೆ ನೀಡುವ ಸೌಲಭ್ಯಗಳಿಗೆ ಅಳವಡಿಸಿ ವಿಜಯಪುರ ಜಿಲ್ಲೆಯನ್ನು ಶೈಕ್ಷಣಿಕ, ಔದ್ಯೋಗಿಕ ಕ್ರಾಂತಿಗೆ ನಾಂದಿ ಹಾಡಬೇಕು. ಇಲ್ಲದಿದ್ದರೇ ಉಗ್ರವಾದ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಅನುಗೃಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ಡಾ.ಪ್ರಭುಗೌಡ ಬ ಲಿಂಗದಳ್ಳಿ (ಚಬನೂರ) ಎಚ್ಚರಿಕೆ ನೀಡಿದರು.ನಗರದ ಶ್ರೀ ಬಸವೇಶ್ವರ ವೃತ್ತದ ಬಳಿ ರೇ.ಚ.ರೆವಡಿಗಾರ ಪ್ರತಿಷ್ಠಾನ ನೇತೃತ್ವದಲ್ಲಿ 371ಜೆ ಹೋರಾಟ ಸಮಿತಿ ಕಳೆದ 21 ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಗೋಲಗೇರಿ, ದಸಂಸ, ಹನುಮಾನ ದೆವಸ್ಥಾನ ಸೇವಾ ಸಮಿತಿಯ ನಿವೃತ್ತ ನೌಕರರ ಸಂಘ ಬೆಂಬಲ ಸೂಚಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಮುಂದಿನ ಎಂತಹ ಹೋರಾಟಗಳಿಗೆ ದೇವರಹಿಪ್ಪರಗಿ ಮತಕ್ಷೇತ್ರದಿಂದ ಹೆಚ್ಚಿನ ಸಂಖ್ಯೆ ಕರೆ ತರುವ ಮೂಲಕ ಬೀದಿಗಿಳಿದು ಹೋರಾಟಕ್ಕೆ ಅಣಿಯಾಗೋಣ ಎಂದು ಕರೆ ನೀಡಿದರು.ಉಚ್ಚ ನ್ಯಾಯಾಧೀಕರಣ ಕಲಬುರ್ಗಿಯಲ್ಲಿರುವ ಹೈಕೋರ್ಟ್ಗೆ ಸೇರಿಸಿದ್ದಾರೆ. ವಿಜಯಪುರ ಜಿಲ್ಲೆ ಈಶಾನ್ಯ ಕರ್ನಾಟಕದಲ್ಲಿದೆ. ಡಾ.ಡಿ.ಎಂ.ನಂಜುಂಡಪ್ಪ ವರದಿಯಲ್ಲಿರುವ ಸಂವಿಧಾನದ 98 ತಿದ್ದುಪಡಿಯಲ್ಲಿ ಜಿಲ್ಲೆಯ ತಾಲೂಕುಗಳು ಅತೀ ಹಿಂದೂಳಿದ ಪ್ರದೇಶಗಳೆಂದು ಪರಿಗಣಿಸಿಲಾಗಿದ್ದರೂ 371 (ಜೆ) ಸೇರಿಲ್ಲವೆಂದರೇ ನಮ್ಮನ್ನು ಯಾವ ರೀತಿಯಲ್ಲಿ ತುಳಿದಿದ್ದಾರೆ ಎನ್ನುವುದಕ್ಕೆ ಇದುವೇ ಜೀವಂತ ಸಾಕ್ಷಿ ಎಂದು ಕಿಡಿಕಾರಿದರು.ದಲಿತ ಮುಖಂಡ ಹುಯೋಗಿ ತಳ್ಳೋಳ್ಳಿ ಮಾತನಾಡಿ, 2013ರಲ್ಲಿ ರಚನೆಯಾದ ಹೈದ್ರಾಬಾದ ಕರ್ನಾಟಕಕ್ಕೆ ನೀಡಿದ 371ಜೆ ಮಿಸಲಾತಿಯಲ್ಲಿ ವಿಜಯಪುರ ಜಿಲ್ಲೆಯನ್ನು ಸೇರಿಸಬೇಕಿತ್ತು. ಡಾ.