ಸಾರಾಂಶ
ಎರಡು ದಿನಗಳ ಕಾಲ ನಡೆಯುವ ಭ್ರಾಮರಿ ಯಕ್ಷ ಝೇಂಕಾರ ಆಹ್ವಾನಿತ ತಂಡಗಳ ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ನಡೆಯಿತು.
ಕನ್ನಡಪ್ರಭವಾರ್ತೆ ಮೂಲ್ಕಿ
ವಿದ್ಯಾರ್ಥಿಗಳು, ಯುವಜನರು ಸಮಗ್ರ ಕಲೆಯಾದ ಯಕ್ಷಗಾನದಲ್ಲಿ ಆಸಕ್ತರಾಗಿ ತೊಡಗಿಸಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ನಮ್ಮ ಪುರಾಣವನ್ನು ತಿಳಿಯುವ ಉತ್ತಮ ಅವಕಾಶ ಯಕ್ಷಗಾನದಲ್ಲಿದ್ದು ಅದರ ನೀತಿಗಳು ನಮ್ಮಲ್ಲಿ ಮಾನಸಿಕವಾದ ನೆಮ್ಮದಿ ಸ್ಥೈರ್ಯ ಕೊಡುತ್ತದೆ ಎಂದು ಕಟೀಲು ದೇವಳದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿ ಸಂಘದ ಸಹಕಾರದಲ್ಲಿ ಎರಡು ದಿನಗಳ ಕಾಲ ನಡೆಯುವ ಭ್ರಾಮರಿ ಯಕ್ಷ ಝೇಂಕಾರ ಆಹ್ವಾನಿತ ತಂಡಗಳ ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಕಟೀಲು ಕಾಲೇಜಿನ ಪ್ರಾಂಶುಪಾಲ ಡಾ. ವಿಜಯ್ ವಿ., ಎ. ಜೆ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಜಯಕುಮಾರ್, ಯಕ್ಷ ಝೇಂಕಾರದ ಸಂಘಟಕಿ ಆಶಾಲತಾ ಕೀರ್ತಿ ಶೆಟ್ಟಿ, ವಿದ್ಯಾರ್ಥಿ ಸಂಘದ ಕೆ.ದೀಪಕ್, ಕೃಷ್ಣರಾಜ ಐತಾಳ್, ಬಿ. ನಿಶಾ, ಪುಷ್ಪರಾಜ ಶೆಟ್ಟಿ ಮತ್ತಿತರರಿದ್ದರು. ಶುಕ್ರವಾರ ಸಂಜೆ ಸ್ಪರ್ಧೆಯ ಸಮಾರೋಪ ನಡೆಯಿತು.