ಅಂತರ್‌ ಕಾಲೇಜು ಹಿಂದಿ ಸೆಮಿನಾರ್, ಭಾಷಾಂತರ ಸ್ಪರ್ಧೆ

| Published : Apr 09 2024, 01:48 AM IST

ಅಂತರ್‌ ಕಾಲೇಜು ಹಿಂದಿ ಸೆಮಿನಾರ್, ಭಾಷಾಂತರ ಸ್ಪರ್ಧೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆನರಾ ಬ್ಯಾಂಕ್ ಪ್ರಧಾನ ಕಚೇರಿ ಮತ್ತು ಕ್ರೈಸ್ಟ್ ಡೀಮ್ಡ್ ವಿಶ್ವವಿದ್ಯಾನಿಲಯದಿಂದ ‘ಅಂತರ ಕಾಲೇಜು ಹಿಂದಿ ಸೆಮಿನಾರ್ ಮತ್ತು ಭಾಷಾಂತರ ಸ್ಪರ್ಧೆ’ ನಡೆಯಿತು.

ಬೆಂಗಳೂರು: ಕೆನರಾ ಬ್ಯಾಂಕ್ ಪ್ರಧಾನ ಕಚೇರಿ ಮತ್ತು ಕ್ರೈಸ್ಟ್ ಡೀಮ್ಡ್ ವಿಶ್ವವಿದ್ಯಾನಿಲಯದಿಂದ ‘ಅಂತರ ಕಾಲೇಜು ಹಿಂದಿ ಸೆಮಿನಾರ್ ಮತ್ತು ಭಾಷಾಂತರ ಸ್ಪರ್ಧೆ’ ನಡೆಯಿತು.

ಮೊದಲ ಅಧಿವೇಶನದಲ್ಲಿ ಬ್ಯಾಂಕ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕ ಇ. ರಮೇಶ್ ಮಾತನಾಡಿ, ಸರ್ಕಾರಿ ಕಚೇರಿಗಳು, ಬ್ಯಾಂಕ್‌ ಹಾಗೂ ಉದ್ಯಮಗಳಲ್ಲಿ ಹಿಂದಿ ಮೂಲಕ ಉದ್ಯೋಗಾವಕಾಶಗಳು ಸಾಕಷ್ಟಿವೆ. ಹಿಂದಿಯನ್ನು ಭಾಷಾ ವಿಷಯವಾಗಿ ಅಧ್ಯಯನ ಮಾಡಿದಲ್ಲಿ ಉದ್ಯೋಗ ಪಡೆಯಬಹುದು ಎಂದು ವಿವರಿಸಿದರು.

ಎರಡನೇ ಅಧಿವೇಶನದಲ್ಲಿ ‘ಹಿಂದಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ವ್ಯಾಪಕವಾದ ಉದ್ಯೋಗಾವಕಾಶ’ ಕೆನರಾ ಬ್ಯಾಂಕ್‌ನ ಎಸ್‌ಎಂ ಮಯಾಂಕ್ ಪಾಠಕ್ ಮತ್ತು ಮೂರನೇ ಅವಧಿಯನ್ನು ಜೈನ್‌ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಭನ್ವರ್ ಸಿಂಗ್ ಶಕ್ತಾವತ್ ಅವರು ‘ಹಿಂದಿಯಲ್ಲಿ ಉನ್ನತ ಶಿಕ್ಷಣ ಮತ್ತು ಉದ್ಯೋಗದ ನಿರೀಕ್ಷೆಗಳು’ ವಿಷಯದ ಮೇಲೆ ನಡೆಸಿಕೊಟ್ಟರು.

ತಿರುಪತಿಯ ಎಸ್‌ವಿ ವಿಶ್ವವಿದ್ಯಾನಿಲಯದ ಡಾ.ರಾಮ್ ಪ್ರಕಾಶ್ ಮಾತನಾಡಿ, ಕ್ರೈಸ್ಟ್ ಡೀಮ್ಡ್ ವಿಶ್ವವಿದ್ಯಾನಿಲಯದ ಕಲೆ ಮತ್ತು ಮಾನವಿಕ ವಿಭಾಗದ ಡೀನ್ ಡಾ. ಜಾನ್ ಜೋಸೆಫ್ ಕೆನಡಿ ಪಿ. ಮಾತನಾಡಿದರು. ಪ್ರಧಾನ ಕಚೇರಿಯ ಹಿರಿಯ ವ್ಯವಸ್ಥಾಪಕ ಅಶೋಕ್ ಕುಮಾರ್ ವಂದಿಸಿದರು. ಕ್ರೈಸ್ಟ್ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಎಚ್‌ಒಡಿ ಡಾ. ಸೆಬಾಸ್ಟಿಯನ್ ಕೆ.ಎ. ಇದ್ದರು.