ನಂಜುಂಡಪ್ಪ ವರದಿಯ ಪ್ರಕಾರ ಜಿಲ್ಲೆಯ ಎಲ್ಲ ಶಾಸಕರೊಳಗೊಂಡು ಜಿಲ್ಲಾ ಉಸ್ತುವಾರಿ ಸಚಿವರು ಚಳಿಗಾಲ ಅಧಿವೇಶನದಲ್ಲಿ ಈ ವಿಷಯದ ಕುರಿತು ಧ್ವನಿ ಎತ್ತಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.ಕೊರವಾರ ಗ್ರಾಮದ ಸಂಗಮೇಶ ಛಾಯಾಗೋಳ ಮಾತನಾಡಿ, ನಿಜಾಮರ ಕಾಲದಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ ಎಲ್ಲ ಕುರುಹುಗಳಿದ್ದರೂ ಡಾ.ನಂಜುಂಡಪ್ಪ ವರದಿ 371ಜೆ ಅನ್ವಯವಾಗುವ ಎಲ್ಲ ಅರ್ಹತೆಗಳು ನಮ್ಮಲ್ಲಿವೆ. ಹೋರಾಟದಿಂದ ಬಿಕ್ಷೆ ಕೇಳುತ್ತಿಲ್ಲ, ಹಕ್ಕು ಹೇಳುತ್ತಿದ್ದೇವೆ. ಅದು ಜಾರಿಯಾಗುವರೆಗೂ ಹೋರಾಟ ಕೈಬಿಡುವ ಮಾತೇ ಇಲ್ಲ. ಈ ಹೋರಾಟಕ್ಕೆ ಕೊರವಾರ ಗ್ರಾಮದ ಸಂಪೂರ್ಣ ಎಲ್ಲ ರೀತಿಯ ಬೆಂಬಲವಿದೆ ಎಂದರು.ಈ ವೇಳೆ ನಾಗಾವಿಯ ತಮ್ಮನಗೌಡ ಬಿರಾದಾರ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಶಿವು ಹತ್ತಿ, ದಸಂಸ ಜಿಲ್ಲಾ ಸಂಚಾಲಕ ಶ್ರೀಶೈಲ ಜಾಲವಾದಿ, ಬಗವಂತ ರೇವೂರ ವಕೀಲರು, ಆಕ್ಸಪರ್ಡ್ ಶಿಕ್ಷಣ ಸಂಸ್ಥೆಯ ಪ್ರಕಾಶ ಚೌದರಿ, ಪಿ.ಎಸ್.ಕಂಠಿಗೊಂಡ, ರವಿ ದೇವರಮನಿ, ಹನುಮಾನ ಸೇವಾ ಸಮಿತಿಯ ಬಿ.ಸಿ.ಹಿರೇಮಠ, ಶರಣಪ್ಪ ಸುಂಗಠಾಣ, ಎಸ್.ಎಲ್.ಪಾಟೀಲ, ಎಸ್.ಬಿ.ಮುರಗಾನೂರ, ಸಮಿತಿಯ ರಂಘನಾಥ ತೋರ್ಪೆ, ಪಂಡಿತ ಯಂಪೂರೆ, ದಾನಪ್ಪಗೌಡ ಚನ್ನಗೊಂಡ, ಗುರುರಾಜ ಪಡಶೆಟ್ಟಿ ಸೇರಿದಂತೆ ಅನೇಕರು ಮಾತನಾಡಿದರು.ಈ ಸಂದರ್ಭದಲ್ಲಿ ರಾಮಚಂದ್ರ ರಾಠೋಡ, ಬಿ.ಎಸ್.ಡಿಗ್ಗಿ, ಎ.ಎಸ್.ರುಕುಂಪುರ, ಜೆ.ಎ.ಬಜಂತ್ರಿ, ಎಚ್.ಎಂ.ಗುಡಿಮನಿ, ಹೋರಾಟದ ಸಮಿತಿಯ ಶಂಕರ ಮಲ್ಲೇದ, ರಂಘನಾಥ ತೋರ್ಫೆ, ಎಂ.ಎಂ.ಹಂಗರಗಿ, ಸಿದ್ದು ಕಡಗಂಚಿ, ಸಂಗಣ್ಣ ಬ್ಯಾಕೋಡ, ಆನಂದ ಶಾಬಾದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.